Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ರಾಜಕೀಯ > Political analysis | ಡಿಕೆಶಿಗೆ ಮಾತ್ರ ಸಿಎಂ ಹುದ್ದೆಯ ಛಾನ್ಸು?
ರಾಜಕೀಯ

Political analysis | ಡಿಕೆಶಿಗೆ ಮಾತ್ರ ಸಿಎಂ ಹುದ್ದೆಯ ಛಾನ್ಸು?

Dinamaana Kannada News
Last updated: September 9, 2024 3:38 am
Dinamaana Kannada News
Share
DAVANAGERE
DAVANAGERE
SHARE

Kannada News | Dinamaana.com | 09-09-2024

ರಾಜ್ಯ ಬಿಜೆಪಿಯಲ್ಲಿ ತಳಮಳ ಸೃಷ್ಟಿಸಿದ್ದ ಬಸವನಗೌಡ ಪಾಟೀಲ್ ಆರು ತಿಂಗಳು ಮೌನವಾಗಿರಲು ನಿರ್ಧರಿಸಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರು ನೀಡಿದ ಸೂಚನೆಯೇ ಇದಕ್ಕೆ ಕಾರಣ.

ಇತ್ತೀಚೆಗೆ ದಿಲ್ಲಿ ದಂಡಯಾತ್ರೆ ಕೈಗೊಂಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಯತ್ನಾಳ್ ಅಂಡ್ ಗ್ಯಾಂಗಿನ ವಿರುದ್ದ ದೂರು ನೀಡಿದ್ದರಲ್ಲ? ಈ ಸಂದರ್ಭದಲ್ಲಿ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಚಾಟಿಸುವಂತೆ ಅವರು ಅಮಿತ್ ಷಾ ಮತ್ತು ನಡ್ಡಾ ಅವರನ್ನು‌ ಒತ್ತಾಯಿಸಿದ್ದರು.

ಪದೇ ಪದೇ ನಮ್ಮ ವಿರುದ್ದ ಆರೋಪ ಮಾಡುತ್ತಿರುವ ಯತ್ನಾಳ್ ನಮಗಷ್ಟೇ ಅಲ್ಲ,ಅ ಮೂಲಕ ಇಡೀ ಪಕ್ಷವನ್ನೇ ಮುಜುಗರಕ್ಕೆ ಸಿಲುಕಿಸಿದ್ದಾರೆ.ಇದೇ ಸ್ಥಿತಿ ಮುಂದುವರಿದರೆ ಪಕ್ಷ ಕಟ್ಟುವ ಕೆಲಸಕ್ಕೆ ಅಡ್ಡಿಯಾಗುತ್ತದೆ.ಹೀಗಾಗಿ ತಕ್ಷಣ ಅವರಿಗೆ ಗೇಟ್ ಪಾಸ್ ಕೊಡಿ ಅಂತ ಒತ್ತಾಯಿಸಿದ್ದರು.

ಆದರೆ, ಆ ಹೊತ್ತಿಗಾಗಲೇ ರಾಜ್ಯ ಬಿಜೆಪಿಯಲ್ಲಿ ತಲೆ ಎತ್ತಿದ್ದ ಭಿನ್ನಮತೀಯರ ಬಲ ಕಣ್ಣಿಗೆ ಕಾಣಿಸುವಷ್ಟು ಸ್ಪಷ್ಟವಾಗಿದ್ದರಿಂದ ಅಮಿತ್ ಷಾ,ನಡ್ಡಾ ಜೋಡಿ: ಉಚ್ಚಾಟನೆ ಎಲ್ಲ ಬೇಕಿಲ್ಲ.ಇನ್ನು ಆರೋಪ ಮಾಡುತ್ತಾ ತಿರುಗಬೇಡಿ ಅಂತ ಯತ್ನಾಳ್ ಅವರಿಗೆ ಸೂಚನೆ ಕೊಡುತ್ತೇವೆ ಅಂತ ಹೇಳಿ‌ ಕಳಿಸಿದ್ದರು. ಇದರ ಬೆನ್ನಲ್ಲೇ ಮೊನ್ನೆ ಯತ್ನಾಳ್ ಅವರನ್ನು ದಿಲ್ಲಿಗೆ ಕರೆಸಿಕೊಂಡ ನಡ್ಡಾ, ಪಕ್ಷದಲ್ಲಿ ಸಂಘರ್ಷ ಬೇಡ.ಹೀಗಾಗಿ ಸುಮ್ಮನಿರಿ ಎಂದರಂತೆ.

