ದಾವಣಗೆರೆ : ದೇಶ ಮತ್ತು ಯೋಧರ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿರುವುದು ಈ ದೇಶಕ್ಕೆ ಒಳ್ಳೆಯ ಬೆಳವಣಿಗೆಯಲ್ಲ. ಬಿಜೆಪಿ ಪಕ್ಷದವರು ತಮ್ಮ ಕೆಲಸದ ಮೂಲಕ ಜನರ ಬಳಿಗೆ ಹೋಗಬೇಕೆ ವಿನಃ ದೇಶ ಮತ್ತು ಯೋಧರ ವಿಚಾರವನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುವುದು ಬೇಡ ಎಂದು ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ ಶೆಟ್ಟಿ ಅಭಿಪ್ರಾಯ ಪಟ್ಟರು.
ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಪಕ್ಷದ ವತಿಯಿಂದ ದಿವಂಗತ ಎಸ್.ನಿಜಲಿಂಗಪ್ಪ ಬಡಾವಣೆಯಲ್ಲಿರುವ ಅಮರ್ ಜವಾನ್ ಪಾರ್ಕ್ ನಲ್ಲಿ ಹಮ್ಮಿಕೊಂಡಿದ್ದ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಯಾರೇ ಆಗಲಿ ದೇಶ ಮತ್ತು ಯೋಧರನ್ನು ಬಳಸಿಕೊಂಡು ರಾಜಕೀಯ ಮಾಡುವುದು ಒಳ್ಳೆಯದಲ್ಲ. ಈ ಹಿಂದೆ ಸಹ ಕಾಂಗ್ರೆಸ್ ಪಕ್ಷ ಅನೇಕ ಯುದ್ಧಗಳನ್ನು ಎದುರಿಸಿ ವಿಜಯೋತ್ಸವ ಆಚರಿಸಿದೆ ಆದರೆ ಎಂದಿಗೂ ಸಹ ಅದನ್ನು ರಾಜಕೀಯಕ್ಕೆ ಬಳಸಿಕೊಳ್ಳಲಿಲ್ಲ ಎಂದು ಉದಾಹರಣೆ ಸಮೇತ ವಿವರಿಸಿದರು.
ಇಂದು ಬಿಜೆಪಿ ಪಕ್ಷ ಭಾರತದ ಮೇಲೆ ಶತ್ರು ದೇಶಗಳಿಂದ ಆಗಿರುವ ದಾಳಿ ಬಗ್ಗೆ ದೇಶದ ನಾಗರಿಕರಲ್ಲಿ ತಪ್ಪು ಅಭಿಪ್ರಾಯ ಮೂಡಿಸಿ ತನ್ನ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದು ದೂರಿದರು.
Read also : BSFನಲ್ಲಿ 3588 ಹುದ್ದೆಗಳ ಭರ್ಜರಿ ನೇಮಕಾತಿ
ಮಾಜಿ ಉಪ ಮಹಾಪೌರ ಸೋಗಿ ಶಾಂತಕುಮಾರ್ ಮಾತನಾಡಿ, ದೇಶದ ವಿಚಾರದಲ್ಲಿ ಯೋಧರು ಎಂದಿಗೂ ಸಹ ಸುಮ್ಮನೆ ಕುಳಿತುಕೊಳ್ಳದೆ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದು ಅವರಿಗೆ ನಾವೆಲ್ಲರೂ ಬೆಂಬಲವಾಗಿ ನಿಲ್ಲೋಣ ಎಂದು ಕರೆ ನೀಡಿದರು.
ನಿವೃತ್ತ ಯೋಧರಾದ ಮಹೇಂದ್ರ ಕರ್, ಮಂಜ ನಾಯ್ಕ, ಸುರೇಶ್ ರಾವ್, ಸತ್ಯಪ್ರಕಾಶ್ , ಬೀರೇಶ್, ಶ್ರೀನಿವಾಸ್, ರೆಡ್ಡಿ, ಪಾಲಿಕೆ ಮಾಜಿ ಸದಸ್ಯರಾದ ಎ.ನಾಗರಾಜ್ ಜಿ.ಎಸ್. ಮಂಜುನಾಥ್, ಎಲ್. ಡಿ.ಗೋಣೆಪ್ಪ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್. ಮಲ್ಲಿಕಾರ್ಜುನ್, ಜಿಲ್ಲಾ ಪ.ಜಾತಿ ಘಟಕದ ಅಧ್ಯಕ್ಷ ಬಿ ಎಚ್ ವೀರಭದ್ರಪ್ಪ, ಕಾರ್ಯದರ್ಶಿ ಆರ್. ಹೆಚ್.ನಾಗಭೂಷಣ್, ಮಹಿಳಾ ಘಟಕದ ಅಧ್ಯಕ್ಷರಾದ ಅನಿತ ಬಾಯಿ ಮಾಲತೇಶ್, ಮಂಗಳಮ್ಮ, ಮಂಜುಳಮ್ಮ, ಕವಿತಾ ಚಂದ್ರಶೇಖರ್, ಶುಭ ಮಂಗಳ, ಸಲ್ಮಾ ಬಾನು, ಯಶೋಧಮ್ಮ, ಸುನಂದಮ್ಮ, ಉಮಾ ಕುಮಾರ್, ಜಯ ಶಾಮನೂರ, ಪದ್ಮ, ಪುಷ್ಪ, ಶ್ರೀನಿವಾಸ ಕಲ್ಪತರು, ಜಿಕ್ರಿಯಾ ಮತ್ತಿತರರು ಇದ್ದರು.