ಹರಪನಹಳ್ಳಿ : ಸುಪ್ರೀಂ ಕೋರ್ಟ್ ಆದೇಶದಂತೆ ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ಮಾದಿಗ ಮತ್ತು ಚಲವಾದಿ ಸಮಾಜಗಳಿಂದ ಬೃಹತ್ ಪ್ರತಿಭಟನೆ ನಡೆಸಿದರು.
ಇಲ್ಲಿನ ಪಟ್ಟಣದ ಹಿರೆಕೆರೆ ವೃತ್ತದಿಂದ ಐಬಿ ವೃತ್ತದವರೆಗೆ ಮೆರವಣೆಗೆ ನಡೆಸಿ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಮಾದಿಗ ಮತ್ತು ಚಲವಾದಿ ಸಮಾಜದ ಮುಖಂಡರು, ರಾಜಕೀಯವಾಗಿ ಶೈಕ್ಷಣಿಕವಾಗಿ ಉದ್ಯೋಗ ಮೀಸಲಾತಿ ಸೌಲಭ್ಯವನ್ನು ಜಾರಿಗೆ ತರಬೇಕು. ಸಾವಿರಾರು ವರ್ಷಗಳ ಶೋಷಣೆಗೆ ತುತ್ತಾಗಿರುವ ಅಸ್ಪೃಶ್ಯರ ಸಮಾಜಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ನ್ಯಾ. ಎ.ಜಿ ಸದಾಶಿವ ಆಯೋಗ ವರದಿ ಮತ್ತು ಕಾಂತರಾಜು ವರದಿ ಮತ್ತು ನ್ಯಾ. ನಾಗಮೋಹನ್ ದಾಸ್ ಆಯೋಗ ವರದಿ ಮತ್ತು ಮಾಧುಸ್ವಾಮಿ ಸಂಪುಟ ಉಪ ಸಮಿತಿ ಒಳ ಮೀಸಲಾತಿ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡಿತು. ಸುಪ್ರೀಂ ಕೋರ್ಟಿನ 7 ನ್ಯಾಯಾಧೀಶರ ಸಂವಿಧಾನಿಕ ಪೀಠವು ಒಳ ಮೀಸಲಾತಿ ಬೇಡಿಕೆ ಮೀಸಲಾತಿಯನ್ನು ಕಲ್ಪಿಸುವುದು ಸಂವಿಧಾನ ಬದ್ಧವಾಗಿದೆ ಎಂದು ಸುಪ್ರೀಂ ಕೋರ್ಟ್ ಐತಿಹಾಸಿಕವಾದ ತೀರ್ಪು ನೀಡಿದೆ.
ಒಳ ಮೀಸಲಾತಿ ಕಲ್ಪಿಸುವ ಅಧಿಕಾರ ಮತ್ತು ಹೊಣೆಗಾರಿಕೆಯನ್ನು ಆಯಾ ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ವಹಿಸಿದೆ. ಸಂವಿಧಾನ ತಿದ್ದುಪಡಿಯ ಅಗತ್ಯವಿಲ್ಲವೆಂದು ಉಲ್ಲೇಖಿಸಿದೆ ಸುಪ್ರೀಂ ಕೋರ್ಟಿನ ಪ್ರಸ್ತುತ ತೀರ್ಪನ್ನು ಮರು ಪರಿಶೀಲಿಸಲು ಸಲ್ಲಿಸಲಾಗಿದ್ದ ಮನವಿಗಳನ್ನು ನ್ಯಾಯ ಪೀಠ ವಜಾಗೊಳಿಸಿದೆ. ಅದ್ದರಿಂದ ರಾಜ್ಯ ಸರಕಾರ ಕೂಡಲೇ ಒಳಮೀಸಲಾತಿ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.
Read also : Davanagere | ಎರಡು ವರ್ಷದ ಬಿ.ಇಡಿ ಕೋರ್ಸಿಗಾಗಿ ಅರ್ಜಿ ಆಹ್ವಾನ
ಮಾದಿಗ ಸಮಾಜ ಹಾಗೂ ಚಲವಾದಿ ಸಮಾಜದ ಮುಖಂಡರುಗಳಾದ ಕಣಿವೆಹಳ್ಳಿ ಮಂಜುನಾಥ್. ಹಲಗೇರಿ ಮಂಜಪ್ಪ. ಗುಂಡುಗತ್ತಿ ಕೊಟ್ರಪ್ಪ.ಪ್ರತಾಪ್. ಹುಲಿಕಟ್ಟಿ ಚಂದ್ರಪ್ಪ. ಮೈದೂರು ರಾಮಣ್ಣ. ಕೇಡಿ ಮರಿಯಪ್ಪ ಕಬ್ಬಳ್ಳಿ ಪರಸಪ್ಪ. ಕೊಂಗನ ಹೊಸೂರು ಶಿವಣ್ಣ. ಅರಸೀಕೆರೆ ಮರಿಯಪ್ಪ. ಕಲ್ಲಳ್ಳಿ ಹನುಮಂತಪ್ಪ. ತೆಲಿಗಿ ಹನುಮಂತಪ್ಪ. ಬಂಗಿ ರಮೇಶ್. ಕೆ ರಮೇಶ್.ಪಕೀರಪ್ಪ. ಗೌರಿಹಳ್ಳಿ ಹುಚ್ಚಪ್ಪ. ಓ. ಮಾಂತೇಶ್, ನೀಲಗುಂದದ ಸಣ್ಣಪ್ಪ, ಸಿ ಚಂದ್ರಪ್ಪ. ಸವಣೂರ ಎಲ್ಲಪ್ಪ. ಪೃಥ್ವೇಶ್ವರ ಪ್ರಭು. ಹಾಗೂ ಸಮಾಜದ ಅನೇಕ ಮುಖಂಡರು ಸಾವಿರಾರು ಜನರು ಭಾಗವಹಿಸಿದ್ದರು.
ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಗಿರೀಶ್ ಬಾಬು ರವರಿಗೆ ಒಳ ಮೀಸಲಾತಿಯ ಮಾದಿಗ ಮತ್ತು ಚಲವಾದಿ ಸಮಾಜದವರು ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದರು.