ಹರಿಹರ (Harihara): ತಾಲೂಕು ಹಳ್ಳಿಹಾಳ್ ಮಟ್ಟಿಕ್ಯಾಂಪ್ ಗ್ರಾಮದಲ್ಲಿ ಮನೆ ಕಳ್ಳತನ ಮಾಡಿದ್ದ ಆರೋಪಿ ಯನ್ನು ಮಲೆಬೆನ್ನೂರು ಪೊಲೀಸರು ಬಂಧಿಸಿದ್ದಾರೆ.
ಮಂಜುನಾಥ ಬಂಧಿತ ಆರೋಪಿ.
ಬಂಧಿತನಿಂದ ರೂ 1,98,000/- ಮೌಲ್ಯದ ಒಟ್ಟು 38 ಗ್ರಾಂ ತೂಕದ ಬಂಗಾರದ ಆಭರಣಗಳು, ಮತ್ತು 23500/- ರೂ ನಗದು ಹಣ ಹಾಗೂ ಕೃತ್ಯಕ್ಕೆ ಉಪಯೋಗಿಸಿದ್ದ 2,50,000/- ರೂ ಬೆಲೆಬಾಳುವ ಕೆ.ಎ17.ಎಎ.3515 ನೇ ಟಾಟಾ ಕಂಪನಿಯ ಮಿನಿ ಗೂಡ್ಸ ವಾಹನವನ್ನು ಅಮಾನತ್ತು ಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
18-12-2024 ರಂದು ಕವಿತಾ ಗಂಡ ಲೇ|| ಶಿವಕುಮಾರ್ ಮನೆಯಲ್ಲಿ ಒಟ್ಟು 80 ಗ್ರಾಂ ತೂಕ 04 ಲಕ್ಷ ರೂ ಬೆಲೆ ಬಾಳುವ ಬಂಗಾರದ ಆಭರಣಗಳು ಮತ್ತು 40,000/- ರೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ದಾಖಲಿಸಿದ್ದರು.
ಪ್ರಕರಣದ ಆರೋಪಿತರನ್ನು ಹಾಗೂ ಸ್ವತ್ತನ್ನು ಪತ್ತೆ ಮಾಡಲು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ್ ಎಂ ಸಂತೋಷ , ಜಿ. ಮಂಜುನಾಥ ಹಾಗೂ ದಾವಣಗೆರೆ ಗ್ರಾಮಾಂತರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಬಿ.ಎಸ್ ಬಸವರಾಜ ಮಾರ್ಗದರ್ಶನದಲ್ಲಿ ಹರಿಹರ ವೃತ್ತ ನಿರೀಕ್ಷಕ ಸುರೇಶ ಸಗರಿ ರವರ ನೇತೃತ್ವದಲ್ಲಿ ಮಲೆಬೆನ್ನೂರು ಠಾಣೆಯ ಪ್ರಭು ಡಿ. ಕೆಳಗಿನಮನಿ ಪಿ.ಎಸ್.ಐ (ಕಾ-ಸು), ಎಸ್.ಬಿ. ಚಿದಾನಂದಪ್ಪ ಪಿ.ಎಸ್.ಐ (ತನಿಖೆ) ಹಾಗೂ ಸಿಬ್ಬಂದಿಗಳ ತಂಡ ಆರೋಪಿಯನ್ನುಯ ಬಂಧಿಸಿದ್ದಾರೆ.
ಕಳ್ಳತನ ಪ್ರಕರಣ ಸಿಪಿಐ ಸುರೇಶ ಸಗರಿ, ಮಲೆಬೆನ್ನೂರು ಠಾಣೆಯ ಪಿ.ಎಸ್.ಐ ಪ್ರಭು.ಡಿ. ಕೆಳಗಿನಮನಿ (ಕಾ-ಸು) ಎಸ್.ಬಿ ಚಿದಾನಂದಪ್ಪ ಪಿ.ಎಸ್.ಐ (ತನಿಖೆ) ಎ.ಎಸ್.ಐ. ಮಹಮದ್ ಇಲಿಯಾಸ್, ಸಿಬ್ಬಂದಿಯವರಾದ ಪೈರೋಜ್ ಖಾನ್, ಲಕ್ಷ್ಮಣ, ವೆಂಕಟರಮಣ, ವಿನಾಯಕ, ಮಲ್ಲಿಕಾರ್ಜುನ, ವಿರೇಶ, ಅನ್ಸರ್, ವಿಜಯ್, ಮುರುಳಿಧರ, ರಾಜಪ್ಪ ರವರ ತಂಡವನ್ನು ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.