Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ಜೂ.16 ರಂದು ನಗರಕ್ಕೆ ಸಿಎಂ ಸಂಚಾರ ಮಾರ್ಗದಲ್ಲಿ ಭಾರಿ ಬದಲಾವಣೆ : ಡಿಸಿ
ತಾಜಾ ಸುದ್ದಿ

ಜೂ.16 ರಂದು ನಗರಕ್ಕೆ ಸಿಎಂ ಸಂಚಾರ ಮಾರ್ಗದಲ್ಲಿ ಭಾರಿ ಬದಲಾವಣೆ : ಡಿಸಿ

Dinamaana Kannada News
Last updated: June 15, 2025 11:52 am
Dinamaana Kannada News
Share
Davanagere
ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ
SHARE

ದಾವಣಗೆರೆ (Davanagere) : ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್‍ನಿಂದ ಜೂ.16 ರಂದು ನಗರದ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಅವರು ಸೇರಿದಂತೆ ವಿವಿಧ ಗಣ್ಯರು ಭಾಗವಹಿಸುತ್ತಿದ್ದಾರೆ.

ದಾವಣಗೆರೆ ಜಿಲ್ಲಾ ವ್ಯಾಪ್ತಿಯ ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಮತ್ತು ವಿವಿಧ ಇಲಾಖಾ ಯೋಜನೆಗಳಡಿ ಫಲಾನುಭವಿಗಳಿಗೆ ಸವಲತ್ತು ವಿತರಣೆ ಹಾಗೂ ಬೃಹತ್ ವೇದಿಕೆ ಕಾರ್ಯಕ್ರಮ ಇರುವುದರಿಂದ ಸಾರ್ವಜನಿಕ ಹಿತದೃಷ್ಟಿಯಿಂದ ನಗರದ ಸುಗಮ ಸಂಚಾರಕ್ಕಾಗಿ ವಿವಿಧ ರಸ್ತೆ ಮಾರ್ಗ ಮತ್ತು ವಾಹನಗಳ ನಿಲುಗಡೆ ಸ್ಥಳ ಬದಲಾಯಿಸಿ ಜಿಲ್ಲಾ ದಂಡಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಆದೇಶಿಸಿದ್ದಾರೆ.

ಕೆ.ಎಸ್.ಆರ್.ಟಿ.ಸಿ ಮತ್ತು ಖಾಸಗಿ ಬಸ್ಸುಗಳು ಸಂಚರಿಸುವ ಮಾರ್ಗ:  ಜೂನ್ 16 ರಂದು ಬೆಳಿಗ್ಗೆ 8 ರಿಂದ ಸಂಜೆ 5 ಗಂಟೆಯವರೆಗೆ ಹರಿಹರ ಕಡೆಯಿಂದ ದೊಡ್ಡಬಾತಿ ಮುಖಾಂತರ ದಾವಣಗೆರೆಗೆ ಹಳೇ ಪಿ.ಬಿ ರಸ್ತೆಯಲ್ಲಿ ಕಾರ್ಯಕ್ರಮಕ್ಕೆ ಬರುವ ವಾಹನಗಳನ್ನು ಹೊರತುಪಡಿಸಿ, ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ಹರಿಹರ ನಗರದಿಂದ ನೇರವಾಗಿ ಶಿವಮೊಗ್ಗ ಬೈಪಾಸ್ ಮೂಲಕ ಎನ್.ಹೆಚ್-48 ನಲ್ಲಿ ಚಲಿಸಿ ಬಾಡಾ ಕ್ರಾಸ್ ಮೂಲಕ ದಾವಣಗೆರೆ ನಗರಕ್ಕೆ ಆವರಗೆರೆ ಮಾರ್ಗವಾಗಿ ಬಂದು ನೂತನವಾಗಿ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಬಂದು ಅದೇ ಮಾರ್ಗದಲ್ಲಿ ಚಲಿಸಬೇಕು.

ಚಿತ್ರದುರ್ಗ ಮತ್ತು ಸಂತೆಬೆನ್ನೂರು ಮಾರ್ಗವಾಗಿ ಕಾರ್ಯಕ್ರಮಕ್ಕೆ ಕಾರ್ಯಕ್ರಮಕ್ಕೆ ಬರುವ ವಾಹನಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ಬಾಡಾ ಕ್ರಾಸ್ ಮೂಲಕ ದಾವಣಗೆರೆ ನಗರಕ್ಕೆ ಅವರಗೆರೆ ಮಾರ್ಗವಾಗಿ ಬಂದು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಬಂದು ಅದೇ ಮಾರ್ಗವಾಗಿ ಮರಳಿ ಬಾಡಾ ಕ್ರಾಸ್ ಮೂಲಕ ಸಂಚರಿಸುವುದು.