ಆದರೆ ಇದಕ್ಕೆ ಪ್ರತಿಕ್ರಿಯಿಸಿದ ಯತ್ನಾಳ್ ಅವರು,ಸಾರ್ ನಾವು ರಾಜ್ಯ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಹೋರಾಡಬೇಕೆಂದರೆ ಮೊದಲು ನಮ್ಮ ನಾಯಕರು ಸ್ವಚ್ಚವಾಗಿರಬೇಕು.ಇಲ್ಲದಿದ್ದರೆ ಯಾವ ಮುಖ‌ ಇಟ್ಟುಕೊಂಡು ಹೋರಾಡಲು ಸಾಧ್ಯ? ಇವರ ಮೇಲೇ ಭ್ರಷ್ಟಾಚಾರದ ಆರೋಪ ಇದ್ದರೆ ಕಾಂಗ್ರೆಸ್ ನಾಯಕರು ತಿರುಗೇಟು ಕೊಡುತ್ತಾರೆ.ಈಗ ಆಗುತ್ತಿರುವುದನ್ನು ನೋಡಿದರೆ ಇದು ಸ್ಪಷ್ಟವಾಗುತ್ತದೆ.

ಹೀಗಾಗಿ ನಾವೇನು ಹೇಳುತ್ತಿದ್ದೇವೆ.ಪಕ್ಷದ ರಾಜ್ಯಾಧ್ಯಕ್ಚ ಹುದ್ದೆಯಿಂದ ವಿಜಯೇಂದ್ರ ಅವರನ್ನು  ಕೆಳಗಿಳಿಸಿ.ಅವರ ಜಾಗಕ್ಕೆ ಸಿ.ಟಿ.ರವಿಯವರು ಬರಲಿ.ಇದೇ ರೀತಿ‌ ವಿಧಾನಸಭೆಯ ಪ್ರತಿಪಕ್ಷ ನಾಯಕನ ಸ್ಥಾನದಲ್ಲಿ ಕೆಲಸ ಮಾಡಲು ನನಗೆ ಅವಕಾಶ‌ ಕೊಡಿ.

ಇದಾದ ಮೇಲೆ ಕರ್ನಾಟಕದಲ್ಲಿ ಪಕ್ಷ ಸಂಘಟನೆಯ ಕೆಲಸ ಹೇಗಾಗುತ್ತದೆ ಅಂತ ನೀವೇ ನೋಡಿ ಅಂತ ವಿವರಿಸಿದ್ದಾರೆ. ಯಾವಾಗ ಯತ್ನಾಳ್ ಫೈರ್ ಬ್ರಾಂಡಿನ ತರ ಮಾತನಾಡಿದರೋ? ಆಗ ಅವರನ್ನು ಸಮಾಧಾನಿಸಿದ ನಡ್ಡಾ ಅವರು : ನೋ, ನೋ, ವಿಜಯೇಂದ್ರ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ನೇಮಿಸಿ ಇನ್ನೂ ಆರು ತಿಂಗಳಾಗಿದೆ ಅಷ್ಟೇ. ಹೀಗಾಗಿ ಆರು ತಿಂಗಳು‌ ಮೌನವಾಗಿರಿ. ಪರಿಸ್ಥಿತಿ ಏನಾಗುತ್ತದೋ ನೋಡೋಣ. ಆ ಮೇಲೆ‌ ಮುಂದಿನ ಮಾತು ಎಂದಿದ್ದಾರೆ.

ಯಾವಾಗ ನಡ್ಡಾ ಈ ಮಾತು ಹೇಳಿದರೋ? ಆಗ ಖುಷಿಯಾದ ಯತ್ನಾಳ್ ದಿಲ್ಲಿಯಿಂದ ವಾಪಸ್ ಬಂದಿದ್ದಾರೆ. ಈಗ ಅವರ ಕ್ಯಾಂಪಿನಲ್ಲಿ‌ ಹರಡಿರುವ ಸುದ್ದಿಯ ಪ್ರಕಾರ : ಆರು ತಿಂಗಳ ನಂತರ ವಿಜಯೇಂದ್ರ ಅಧ್ಯಕ್ಷ ಸ್ಥಾನದಿಂದ‌ ಇಳಿಯುತ್ತಾರೆ. ಅಶೋಕ್ ವಿಧಾನಸಭೆಯ ಪ್ರತಿಪಕ್ಷ ನಾಯಕನ ಸ್ಥಾನದಿಂದ ಕೆಳಗಿಳಿಯಲಿದ್ದಾರೆ.

ಅರ್ಥಾತ್, ಆರು ತಿಂಗಳಾಗುತ್ತಿದ್ದಂತೆ ಸಿ.ಟಿ.ರವಿ ಪಕ್ಷದ ಅಧ್ಯಕ್ಷ ಪಟ್ಟವನ್ನು ಅಲಂಕರಿಸಲಿದ್ದರೆ, ಯತ್ನಾಳ್‌ ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗುವುದು ಗ್ಯಾರಂಟಿ ಎಂಬುದು ಈ  ಕ್ಯಾಂಪಿನ ಸಂಭ್ರಮ. ಮುಂದೇನು ಕತೆಯೋ?

