ದಾವಣಗೆರೆ (Davanagere) : ಕೊಂಡಜ್ಜಿಯಲ್ಲಿರುವ ಪೊಲೀಸ್ ಪಬ್ಲಿಕ್ ಶಾಲೆಗೆ ನುರಿತ ಸ್ನಾತಕೋತ್ತರ ಹಾಗೂ ಸ್ನಾತಕ ಶಿಕ್ಷಕರನ್ನು ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ತಿಳಿಸಿದ್ದಾರೆ.
ಈ ಶಾಲೆಯನ್ನು ಕರ್ನಾಟಕ ರಾಜ್ಯ ಪೊಲೀಸ್ ಕಲ್ಯಾಣ, ಶಿಕ್ಷಣ ಟ್ರಸ್ಟ್, ಪೂರ್ವ ವಲಯ ದಾವಣಗೆರೆ ಇವರಿಂದ ಪೊಲೀಸ್ ಪಬ್ಲಿಕ್ ಸ್ಕೂಲ್ ಸಿಬಿಎಸ್‍ಇ ಪಠ್ಯಕ್ರಮದ ಶಾಲೆ ನಡೆಸಲಾಗುತ್ತಿದೆ. ಇಲ್ಲಿ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳ ಮಕ್ಕಳು ಹಾಗೂ ಇತರೆ ಸಾರ್ವಜನಿಕ ಮಕ್ಕಳಿಗೆ ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತದೆ.
ಈ ಶಾಲೆಗೆ ಅಗತ್ಯವಿರುವ ಪಿಜಿಟಿ ಇಂಗ್ಲೀಷ್ ಶಿಕ್ಷಕರ 1 ಹುದ್ದೆಗೆ ಎಂಎ.ಬಿ.ಇಡಿ, ಪಿಜಿಟಿ ಗಣಿತ ಶಿಕ್ಷಕರ 1 ಹುದ್ದೆಗೆ ಎಂ.ಎಸ್ಸಿ, ಬಿ.ಇಡಿ, ಪಿಜಿಟಿ ವಿಜ್ಞಾನ ಶಿಕ್ಷಕರ 2 ಹುದ್ದೆಗಳಿಗೆ ಎಂಎಸ್ಸಿ, ಬಿಇಡಿ ಸಿಬಿಝಡ್, ಟಿಜಿಟಿ ಸಮಾಜ ವಿಜ್ಞಾನ 1 ಹುದ್ದೆಗೆ ಎಂ.ಎ. ಬಿ.ಇಡಿ, ಕನ್ನಡ ಪಿಜಿಟಿ 1 ಹುದ್ದೆಗೆ ಎಂಎ, ಬಿ.ಇಡಿ, ಹಿಂದಿ 2 ಹುದ್ದೆ ಬಿ.ಎ, ಎಂ.ಎ ಬಿ.ಇಡಿ, ದೈಹಿಕ ಶಿಕ್ಷಕ 1 ಹುದ್ದೆ ಬಿಪಿಇಡಿ, ಎಂ.ಪಿ.ಇಡಿ, ಕಂಪ್ಯೂಟರ್ ಸೈನ್ಸ್ 1 ಬಿಸಿಎ, ಬಿ.ಟೆಕ್, ಬಿ.ಎಸ್ಸಿ ಕಂಪ್ಯೂಟರ್ ವಿದ್ಯಾರ್ಹತೆ, ಕಚೇರಿ ಸಿಬ್ಬಂದಿ 1 ಹುದ್ದೆಗೆ ಯಾವುದೇ ಪದವಿ ಜೊತೆಗೆ ಕಂಪ್ಯೂಟರ್ ತರಬೇತಿ ಹೊಂದಿರಬೇಕು.
Read also : Channagiri | ಕೊಲೆ ಪ್ರಕರಣ : ಆರೋಪಿಗೆ ಜೀವಾವಧಿ ಶಿಕ್ಷೆ
ಈ ಹುದ್ದೆಗಳಿಗೆ ಇಂಗ್ಲೀಷ್ ಜ್ಞಾನವುಳ್ಳವರಾಗಿದ್ದು ಸಂವಹನ ಹಾಗೂ ಬರವಣಿಗೆಯಲ್ಲಿ ಉತ್ತಮ ಕೌಶಲ್ಯತೆ ಹೊಂದಿರಬೇಕು. ನಿಯಮಾವಳಿ ರೀತ್ಯ ವೇತನ ಜೊತೆಗೆ ಇಪಿಎಫ್, ಇಎಸ್‍ಐ ಸೌಲಭ್ಯವಿರುತ್ತದೆ. ಆಸಕ್ತರು ತಮ್ಮ ಸ್ವವಿವರದ ದಾಖಲೆಗಳನ್ನು ಪೊಲೀಸ್ ಪಬ್ಲಿಕ್ ಸ್ಕೂಲ್, ಕೊಂಡಜ್ಜಿಗೆ ಅಥವಾ ಮೇಲ್;pprsdavanagere@ksp.gov.in