Read also : ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ : ಮುಖ್ಯೋಪಾಧ್ಯಾಯ ಆರ್.ಪ್ರಭು

ಜಗಳೂರು ಮತ್ತು ಕಂಚಿಕೆರೆ ಮಾರ್ಗವಾಗಿ ಕಾರ್ಯಕ್ರಮಕ್ಕೆ ಬರುವ ವಾಹನಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ನೇರವಾಗಿ ಅರಳಿಮರ ಮತ್ತು ವೆಂಕಟೇಶ್ವರ ಸರ್ಕಲ್‍ಗೆ ಆಗಮಿಸದೇ ಬೇತೂರು ಹಳ್ಳದ ಹತ್ತಿರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಬಂದು ಪ್ರಯಾಣಿಕರನ್ನು ಇಳಿಸಿ ಹಾಗೂ ಹತ್ತಿಸಿಕೊಂಡು ಅಲ್ಲಿಂದಲೇ ವಾಪಾಸ್ ಹೊರಡುವುದು.

ಚನ್ನಗಿರಿ ಕಡೆಯಿಂದ ಹದಡಿ ರಸ್ತೆ ಮೂಲಕ ವಾಹನಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ಹದಡಿ ಅಂಡರ್ ಪಾಸ್ ಮೂಲಕ ಹದಡಿ ರಸ್ತೆಯ ಮಾಗನೂರು ಬಸಪ್ಪ ಮೈದಾನದಲ್ಲಿ ಪ್ರಯಾಣಿಕರನ್ನು ಇಳಿಸುವುದು ಮತ್ತು ಇಲ್ಲಿಂದಲೇ ವಾಪಸ್ ಹೋಗಬೇಕು.

ಎಲ್ಲಾ ತರಹದ ಭಾರಿ & ಲಘು ಗೂಡ್ಸ್ ವಾಹನಗಳು: ಎಲ್ಲಾ ತರಹದ ಭಾರಿ & ಲಘು ಗೂಡ್ಸ್ ವಾಹನಗಳು ದಾವಣಗೆರೆ ನಗರದ ಹಳೇ ಪಿ.ಬಿ ರಸ್ತೆಯ ಆಯುರ್ವೇದಿಕ್ ಕಾಲೇಜ್ ನಿಂದ ಡಿ.ಸಿ.ಎಂ ಅಂಡರ್ ಬ್ರಿಡ್ಜ್ ವರೆಗೆ ಹಾಗೂ ನಗರದ ಹದಡಿ ರಸ್ತೆಯಲ್ಲಿ ಐ.ಟಿ.ಐ ಕಾಲೇಜ್ ಸರ್ಕಲ್ ನಿಂದ ಜಯದೇವ ಸರ್ಕಲ್ ಕಡೆಗೆ ಚಲಾಯಿಸದಂತೆ ಹಾಗೂ ನಗರದ ಶಾಮನೂರು ರಸ್ತೆಯಲ್ಲಿ ಶಾಮನೂರು ಅಂಡರ್ ಬ್ರಿಡ್ಜ್ ನಿಂದ ಲಕ್ಷ್ಮೀ ಪ್ಲೋರ್ ಮಿಲ್ & ಶಾರದಾಂಭ ಸರ್ಕಲ್ ಕಡೆಗೆ ಚಲಾಯಿಸಬಾರದು.

ಖಾಸಗಿ ಬಸ್ ನಿಲ್ದಾಣದ ಮೂಲಕ ಕಾರ್ಯ ನಿರ್ವಹಿಸುತ್ತಿರುವ ಬಸ್‍ಗಳು ಈ ಬಸ್ ನಿಲ್ದಾಣದಿಂದ ಕಾರ್ಯ ನಿರ್ವಹಿಸದಂತೆ ಹಾಗೂ ಅವುಗಳು ಆ ದಿನ ಎ.ಪಿ.ಎಂ.ಸಿ & ಮಾಗನೂರು ಬಸಪ್ಪ ಮೈದಾನದಿಂದ ಕಾರ್ಯ ನಿರ್ವಹಿಸಬೇಕು.

ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರ ವಾಹನ: ಕಾರ್ಯಕ್ರಮದ ನಿಮಿತ್ತ ಆಗಮಿಸುವ ಎಲ್ಲಾ ಬಸ್ ಗಳು ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಹಾಗೂ ಅರುಣ ವೃತ್ತದಿಂದ ವಿನೋಬ ನಗರ 3 ನೇ ಮುಖ್ಯ ರಸ್ತೆಯ ಎಡಬಾಗದಲ್ಲಿ ಹಾಗೂ ನಗರದ ಪುಷ್ಪಾಂಜಲಿ  ಚಿತ್ರಮಂದಿರದಿಂದ ಈರುಳ್ಳಿ ಮಾರ್ಕೇಟ್ ವರೆಗೆ ರೈಲ್ವೆ ಹಳಿ ಪಕ್ಕದಲ್ಲಿನ ಪಾಕಿರ್ಂಗ್ ಸ್ಥಳದಲ್ಲಿ ಬಸ್‍ಗಳನ್ನು ನಿಲ್ಲಿಸಬೇಕು.