ಯಡಿಯೂರಪ್ಪ-1 ಯುಗದ ಕನಸು(BJP)

ಅಂದ ಹಾಗೆ ಕಾಂಗ್ರೆಸ್ ಪಕ್ಷದ ಬೆಳವಣಿಗೆಗಳನ್ನು ಗಮನಿಸಿದ ಕೆಲವರಿಗೆ ಕರ್ನಾಟಕದಲ್ಲಿ ಯಡಿಯೂರಪ್ಪ-1 ಯುಗ ಮರುಕಳಿಸುವ ಅನುಮಾನ ಕಾಡುತ್ತಿದೆ.

2008 ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಯಡಿಯೂರಪ್ಪ ಅವರು  2011 ರಲ್ಲಿ ರಾಜೀನಾಮೆ ನೀಡುವ ಅನಿವಾರ್ಯತೆ ಎದುರಾಯಿತು.

ಆಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ನೀಡಿದ ವರದಿ ಯಡಿಯೂರಪ್ಪ ಅವರ ಖುರ್ಚಿಗೆ ಮುಳುವಾಗಿದ್ದು ರಹಸ್ಯವೇನಲ್ಲ. ಹೀಗೆ ಅವತ್ತು ಯಡಿಯೂರಪ್ಪ  ರಾಜೀನಾಮೆ ಕೊಟ್ಟ ನಂತರ ಈ ಜಾಗಕ್ಕೆ ಜಗದೀಶ್ ಶೆಟ್ಟರ್ ಅವರನ್ನು ತರುವುದು ವರಿಷ್ಟರ ಬಯಕೆಯಾಗಿತ್ತು.

ಆದರೆ ಅಷ್ಟೊತ್ತಿಗಾಗಲೇ ಜಗದೀಶ್ ಶೆಟ್ಟರ್ ಅವರನ್ನು ಪಾರಂಪರಿಕ ವೈರಿ ಎಂದು ಪರಿಗಣಿಸಿದ್ದ ಯಡಿಯೂರಪ್ಪ ಇದನ್ನೊಪ್ಪದೆ ಡಿ.ವಿ.ಸದಾನಂದಗೌಡನ್ನು ತಂದು‌ ಕೂರಿಸಿದರು.

ಹೀಗವರು ಸದಾನಂದಗೌಡರನ್ನು ತಂದು ಕೂರಿಸುವುದರ ಹಿಂದೆ ಶೋಭಾ ಕರಂದ್ಲಾಜೆ, ಡಿ.ಎನ್.ಜೀವರಾಜ್ ಮತ್ತು ರೇಣುಕಾಚಾರ್ಯ ಅವರಂತವರ ಒತ್ತಾಸೆ ಇತ್ತು. ಮುಖ್ಯಮಂತ್ರಿಯಾಗುವವರು ಯಡಿಯೂರಪ್ಪ ನಿಷ್ಟರಾಗಿರಬೇಕು ಎಂಬ ಧೋರಣೆಯೇ ಇದಕ್ಕೆ ಕಾರಣ.

ಅರ್ಥಾತ್, ಅವತ್ತು ಹೈಕಮಾಂಡ್ ವರಿಷ್ಟರು ಬಯಸಿದರೂ ತಮ್ಮ ಕ್ಯಾಂಡಿಡೇಟ್ ಅನ್ನು ಮುಖ್ಯಮಂತ್ರಿ ಹುದ್ದೆಗೆ ತಂದು ಕೂರಿಸಲಾಗಲಿಲ್ಲ. ಇದಕ್ಕೆ ಯಡಿಯೂರಪ್ಪ ಅವರಿಗಿದ್ದ ಪವರ್ ಕಾರಣವಾಗಿತ್ತು.

ತದನಂತರದ ದಿನಗಳಲ್ಲಿ ಸದಾನಂದಗೌಡರು ನಿಮಗೆ ನಿಷ್ಟರಾಗಿಲ್ಲ ಅಂತ ಬೆಂಬಲಿಗರು ದೂರು ಹೊತ್ತು ತರತೊಡಗಿದಾಗ ಪುನ: ಯಡಿಯೂರಪ್ಪ ಕೆರಳಿದರು. ಹೀಗಾಗಿ ಹಿಂದೆ ತಾವೇ ವಿರೋಧಿಸುತ್ತಿದ್ದ ಜಗದೀಶ್ ಶೆಟ್ಟರ್ ಅವರ ಕೈ ಹಿಡಿದು ಸಿಎಂ  ಹುದ್ದೆಯ ಮೇಲೆ ತಂದು ಕೂರಿಸಿದರು.

