ದಾವಣಗೆರೆ : ಶಿಕ್ಷಣದಿಂದ ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣವಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ ತಿಳಿಸಿದರು.
ಗೃಹ ಕಚೇರಿಗೆ ಬುಧವಾರ ಆಗಮಿಸಿದ ಸಾರ್ವಜನಿಕರುಗಳ ಕುಂದುಕೊರತೆಗಳನ್ನು ಆಲಿಸಿ ಸೂಕ್ತ ಕ್ರಮಕ್ಕಾಗಿ ಅಧಿಕಾರಿಗಳಿಗೆ ತಿಳಿಸಿ ಮಾತನಾಡಿದರು.
ಶಿಕ್ಷಣದಿಂದ ಮಾತ್ರ ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಮಿಸಲು ಸಾಧ್ಯವಾಗಿದ್ದು, ಜ್ಞಾನವಂತರಾಗಲು ಶಿಕ್ಷಣ ಪಡೆಯುವುದು ಅಗತ್ಯ. ಪೋಷಕರು ಮಕ್ಕಳನ್ನು ಶಿಕ್ಷಣವಂತರನ್ನಾಗಿಸಿ, ಅವರ ಮುಂದಿನ ಭವಿಷ್ಯಕ್ಕೆ ಮಾರ್ಗದರ್ಶಕರಾಗಿ ಎಂದರು.
Read also : ಚಿಕ್ಕಜಾಜೂರು | ವಿದ್ಯುತ್ ಅವಘಡ: ಮೂವರ ದುರ್ಮರಣ
ರೈತರು ದೇಶದ ಬೆನ್ನೆಲುಬಾಗಿದ್ದು ಗೃಹ ಕಚೇರಿಗೆ ಸಮಸ್ಯೆಗಳನ್ನೊತ್ತು ಬಂದ ಅನ್ನದಾತರ ಅಳಲನ್ನು ಸಚಿವರು ಆಲಿಸಿ ಜಿಲ್ಲೆಯಲ್ಲಿನ ಕೃಷಿ ಚಟುವಟಿಕೆಗಳ ಮಾಹಿತಿಯನ್ನು ಪಡೆದರು.
ಪಾಲಿಕೆ ವ್ಯಾಪ್ತಿಯ ವಾರ್ಡ್ ಗಳು, ಉತ್ತರ ಹಾಗೂ ದಕ್ಷಿಣ ಕ್ಷೇತ್ರದ ವ್ಯಾಪ್ತಿಯ ನಗರ ಮತ್ತು ಗ್ರಾಮಾಂತರ ಭಾಗದ ಕುಂದುಕೊರತೆಗಳನ್ನು ಆಲಿಸಿದ ಸಚಿವರು, ಪಕ್ಷದ ಮುಖಂಡರು ಹಾಗೂ ಅಧಿಕಾರಿಗಳು ಕುದ್ದಾಗಿ ಸಮಸ್ಯೆಗಳಿರುವ ಸ್ಥಳಗಳಿಗೆ ಭೇಟಿ ನೀಡಿ ಕೊರತೆಗಳ ನಿವಾರಣೆಗೆ ಸೂಚಿಸಿದರು.
ಈ ವೇಳೆ ಗೃಹ ಕಚೇರಿಗೆ ಆಗಮಿಸಿದ ವಿವಿಧ ಸಂಘ- ಸಂಸ್ಥೆಯವರು ತಮ್ಮ ತಮ್ಮ ಕಾರ್ಯಕ್ರಮಗಳಿಗೆ ಸಚಿವರನ್ನು ಆಹ್ವಾನಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ವಿವಿಧ ವಿಭಾಗಗಳ ಮುಖಂಡರುಗಳು, ಕಾರ್ಯಕರ್ತರುಗಳು ಉಪಸ್ಥಿತರಿದ್ದರು.