ಎಲ್ಲಾ ದ್ವಿಚಕ್ರ ವಾಹನಗಳು ದಾವಣಗೆರೆ ನಗರದ ಬೀರಲಿಂಗೇಶ್ವರ ದೇವಾಸ್ಥಾನದ ಆವರಣ ಹಾಗೂ ಆರ್.ಎಲ್. ಲಾ ಕಾಲೇಜ್ ಹಿಂಭಾಗದ ಮೈದಾನದಲ್ಲಿನ ಪಾಕಿರ್ಂಗ್ ಸ್ಥಳದಲ್ಲಿ ನಿಲ್ಲಿಸಬೇಕು. ನಾಲ್ಕು ಚಕ್ರದ ವಾಹನಗಳು ಅರುಣ ವೃತ್ತದ ಬಳಿ ಇರುವ ಹೊಳೆಹೊನ್ನೂರು ತೋಟದ ಖಾಲಿ ಜಾಗದಲ್ಲಿನ ಪಾಕಿರ್ಂಗ್ ಸ್ಥಳದಲ್ಲಿ ನಿಲ್ಲಿಸಬೇಕು ಎಂದು ತಿಳಿಸಿದ್ದಾರೆ.

TAGGED:Davanagere NewsDinamana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article Davanagere ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ : ಮುಖ್ಯೋಪಾಧ್ಯಾಯ ಆರ್.ಪ್ರಭು
Next Article Davanagere Harihara | ಮಾನವರೆಲ್ಲರೂ ಪರಸ್ಪರ ಸಹೋದರರು ಅಕ್ಬರ್ ಅಲಿ ಉಡುಪಿ
Leave a comment

Leave a Reply Cancel reply

You must be logged in to post a comment.

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

Davanagere | ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಅನಾವರಣಕ್ಕೆ ಪೋಷಕರ ಪಾತ್ರ ಮುಖ್ಯ : ಸಿಸ್ಟರ್ ವೆನಿಸಾ

ದಾವಣಗೆರೆ (Davanagere) : ಪ್ರತಿಯೊಬ್ಬ ಮಕ್ಕಳಲ್ಲೂ ಒಂದೊಂದು ಬಗೆಯ ಪ್ರತಿಭೆ ಇರುತ್ತದೆ. ಅವರಲ್ಲಿ ಅಡಗಿರುವ ಸುಪ್ತ ಪ್ರತಿಭೆ ಅನಾವರಣಕ್ಕೆ ಮನೆಯಲ್ಲಿ…

By Dinamaana Kannada News

ಶೀಘ್ರವೇ ಸಮಸ್ಯೆಗೆ ಪರಿಹಾರ : ಪಾಲಿಕೆ ಆಯುಕ್ತರಾದ ರೇಣುಕಾ ಭರವಸೆ

ದಾವಣಗೆರೆ:  ತಾಲೂಕಿನ ಆವರಗೊಳ್ಳದಲ್ಲಿ ಮಹಾನಗರ ಪಾಲಿಕೆಯ ವತಿಯಿಂದ ನಿರ್ವಹಿಸುತ್ತಿರುವ ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಳಾಂತರಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆದ…

By Dinamaana Kannada News

ದಿನಮಾನ ಹೆಮ್ಮೆ : ಲೋಹಿಯಾ ಚನ್ನಬಸವಣ್ಣ

Kannada News | Dinamaanada Hemme  | Dinamaana.com | 07-07-2024 ದೃಶ್ಯಾನುಭೂತಿ ತಮ್ಮ ಮಾತುಗಳಲ್ಲಿ ಕಟ್ಟಿಕೊಡಬಲ್ಲರು (Lohia Channabasavanna)…

By Dinamaana Kannada News

You Might Also Like

Davanagere
ತಾಜಾ ಸುದ್ದಿ

Harihara | ಮಾನವರೆಲ್ಲರೂ ಪರಸ್ಪರ ಸಹೋದರರು ಅಕ್ಬರ್ ಅಲಿ ಉಡುಪಿ

By Dinamaana Kannada News
Davanagere
Blog

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ : ಮುಖ್ಯೋಪಾಧ್ಯಾಯ ಆರ್.ಪ್ರಭು

By Dinamaana Kannada News
davanagere
Blog

Davanagere | ಹಲ್ಲೆ ಮಾಡಿದ ಪ್ರಕರಣ: ಆರೋಪಿಗೆ 6 ತಿಂಗಳು ಕಾರಾಗೃಹ ಶಿಕ್ಷೆ

By Dinamaana Kannada News
Davanagere
Blog

ಸಚಿವರಿಂದ ಮಾವು-ಹಲಸು ಇತರೆ ಹಣ್ಣುಗಳು ಪ್ರದರ್ಶನದ ಪೋಸ್ಟರ್ ಬಿಡುಗಡೆ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?