ಹೀಗೆ ಅವತ್ತು ಬಿಜೆಪಿಯಲ್ಲಿ ಯಡಿಯೂರಪ್ಪ ಅವರಿಗೆ ಯಾವ ಪವರ್‌ ಇತ್ತೋ? ಅದೇ ಪವರ್ ಇವತ್ತು ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಅವರಿಗಿದೆ. ನಾಳೆ‌ ಮೂಡಾ ಪ್ರಕರಣ ತಮ್ಮ ಖುರ್ಚಿಗೆ ಆಪತ್ತು ತಂದರೆ ಸಿದ್ದರಾಮಯ್ಯ ಅವರು ಡಿಕೆಶಿ ಬದಲು ತಮಗೆ ಬೇಕಾದವರು ಸಿಎಂ ಹುದ್ದೆಯ ಮೇಲೆ ಕೂರಲಿ ಅಂತ ಬಯಸಬಹುದು ಎಂಬುದು ಕೆಲವರ ಅನುಮಾನ.

ಅಂದ ಹಾಗೆ ಸಿದ್ದರಾಮಯ್ಯ ಅವರು ಕೆಳಗಿಳಿಯುವುದು ಸುಲಭದ ಮಾತಲ್ಲವಾದರೂ ರಾಜ್ಯ ಕಾಂಗ್ರೆಸ್ ನಲ್ಲಿ ಮಾತ್ರ ಸಿಎಂ ಹುದ್ದೆಯ ಆಕಾಂಕ್ಷಿಗಳು ಹೆಚ್ಚುತ್ತಲೇ ಇದ್ದಾರೆ. ಸಹಜ ನ್ಯಾಯದಡಿ ತಮಗೆ ಸಿಎಂ ಪಟ್ಟ ದಕ್ಕುತ್ತದೆ ಎಂಬುದು ಡಿಸಿಎಂ ಡಿಕೆಶಿ ಲೆಕ್ಕಾಚಾರವಾಗಿದ್ದರೂ, ಶಾಸಕಾಂಗ ಪಕ್ಷದ ಬಲ ತಮ್ಮ ಜತೆಗಿರಲಿದೆ ಎಂಬ ನಂಬಿಕೆಯಿಂದ ಗೃಹ ಸಚಿವ ಜಿ.ಪರಮೇಶ್ವರ್, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಭಾರೀ ಕೈಗಾರಿಕಾ  ಸಚಿವ ಎಂ.ಬಿ.ಪಾಟೀಲ್ ರೇಸಿನಲ್ಲಿ ಕಾಣಿಸಿಕೊಂಡಿದ್ದಾರೆ.

ಮೂಲಗಳ ಪ್ರಕಾರ, ಸಿದ್ಧರಾಮಯ್ಯ ಕೆಳಗಿಳಿಯುವುದೇ ಆದರೆ ತಮಗಿರುವ ಬಲವನ್ನು ನಮಗೆ ವರ್ಗಾಯಿಸುತ್ತಾರೆ ಎಂಬುದು ಈ ನಾಯಕರ ಲೆಕ್ಕಾಚಾರ. ಕುತೂಹಲದ ಸಂಗತಿ ಎಂದರೆ ಇದನ್ನು ಬಲ್ಲ ಹಿರಿಯ ನಾಯಕ ಆರ್.ವಿ.ದೇಶಪಾಂಡೆ ಅವರು; ಸಿದ್ದರಾಮಯ್ಯ ಅವರು ಬಯಸಿದರೆ ನಾನು ಸಿಎಂ ಆಗಲು ಸಿದ್ದ ಎಂದಿದ್ದಾರೆ.

ಆದರೆ ಪ್ರಾಕ್ಟಿಕಲಿ ಇದು ಸಾಧ್ಯವೇ? ಅಂತ ನೋಡಿದರೆ ‌ಬಹುತೇಕ ಅಸಾಧ್ಯ ಎನ್ನಿಸುತ್ತದೆ.ಕಾರಣ?ಮೊದಲನೆಯದಾಗಿ ಸಿದ್ಧರಾಮಯ್ಯ ಅವರ ಪದಚ್ಯುತಿಯನ್ನು ಊಹಿಸಿಕೊಳ್ಳಲು ಕಾಂಗ್ರೆಸ್ ವರಿಷ್ಟರು ತಯಾರಿಲ್ಲ. ಎರಡನೆಯದಾಗಿ, ಮೂಡಾ ಪ್ರಕರಣದ ಹಿನ್ನೆಲೆಯಲ್ಲಿ  ನ್ಯಾಯಾಲಯದ ತೀರ್ಪು ಸಿದ್ದರಾಮಯ್ಯ ಅವರಿಗೆ ವಿರುದ್ದವಾದರೂ ಕಾನೂನು ಹೋರಾಟದ. ಮಾರ್ಗ ಇದ್ದೇ ಇದೆ.

