ದಾವಣಗೆರೆ (Davanagere) : ವಕ್ಪ್ ತಿದ್ದುಪಡಿ ಮಸೂದೆ -2024 ವಿರೋಧಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾ ಸಮಿತಿ ಕಾರ್ಯಕರ್ತರು ನಗರದ ಅಕ್ತರ್ ರಜಾ ಸರ್ಕಲ್ ನಿಂದ ಮದೀನಾ ಆಟೋ ಸ್ಟ್ಯಾಂಡ್ ವರಗೆ ಪ್ರತಿಭಟನೆ ನಡೆಸಿದರು. ನಂತರ ಉಪವಿಭಾಗ ಅಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಜಿಲ್ಲಾ ಸಮಿತಿ ಸದಸ್ಯ ಸೈಯದ್ ಅಶ್ಫಾಖ್ ಮಾತನಾಡಿ, ವಕ್ಫ್ ಭೂಮಿ ಕಬಳಿಸುವ ಬಿಜೆಪಿಯ ಹುನ್ನಾರವನ್ನು ತಡೆಯಲು ಎಲ್ಲಾ ರೀತಿಯ ಹೋರಾಟ ಮಾಡಲು ಸಿದ್ದರಾಗಿದ್ದೇವೆ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫಯಾಜ್ ಅಹಮದ್ ಮಾತನಾಡಿ, ಬಿಜೆಪಿ ದ್ವೇಷ ರಾಜಕೀಯ ಭಾಗವಾಗಿ ಹಿಂದೂ ಬಾಂಧವರನ್ನು ಮುಸ್ಲಿಮರ ವಿರುದ್ಧ ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದೆ. ವಕ್ಫ್ ಆಸ್ತಿ ಕಬಳಿಸುವ ನಡೆ ಮುಸ್ಲಿಂ ದ್ವೇಷದ ಮುಂದುವರಿದ ಭಾಗವಾಗಿದೆ. ನಾವು ಭಾರತೀಯರು ನಿಮ್ಮ ದ್ವೇಷದ ರಾಜಕೀಯಕ್ಕೆ ಮೂರ್ಖರಾಗದೆ, ನಿಮ್ಮನ್ನು ಬುಡ ಸಮೇತ ಕಿತ್ತು ಹಾಕುವುದೇ ನಮ್ಮ ಧ್ಯೇಯ ಎಂದು ಹೇಳಿದರು.
Read also : Davangere Crime news | ಮಾಂಗಲ್ಯ ಸರ ಕಿತ್ತು ಪರಾರಿಯಾಗಿದ್ದ ಆರೋಪಿಗಳ ಸೆರೆ
ಜಿಲ್ಲಾಧ್ಯಕ್ಷ ಯಹಿಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೋಹಸಿನ್, ಜಿಲ್ಲಾ ಉಪಾಧ್ಯಕ್ಷರಾದ ರಜ್ವಿ ರಿಯಾಝ್ ಅಹಮದ್, ಜಿಲ್ಲಾ ಕಾರ್ಯದರ್ಶಿ ಮೊಹಮ್ಮದ್ ಅಜರುದ್ದೀನ್, ಪಕ್ಷದ ಅಧ್ಯಕ್ಷರಾದ ಮಹಮ್ಮದ್ ಶೋಯಿಬ್, ಆಮ್ ಆದ್ಮಿ ಪಾರ್ಟಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆದಿಲ್ ಖಾನ್, ಸುರೇಶ್, ನೆರಳು ಬೀಡಿ ಕಾರ್ಮಿಕರ ಸಂಘದ ಕರಿಬಸಪ್ಪ, ಜಬೀನಾ, ತಂಜಿಮುಲ್ ಮುಸ್ಲಿಮೀನ್ ಫಂಡ್ ಅಸೋಸಿಯೇಷನ್ ಸದಸ್ಯರಾದ ಹಾಕಿ ಆರಿಫ್ ಹಾಗೂ ಪಕ್ಷದ ಕಾರ್ಯಕರ್ತರು ಬೆಂಬಲಿಗರು ಮತ್ತು ಇತರರು ಉಪಸ್ಥಿತರಿದ್ದರು.