‘ಯ ದೇವ ವಿದ್ಯಯಾ ಕರೋತಿ ಶ್ರದ್ಧಯಾ, ಉಪನಿಷದಾ | ತ ದೇವ ವಿರ್ಯವತ್ತರಂ ಭವತಿ’ ॥ – ಉಪನಿಷತ್
‘ಯಾವುದೇ ಕೆಲಸವನ್ನು ಸರಿಯಾಗಿ ತಿಳಿದ ವಿದ್ಯೆಯಿಂದ, ಶ್ರದ್ದೆಯಿಂದ ಮತ್ತು ಆಳವಾದ ಜ್ಞಾನದಿಂದ ಮಾಡಿದಾಗ ಮಾತ್ರ ಅದು ಉತ್ಕೃಷ್ಟವಾಗುತ್ತದೆ ಎನ್ನುವಂತೆ. ಇಂದು ಶಿಕ್ಷಕ. ಸರ್ವ ಶ್ರೇಷ್ಠನೆನೆಸಿಕೊಂಡು ತನ್ನ ವಿದ್ಯಾರ್ಥಿಗಳಿಗೆ ಅವರ ಬದುಕಿಗೆ, ಭವಿಷ್ಯಕ್ಕೆ, ಜೀವನವಿಡೀ ಕಾಪಾಡಿಕೊಂಡು ಬರುವ ರೀತಿ-ನೀತಿಗಳು, ಜವಾಬ್ದಾರಿಗಳು, ಸತ್ಯದ ಅರಿವು, ಸರಳತೆಯ ಅಂತಃಕರಣಗಳನ್ನು ಮರೆಯಲು ಸಾಧ್ಯವಾಗದಂತೆ ಬೋಧನೆ-ಮಾರ್ಗದರ್ಶನಗಳನ್ನು ಮಾಡುವ ‘ಗುರು’ ವಾಗಬೇಕಿದೆ.
ಗುರುವು ಬೆಳೆಯುವ ಮನಸ್ಸಿನ ಮೇಲೆ, ಮೂಡಿಸಿದ ಅಚ್ಚಳಿಯದ ಪ್ರಭಾವವೇ ವಿದ್ಯಾರ್ಥಿಗಳನ್ನು ಸುಸಂಸ್ಕೃತ ವ್ಯಕ್ತಿಗಳನ್ನಾಗಿ, ರೂಪಿಸಿ ದೇಶಕ್ಕೆ ಒಬ್ಬ ಪ್ರಸಿದ್ದ ಇಂಜಿನಿಯರ್, ವೈದ್ಯ, ಕಾನೂನು ತಜ್ಞ, ಮಹಾನ್ ಸನ್ಯಾಸಿ, ಸೈನ್ಯದ ಮುಖ್ಯಸ್ಥ, ಉತ್ತಮ ಆಡಳಿತಗಾರ, ಪ್ರಾಮಾಣಿಕ-ಪ್ರಭುದ್ದ ರಾಜಕಾರಣಿ. ಅಷ್ಟೇ ಏಕೆ ಕ್ರೀಯಾಶೀಲ ರಾಷ್ಟ್ರಪತಿ, ಪ್ರಧಾನ ಮಂತ್ರಿ, ನಾಡಿನ, ದೇಶದ ಪ್ರಜಾಪ್ರತಿನಿಧಿಗಳನ್ನು ರೂಪಿಸುವ ‘ರಾಜಗುರು’ವಾಗಲಿ ಎಂದು ಶಿಕ್ಷಕರ ದಿನದಂದು ಎಲ್ಲಾ ಶಿಕ್ಷಕರಿಗೆ ನಮಿಸೋಣ.
ಶಿಕ್ಷಣ-ಇನ್ನಷ್ಟು ಫಲಪ್ರದವಾಗಬೇಕಾದರೆ ವಿದ್ಯಾರ್ಥಿಗಳಿಗೆ ದೊಡ್ಡ-ದೊಡ್ಡ ತ್ಯಾಗ ಮಾಡಬೇಕಿಲ್ಲ. ಒಳ್ಳೆಯ ಮಾತು, ಉತ್ತಮ ಮಾರ್ಗದರ್ಶನ, ಪ್ರಾಮಾಣಿಕತೆಯಿಂದ ಕೂಡಿದ ಉತ್ತಮ ಬೋಧನೆ ಸಾಕು.
ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನಾಚರಣೆಯನ್ನು ಭವ್ಯಯುತವಾಗಿ ಆಚರಿಸಿದರೆ ಸಾಲದು, ಕಲಿಸುವುದರಲ್ಲಿ ಶಿಕ್ಷಕರ ಸಾರ್ಥಕತೆ, ಕಲಿಯುವುದರಲ್ಲಿ ವಿದ್ಯಾರ್ಥಿಗಳಿಗೆ ಧನ್ಯತೆ ಇದ್ದರೆ, ಗುರು-ಶಿಷ್ಯರಲ್ಲಿ ಅಡಗಿದೆ ಬಾಂಧವ್ಯ ಎಂದು ತಿಳಿಯುತ್ತಾ ಉತ್ತಮ ಗುರುವಾಗೋಣ, ‘ನಾಡಿನ-ದೇಶದ’ ಅಗತ್ಯಗಳನ್ನು ಈಡೇರಿಸೋಣ. ವಿದ್ಯಾರ್ಥಿಗಳ ಬಾಳಲ್ಲಿ ಮೌಲ್ಯಗಳ ಬೆಳೆಸಿ, ವಿದ್ಯಾರ್ಥಿ ಜೀವನದಲ್ಲಿ ಬೆಳಕಾಗೋಣ ಎನ್ನುವ ಪ್ರತಿಜ್ಞೆ ಇರಲಿ.
– ಕೆ.ಎಸ್.ಪ್ರಭುಕುಮಾರ್
ಪ್ರಾಂಶುಪಾಲರು, ಈಶ್ವರಮ್ಮ ಶಾಲೆ
ಪಿ.ಜೆ.ಬಡಾವಣೆ, ದಾವಣಗೆರೆ.
ಪ್ರಾಂಶುಪಾಲರು, ಈಶ್ವರಮ್ಮ ಶಾಲೆ
ಪಿ.ಜೆ.ಬಡಾವಣೆ, ದಾವಣಗೆರೆ.