Read also : Political analysis | ಯತ್ನಾಳ್ ಬಗ್ಗುತ್ತಿಲ್ಲ ವಿಜಯೇಂದ್ರ ಬಿಡುತ್ತಿಲ್ಲ

ಅದೇ ರೀತಿ ಕಾನೂನು ಹೋರಾಟ ಸಂಪೂರ್ಣ ವಿಫಲವಾಗಿ ಸಿದ್ದರಾಮಯ್ಯ ಅವರ ವಿರುದ್ದ ಮೊಕದ್ದಮೆ ದಾಖಲಾಗಿ ತನಿಖೆ ಆರಂಭವಾದರೂ ಅದು  ಮುಗಿಯಲು ಇನ್ನಷ್ಟು ಸಮಯ ಬೇಕು. ಮುಂದೆ ತನಿಖೆ ಮುಗಿದ ಮೇಲೆ ಸಿದ್ಧರಾಮಯ್ಯ ದೋಷಿ ಅಂತ ಅದು ಹೇಳಬೇಕೆಂದಿಲ್ಲ. ಬದಲಿಗೆ ಈ ವಿಷಯದಲ್ಲಿ ಸಿದ್ದರಾಮಯ್ಯ ತಪ್ಪಿತಸ್ಥರಲ್ಲ ಅಂತ ಹೇಳಬಹುದು.ಹೀಗಾಗಿ ಈ ಬಗ್ಗೆ ಎಷ್ಟೇ ಲೆಕ್ಕಾಚಾರ ಹಾಕಿದರೂ ಸಿದ್ದರಾಮಯ್ಯ ಅವರ ಖುರ್ಚಿಗೆ ತಕ್ಷಣ ಅಪಾಯ ಎದುರಾಗುತ್ತದೆ ಅಂತ ಊಹಿಸುವುದು ಪ್ರಾಕ್ಟಿಕಲ್ ಅಲ್ಲ.

ಎಲ್ಲಕ್ಕಿಂತ ಮುಖ್ಯವಾಗಿ ಮುಂದೆ ಪರಿಸ್ಥಿತಿ ವ್ಯತಿರಿಕ್ತವಾದರೂ ತಮ್ಮ ಜತೆ ಸಾಲಿಡ್ಡಾಗಿ ನಿಂತ ಕಾಂಗ್ರೆಸ್ ಹೈಕಮಾಂಡ್ ಅನ್ನು ಧಿಕ್ಕರಿಸಿ ತಮಗೆ ಬೇಕಾದವರನ್ನು ಸಿಎಂ ಮಾಡಲು ಸಿದ್ದರಾಮಯ್ಯ ಅಣಿಯಾಗುತ್ತಾರೆ ಅಂತ ಊಹಿಸುವುದೂ ಅಸಾಧ್ಯ.

ಹೀಗಾಗಿ ಇವತ್ತಿನ ಬೆಳವಣಿಗೆಗಳನ್ನು ಕಣ್ಣ ಮುಂದಿಟ್ಟುಕೊಂಡು ಯಡಿಯೂರಪ್ಪ-1 ಯುಗ ಮರುಕಳಿಸುತ್ತದೆ ಅನ್ನಲು ಕಾರಣಗಳೇ ಇಲ್ಲ. ಅರ್ಥಾತ್,ಕರ್ನಾಟಕದ  ರಾಜಕಾರಣದಲ್ಲಿ ಸಡನ್ ಸಿಎಂಗಳು‌ ಉದ್ಭವಿಸುವುದು ಕಷ್ಟ.

ಸಿಕ್ಕರೆ ಡಿಕೆಶಿಗಷ್ಟೇ ಛಾನ್ಸು?

ಅಂದ ಹಾಗೆ ಸಿಎಂ ಬದಲಾವಣೆ ಸಧ್ಯಕ್ಕಿಲ್ಲ ಎಂಬ ಮಾತುಗಳೇನೇ ಇರಲಿ, ಆದರೆ ದಿನ ಕಳೆದಂತೆ ಸಿಎಂ ಹುದ್ದೆಯ ರೇಸಿಗೆ ಖದರ್ ಬಂದಿರುವುದು ನಿಜ.

ಗೃಹ ಸಚಿವ ಪರಮೇಶ್ವರ್, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಹಿರಿಯ ನಾಯಕ ಆರ್.ವಿ.ದೇಶಪಾಂಡೆ ಅವರಲ್ಲದೆ ಈಗ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಕೂಡಾ ಫೀಲ್ಡಿಗಳಿದಿದ್ದಾರೆ.

ಇನ್ನು ಸರ್ವ ಸಮ್ಮತ ಅಭ್ಯರ್ಥಿಯಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೆಸರನ್ನು ಕೈ ಪಾಳಯವೇ ಫ್ರಂಟ್ ಲೈನಿಗೆ ತಂದು ನಿಲ್ಲಿಸಿದೆ. ಇಷ್ಟಾದರೂ ಸಿದ್ಧರಾಮಯ್ಯ ಕೆಳಗಿಳಿದ್ರೆ ಡಿಕೆಶಿಯೇ ಸಿಎಂ ಆಗಲಿದ್ದಾರೆ ಎಂಬ ಫುಲ್ಲು ವಿಶ್ವಾಸ ಅವರ ಕ್ಯಾಂಪಿನಲ್ಲಿದೆ.

