ಬೆಂಗಳೂರಿನ ಕೆ.ಜಿ.ಹಳ್ಳಿಯ ಸೂಫಿಯಾನ್ ಷರೀಪ್, ರಾಜಗೋಪಾಲ್ ನಗರದ ಜಾವೀದ್ ಬಂಧಿತ ಆರೋಪಿಗಳು.
ಹರಿಹರ ತಾಲೂಕಿನ ಅಮರಾವತಿ ಕಾಲೋನಿಯ ಜ್ಯೋಹಿತ್ ಡಿಸೋಜ ಅವರ ಮನೆಯಲ್ಲಿ ಕಳ್ಳತನ ನಡೆದಿತ್ತು.
ಕಳೆದ ಸೆಪ್ಟೆಂಬರ್ 13ರಂದು ಬೆಳಗ್ಗೆ 8.30 ಗಂಟೆಯ ಅವಧಿಯಲ್ಲಿ ಮನೆಯ ಕಿಟಕಿಯ ಸರಳನ್ನು ಕಟ್ ಮಾಡಿ ಮನೆಯೊಳಗೆ ಪ್ರವೇಶ ಮಾಡಿ, ಬೆಡ್ ರೂಮ್ನ ಸ್ಟೋರೆಜ್ನಲ್ಲಿದ್ದ 10 ಗ್ರಾಂ ತೂಕದ 65,000 ರೂ. ಬೆಲೆ ಬಾಳುವ ಬಂಗಾರದ ಕಿವಿಯೋಲೆಗಳು ಮತ್ತು 43 ಇಂಚಿನ 35,000 ರೂ. ಬೆಲೆ ಬಾಳುವ ಟಿ.ವಿಯನ್ನು ಕಳ್ಳತನ ಮಾಡಿದ್ದರು.
ಎಸ್ಪಿ ಉಮಾ ಪ್ರಶಾಂತ್ , ಹೆಚ್ಚುವರಿ ಎಸ್ಪಿ ವಿಜಯ್ ಕುಮಾರ್ ಸಂತೋಷ, ಜಿ. ಮಂಜುನಾಥ ಜಿ, ಡಿಎಸ್ಪಿ ಬಿ.ಎಸ್.ಬಸವರಾಜ ಮರ್ಗರ್ಶನದಲ್ಲಿ ಸಿಪಿಐ ಸುರೇಶ ಸಗರಿ ನೇತೃತ್ವದಲ್ಲಿ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯ ಮಂಜುನಾಥ ಎಸ್. ಕುಪ್ಪೇಲೂರು, ಪಿಎಸ್ಐ ಮಹಾದೇವ ಸಿದ್ದಪ್ಪ ಭತ್ತೆ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡವು ಪತ್ತೆ ಕರ್ಯ ನಡೆಸಿ 160 ಗ್ರಾಂ ತೂಕದ ಅಂದಾಜು ಬೆಲೆ ರೂ. 12,80,000 ಬೆಲೆ ಬಾಳುವ ಬಂಗಾರದ ಆಭರಣಗಳು, 1 ಕೆ.ಜಿ 600 ಗ್ರಾಂ ತೂಕ ಅಂದಾಜು ಬೆಲೆ ರೂ . 1,35,000 ಬೆಲೆ ಬಾಳುವ ಬೆಳ್ಳಿಯ ಸಾಮಾನುಗಳು ಮತ್ತು 43 ಇಂಚಿನ ಅಂದಾಜು ಬೆಲೆ 35,000 ರೂ. ಮೌಲ್ಯದ ಟಿ.ವಿ ಹಾಗೂ ಕೃತ್ಯಕ್ಕೆ ಬಳಸಿದ ಸುಮಾರು 1.50.000 ರೂ. ಬೆಲೆಯ 02 ಬೈಕ್ಗಳು ಸೇರಿದಂತೆ ಒಟ್ಟು ಅಂದಾಜು ಮೊತ್ತ 16 ಲಕ್ಷ ರೂ. ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿದ್ದಾರೆ.
ಪತ್ತೆ ಕರ್ಯದಲ್ಲಿ ಸಿಬ್ಬಂದಿಗಳಾದ ತಿಪ್ಪೇಸ್ವಾಮಿ, ರಮೇಶ ಜಿ.ಎನ್. ನೀಲಮರ್ತಿ, ದಾದಾಪೀರ್, ಬಸವನಗೌಡ, ಲಿಂಗರಾಜ, ಸತೀಶ್, ಪ್ರಸನ್ನಕಾಂತ, ಅನಿಲ್ ಕುಮಾರ್ ನಾಯ್ಕ, ರಿಜ್ವಾನ್ ನಾಸೂರ್, ರ್ಜುನ್ ರಾಯಲ್, ಗಂಗಾಧರ, ಸುರೇಶ ಉಪ್ಪಾರ, ನಾಗರಾಜ ಎನ್.ಎಸ್, ವೆಂಕಟೇಶ, ರಾಮಾಂಜನೇಯ, ಋಷಿರಾಜ, ಸಿದ್ದಪ,್ಪ ಮುರುಳಿ ಹಾಗು ಜಿಲ್ಲಾ ಪೊಲೀಸ್ ಕಚೇರಿಯ ಮಂಜುನಾಥ ಎಸ್. ಕಲ್ಲೆದೇವರ, ರಾಘವೇಂದ್ರ, ಶಾಂತರಾಜ ಅವರನ್ನೊಳಗೊಂಡ ತಂಡವನ್ನು ಎಸ್ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.