ದಾವಣಗೆರೆ ಜ. 27 (Davanagere) : ಜಿಲ್ಲಾಡಳಿತದಿಂದ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ 76ನೇ ಗಣರಾಜ್ಯೋತ್ಸವ ಅಂಗವಾಗಿ ನಡೆದ ಪಥ ಸಂಚಲನದಲ್ಲಿ ದಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗು ಕರ್ನಾಟಕ ಕೊಂಡಜ್ಜಿ ಬಸಪ್ಪ ಸ್ಥಳೀಯ ಸಂಸ್ಥೆ ದಾವಣಗೆರೆ ವತಿಯಿಂದ ಸೆಂಟ್ ಪಾಲ್ಸ್ ಶಾಲೆಯಿಂದ ಜಿಲ್ಲಾ ತಂಡವಾಗಿ ಪ್ರತಿನಿಧಿಸಿದ ಗೈಡ್ಸ್ ವಿದ್ಯಾರ್ಥಿನಿಯರ ತಂಡವು ಪ್ರಥಮ ಬಹುಮಾನ ಗಳಿಸಿತ್ತು.
ಈ ತಂಡಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಬಹುಮಾನ ವಿತರಿಸಿದರು.
ಈ ಸಂದರ್ಭದಲ್ಲಿ ದೂಡಾ ಅಧ್ಯಕ್ಷ, ಕೊಂಡಜ್ಜಿ ಬಸಪ್ಪ ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ದಿನೇಶ್ ಕೆ.ಶೆಟ್ಟಿ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಪೂರ್ವ ವಲಯ ಐಜಿಪಿ ಡಾ.ಬಿ.ಆರ್.ರವಿಕಾಂತೇಗೌಡ, ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್, ಮಹಾಪೌರರಾದ ಕೆ.ಚಮನ್‌ಸಾಬ್, ಉಪ ಮಹಾಪೌರರಾದ ಸೋಗಿ ಶಾಂತಕುಮಾರ ಪ್ರಶಸ್ತಿ ವಿತರಿಸಿದರು.
ಈ ತಂಡವನ್ನು ಸಂಸ್ಥೆಯ ಕಾರ್ಯದರ್ಶಿ, ಸ್ಕೌಟ್ಸ್ ಗೈಡ್ಸ್ ಮಾಸ್ಟರ್ ಟಿ.ಎಂ.ರವೀಂದ್ರಸ್ವಾಮಿ, ಗೈಡ್ ಕ್ಯಾಪ್ಟನ್ ಕುಸುಮ ಅವರ ಮಾರ್ಗದರ್ಶನದಲ್ಲಿ ಸೆಂಟ್ ಪಾಲ್ಸ್ ಶಾಲೆಯ ವಿದ್ಯಾರ್ಥಿನಿ ಎಂ.ಎಸ್.ಪ್ರೇರಣಾ ನೇತೃತ್ವದಲ್ಲಿ ಮತ್ತು ತಂಡವು ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿತು. ತಂಡಕ್ಕೆ ಸಚಿವರು ಸಂಸದರು ಮಹಾ ಪೌರರು ಪ್ರಶಸ್ತಿ ನೀಡಿ ಶುಭ ಹಾರೈಸಿದರು.
Read also : Suez | ಸುಯೆಜ್ ಸಂಸ್ಥೆಯಿಂದ ಗಣರಾಜ್ಯೋತ್ಸವ