ಅದರ ಪ್ರಕಾರ: ಕರ್ನಾಟಕದಲ್ಲಿ ಸಿಎಂ ಹುದ್ದೆ ಸಧ್ಯಕ್ಕೆ ತೆರವಾಗುವುದಿಲ್ಲ.ಹಾಗೊಂದು ವೇಳೆ ಅಂತಹ ಸಂದರ್ಭ ಬಂದರೆ ನಿಸ್ಸಂಶಯವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಲಿದ್ದಾರೆ.

ಕಾರಣ? ಕಳೆದ ವರ್ಷ ಪಕ್ಷ ಅಧಿಕಾರಕ್ಕೆ ಬಂದಾಗ ಸಿದ್ದರಾಮಯ್ಯ ಸಿಎಂ ಹುದ್ದೆಗೇರುವುದು ಹೇಗೆ ಸಹಜ ನ್ಯಾಯವಾಗಿತ್ತೋ?ಹಾಗೆಯೇ ಮುಂದಿನ ಕಂತಿನಲ್ಲಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುವುದೂ ಸಹಜ ನ್ಯಾಯ.

ಕಾರಣ? ಇವತ್ತು ಕರ್ನಾಟಕದಲ್ಲಿ ಪಕ್ಷ ಅಧಿಕಾರಕ್ಕೆ ಬರುವುದರ ಹಿಂದೆ ಸಿದ್ಧರಾಮಯ್ಯ ಅವರ ಶ್ರಮ ಹೇಗೆ ಕಾರಣವಾಗಿದೆಯೋ?ಡಿಕೆಶಿ ಶ್ರಮವೂ ಅಷ್ಟೇ ಕಾರಣವಾಗಿದೆ. ಅಂದ ಹಾಗೆ ಚುನಾವಣೆಯಲ್ಲಿ ಕಾಂಗ್ರೆಸ್ ಸೈನ್ಯವನ್ನು ಮುಂದೆ ನಡೆಸಲು ಸಿದ್ದರಾಮಯ್ಯ ಮತ್ತು ಡಿಕೆಶಿ ಇನ್ ವೆಸ್ಟ್ ಮಾಡಿದ್ದಾರೆ.ಅವರ ಪ್ರಯತ್ನದ ಫಲವಾಗಿಯೇ ಚುನಾವಣೆಯಲ್ಲಿ ಸ್ಪರ್ಧಿಸಿದ ಪಕ್ಷದ ಅಭ್ಯರ್ಥಿಗಳಿಗೆ ಸಾಲಿಡ್ ಪವರು ಸಿಕ್ಕಿದೆ.

ಉಳಿದಂತೆ ಕೆಲ ನಾಯಕರು ತಮ್ಮ ಕ್ಷೇತ್ರವನ್ನು ಹೊರತು ಪಡಿಸಿ,ಅಕ್ಕಪಕ್ಕದ ಕ್ಷೇತ್ರಗಳಿಗೆ ಇನ್ ವೆಸ್ಟ್ ಮಾಡಿದ್ದಾರಾದರೂ ಅದನ್ನು ಡಿಕೆಶಿ ಇನ್ ವೆಸ್ಟ್ ಮೆಂಟಿನ ಜತೆ ಹೋಲಿಸಲು ಸಾಧ್ಯವೇ ಇಲ್ಲ.

ಇನ್ನು ಸಿದ್ಧರಾಮಯ್ಯ ಅವರ ನಂತರ,ಬಲಾಬಲವನ್ನು ಆಧರಿಸಿ ಶಾಸಕಾಂಗ ನಾಯಕನನ್ನು ನಿರ್ಧರಿಸಲು ವರಿಷ್ಟರು ಬಯಸುವುದಿಲ್ಲ.ಹಾಗೆ  ಮಾಡುವುದು ಎಂದರೆ ಪಕ್ಷ ಹೋಳಾಗಲು,ಆ ಮೂಲಕ ಸರ್ಕಾರ ಉರುಳಲು ದಾರಿ ಮಾಡಿಕೊಟ್ಟಂತೆ ಎಂಬುದು ಅವರಿಗೆ ಗೊತ್ತಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಶಾಸಕಾಂಗ ನಾಯಕರನ್ನು ಆಯ್ಕೆ ಮಾಡುವಾಗ ನಾಯಕ ಪ್ಲಸ್ ಇನ್ ವೆಸ್ಟರ್ ಮುಖ್ಯ.1990 ರಲ್ಲಿ ವೀರೇಂದ್ರಪಾಟೀಲರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸಲಾಯಿತಲ್ಲ?ಅ ಸಂದರ್ಭದಲ್ಲಿ ಶಾಸಕಾಂಗದ ಬಲಾಬಲವನ್ನು ಪರಿಗಣಿಸಿದ್ದರೆ ಕೆ.ಹೆಚ್.ಪಾಟೀಲ್ ಮುಖ್ಯಮಂತ್ರಿಯಾಗುತ್ತಿದ್ದರು.

