ಮಲೇಬೆನ್ನೂರು : ಮಲೇಬೆನ್ನೂರು ಪುರಸಭೆ ಹಾಗೂ ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ ಡಯೇರಿಯಾ ಡೆಂಗ್ಯೂ ಹಾಗೂ ಚಿಕನ್ ಗುನ್ಯಾ ಖಾಯಿಲೆಗಳ ಹರಡುವಿಕೆ ಹಾಗೂ ಅದನ್ನು ತಡೆಗಟ್ಟುವಿಕೆ ಕುರಿತು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಲಾಯಿತು.
ಜಾಥಾ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಕೂಡ ಭಾಗವಹಿಸಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಿದ್ದು ವಿಶೇಷವಾಗಿತ್ತು.
ಜಾಥಾ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟು ಮಾತನಾಡಿದ ಮಲೇಬೆನ್ನೂರು ಪುರಸಭೆ ಮುಖ್ಯಾಧಿಕಾರಿ ಭಜಕ್ಕನವರ್, ಮಕ್ಕಳಿಗೆ ಸ್ವಚ್ಛತೆ ಬಗ್ಗೆ ಹಾಗೂ ರೋಗಗಳು ಹರಡುವ ರೀತಿಯ ಬಗ್ಗೆ ಮಾಹಿತಿ ನೀಡಿದರು.
ನಾವು ನಮ್ಮ ಪರಿಸರ ಸ್ವಚ್ಛವಾಗಿಟ್ಟುಕೊಂಡು ಸೊಳ್ಳೆಗಳು ಉತ್ಪತ್ತಿ ಆಗದ ರೀತಿ ನೋಡಿಕೊಂಡು ತ್ಯಾಜ್ಯ ವಸ್ತುಗಳನ್ನು ಕಚ್ಚಾ ಹಾಗೂ ಒಣಗಿದ ಕಸವಾಗಿ ಬೇರ್ಪಡಿಸಿ ಸಂಸ್ಕರಣೆ ಮಾಡುವುದರಿಂದ ಸೊಳ್ಳೆಗಳ ಉತ್ಪತ್ತಿ ಕಡಿಮೆಯಾಗಿ ರೋಗಗಳು ಕೂಡ ಕಡಿಮೆ ಆಗುತ್ತವೆ ಇದರಿಂದ ರೋಗಗಳ ಹರಡುವಿಕೆಯಿಂದ ನಾವು ತಡೆಗಟ್ಟಬಹುದು ಇದೊಂದು ನಾವು ಸ್ವಯಂ ಪ್ರೇರಿತವಾಗಿ ಸಮಾಜಕ್ಕೆ ನೀಡುವ ಸಣ್ಣ ಕೊಡುಗೆಯಾಗಿದೆ ಎಂದು ಹೇಳಿದರು.
ಜಾಥಾ ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯರಾದ ಸಾಬೀರ್ ಅಲಿ ಎ.ನಾಮಿನಿ ಸದಸ್ಯರಾದ ಬಸವರಾಜ್ ದೊಡ್ಮನಿ ಹಾಗೂ ಕಾಂಗ್ರೆಸ್ ಮುಖಂಡರಾದ ಗಂಗಾಧರ್ ಕೆ.ಪಿ. ಭಾನುವಳ್ಳಿ ಸುರೇಶ್, ವೈದ್ಯಾಧಿಕಾರಿ ಲಕ್ಷ್ಮೀ ದೇವಿ, ಪುರಸಭಾ ಸಿಬ್ಬಂದಿ ಶಿವರಾಜ್,ಅವಿನಾಶ್, ತಿಮ್ಮೇಗೌಡ,ಹಾಗೂ ಸಮುದಾಯ ಆರೋಗ್ಯ ಕೇಂದ್ರ ದ ಸಿಬ್ಬಂದಿ ರವೀಂದ್ರ, ಆಶಾ ಕಾರ್ಯಕರ್ತೆಯರು ಹಾಗೂ ಶ್ರೀ ಬೀರಲಿಂಗೇಶ್ವರ ಬಾಲಕರ ಹಾಗೂ ಬಾಲಕಿಯರ ಪ್ರೌಢಶಾಲಾ ಮಕ್ಕಳು ಭಾಗವಹಿಸಿದ್ದರು.