ಆದರೆ ಅವರ ಬದಲು ಪಕ್ಷದ ಹೈಕಮಾಂಡ್ ಬಂಗಾರಪ್ಪ ಅವರನ್ನು ಸಿಎಂ ಹುದ್ದೆಗೆ ತಂದು ಕೂರಿಸಿತು.ಕಾರಣ?ಕೆಲವೇ ದಿನಗಳಲ್ಲಿ ಎದುರಾಗಲಿದ್ದ ಲೋಕಸಭೆ ಚುನಾವಣೆಗೆ ದೊಡ್ಡ ಮಟ್ಟದ ಫಂಡು ಬೇಕಿತ್ತು.ಅದನ್ನು ಸಂಗ್ರಹಿಸಲು ಕೆ.ಹೆಚ್.ಪಾಟೀಲರಿಗಿಂತ ಬಂಗಾರಪ್ಪ ಬೆಟರ್ ಎಂಬುದು ಹೈಕಮಾಂಡ್ ಲೆಕ್ಕಾಚಾರವಾಗಿತ್ತು.

ಹೀಗಾಗಿಯೇ ಅವತ್ತು ಶಾಸಕಾಂಗ ಪಕ್ಷದಲ್ಲಿ ತಮ್ಮ ಬಲ ಸಾಬೀತುಪಡಿಸಲು ಅಣಿಯಾಗಿದ್ದ ಕೆ.ಹೆಚ್.ಪಾಟೀಲರಿಗೆ ಎಐಸಿಸಿ ಅದ್ಯಕ್ಷ ರಾಜೀವ್ ಗಾಂಧಿ ಫೋನು ಮಾಡಿ ತಮ್ಮ ಮನದಿಂಗಿತವನ್ನು ತೋಡಿಕೊಂಡರು.ಇವತ್ತು ನಾವು ಬಂಗಾರಪ್ಪ ಅವರನ್ನು ಸಿಎಂ ಹುದ್ದೆಗೆ ತರಲು ನಾವು ಬಯಸಿದ್ದೇವೆ. ದಯವಿಟ್ಟು ಸಹಕರಿಸಿ ಅಂತ ಅವರು ಹೇಳಿದಾಗ, ಸಹಕಾರ ಕೊಡಲು ಏಕೆ ಕೇಳುತ್ತೀರಿ ಸಾರ್.ಆರ್ಡರ್ ಮಾಡಿ. ನಿಮ್ಮ ಆರ್ಡರಿಗೆ  ನಾನು ತಲೆಬಾಗುತ್ತೇನೆ ಎಂದರು ಕೆ.ಹೆಚ್.ಪಾಟೀಲ್.

ಇದರರ್ಥ ಬೇರೇನೂ ಅಲ್ಲ.ನಾಯಕರಾಗುವವರು ಮುಂದಿನ ಜವಾಬ್ದಾರಿಗಳನ್ನು ಹೊರಲು ಶಕ್ತರಾಗಿರಬೇಕು ಎಂಬುದು ಯಾವುದೇ ಪಕ್ಷದ ವರಿಷ್ಟರ ಬಯಕೆ ಅನ್ನುವುದು ಡಿಕೆಶಿ ಕ್ಯಾಂಪಿನ ಮಾತು. ಅದರ ಪ್ರಕಾರ,ಸಿದ್ದರಾಮಯ್ಯ ಅವರ ನಂತರ ಸಿಎಂ ಹುದ್ದೆಯ  ಛಾನ್ಸು ಪಡೆಯುವವರಿದ್ದರೆ ಅದು ಒನ್ ಅಂಡ್ ಓನ್ಲಿ ಡಿಕೆಶಿ.

ಇಲ್ಲ, ನಾಯಕತ್ವದ ಆಯ್ಕೆಗೆ ಶಾಸಕಾಂಗದ ಬಲಾಬಲವೇ ಅಂತಿಮ ಎಂದು ಯಾರಾದರೂ ಪಟ್ಟು ಹಿಡಿದರೆ ಸೋನಿಯಾಗಾಂಧಿ ಅವರಾಗಲೀ, ರಾಹುಲ್ ಗಾಂಧಿ ಅವರಾಗಲೀ ಇದಕ್ಕೆ ಅವಕಾಶ ಕೊಡುವ ಸಾಧ್ಯತೆ  ಇಲ್ಲ.

ಒಂದು ವೇಳೆ ಇದನ್ನು ಧಿಕ್ಕರಿಸಿ ಸರ್ಕಾರ ಉರುಳಿದ್ರೂ ಪರವಾಗಿಲ್ಲ. ನಮ್ಮ ದಾರಿ ನಮಗೆ ಅಂತ ಯಾರಾದರೂ ಹೊರಟರೆ ಕೆಲ ದಿನಗಳ ಕಾಲ ಒಂದಷ್ಟು ಶಾಸಕರು ಬೆಂಬಲಿಸಬಹುದು. ಆದರೆ ಸರ್ಕಾರ ಉರುಳುವುದು ಗ್ಯಾರಂಟಿ ಅನ್ನಿಸಿದರೆ ತುಂಬ ಜನ ‘ಪೀಚೇ ಮುಡ್’ ಅಂತ ಕೂಗಿ ಹಿಂದೆ ತಿರುಗುತ್ತಾರೆ. ಹೈಕಮಾಂಡ್ ಜತೆ ನಿಲ್ಲುತ್ತಾರೆ ಎಂಬುದು ಡಿಕೆಶಿ ಕ್ಯಾಂಪಿನ ವರ್ಷನ್ನು.

ಅಂದ ಹಾಗೆ ಇವೆಲ್ಲವನ್ನೂ ಮೀರಿ ಪರ್ಯಾಯ ನಾಯಕತ್ವಕ್ಕೆ ಪೈಪೋಟಿ ನಡೆಯುತ್ತದಾ? ಗೊತ್ತಿಲ್ಲ. ಆದರೆ ಸಿದ್ಧರಾಮಯ್ಯ ಸಿಎಂ ಹುದ್ದೆಯಲ್ಲಿರುವ ತನಕ ಇಂತಹ ಸವಾಲು ಉದ್ಭವವಾಗುವುದಿಲ್ಲ.

ಆರ್.ಟಿ.ವಿಠ್ಠಲಮೂರ್ತಿ

TAGGED:Dinamana.comKannada NewsPolitical Analysisಕನ್ನಡ ಸುದ್ದಿದಿನಮಾನ.ಕಾಂರಾಜಕೀಯ ವಿಶ್ಲೇಷಣೆ
Share This Article
Twitter Email Copy Link Print
Previous Article davanagere Davanagere | ಕರ್ನಾಟಕ ರಾಜ್ಯ ಕುವೆಂಪು, ಅಂಬೇಡ್ಕರ್, ಬಸವಣ್ಣನವರ ಮಾನವೀಯ ಮೌಲ್ಯದ ನೆಲೆ: ಸಿಎಂ ಸಿದ್ದರಾಮಯ್ಯ
Next Article davanagere Davanagere | ಒಳಮೀಸಲಾತಿಗೆ ಜಾರಿಗೆ ಒತ್ತಾಯಿಸಿ ಸೆ.12 ರಂದು ಡಿಎಸ್ಸೆಸ್ ನಿಂದ ಬೃಹತ್ ತಮಟೆ ಚಳವಳಿ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ : ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

ದಾವಣಗೆರೆ ಜ.02 (Davanagere)-   ಪ್ರಸಕ್ತ ಸಾಲಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ  ವಿದ್ಯಾರ್ಥಿ ನಿಲಯಗಳ ಪ್ರವೇಶಾತಿಗೆ ಆನ್‍ಲೈನ್…

By Dinamaana Kannada News

ದಿನಮಾನ ಹೆಮ್ಮೆ : ಜನರ ನಂಬಿಕೆಯ ಲೋಕದೊಳಗೆ ಪ್ರವೇಶಿಸಿ ಬರೆವ ಕವಿ-ಡಿ.ರಾಮನಮಲಿ

Kannada News | Dinamaanada Hemme  | Dinamaana.com | 10-07-2024 ಕಳೆದ ಮೂರು ದಶಕಗಳಲ್ಲಿ ಭಾರತದ ಕೆಲ ಊರುಗಳಲ್ಲಿ…

By Dinamaana Kannada News

Davangere University | ತಂತ್ರಜ್ಞಾನ, ಸುಸ್ಥಿರತೆ ಅಳವಡಿಕೆಯಿಂದ ವಿಮೆ, ಬ್ಯಾಂಕಿಂಗ್ ಸುಭದ್ರ : ಪ್ರೊ.ಸಿ.ಎಂ.ತ್ಯಾಗರಾಜ್

ದಾವಣಗೆರೆ (Davangere)  : ಬ್ಯಾಂಕಿಂಗ್ ಮತ್ತು ವಿಮಾ ಕ್ಷೇತ್ರಗಳಲ್ಲಿ ಸುಸ್ಥಿರ ಅಭ್ಯಾಸಗಳನ್ನು ಸಂಯೋಜಿಸುವ ಮಾರ್ಗವು ಹಲವಾರು ಅಡಚಣೆಗಳಿಂದ ತುಂಬಿದ್ದರೂ, ಉತ್ತಮ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

Davanagere | ಜೂ.19 ರಂದು ಬೆ. 10 ರಿಂದ ಸ. 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ

By Dinamaana Kannada News
Davanagere
ತಾಜಾ ಸುದ್ದಿ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನ

By Dinamaana Kannada News
Davanagere
ತಾಜಾ ಸುದ್ದಿ

ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

By Dinamaana Kannada News
Davanagere
ತಾಜಾ ಸುದ್ದಿ

Davanagere | ಪ್ರಧಾನ ಮಂತ್ರಿ ಬಾಲ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?