ದಾವಣಗೆರೆ (Davanagere): ನಗರದ ಪಿ.ಬಿ.ರಸ್ತೆ ಬದಿಯಲ್ಲಿ ತಿಂಡಿ ಹೋಟೆಲ್ ನಡೆಸುತ್ತಿದ್ದ ಮಣಿಕಂಠ (34)ನನ್ನು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಸಾಸಲು ಬಳಿ ಕಲ್ಲಿನಿಂದ ಜಜ್ಜಿ ಭೀಕರವಾಗಿ ಹತ್ಯೆ ಮಾಡಲಾಗಿದೆ.
ಹೊನ್ನಾಳಿ ತಾಲ್ಲೂಕಿನ ಮಾರಿಕೊಪ್ಪ ನಿವಾಸಿ ಮಣಿಕಂಠನನ್ನು ಸಾಸಲು ಗ್ರಾಮದ ಪೆಟ್ರೋಲ್ ಬಂಕ್ ಬಳಿ ಹತ್ಯೆ ಮಾಡಲಾಗಿದ್ದು, ಶುಕ್ರವಾರ ರಾತ್ರಿ ಜಗಳ ಮಾಡಿ ಕಲ್ಲಿನಿಂದ ಮುಖಕ್ಕೆ ಜಜ್ಜಿ ಭೀಕರವಾಗಿ ಹತ್ಯೆ ಮಾಡಲಾಗಿದೆ.
ಮಣಿಕಂಠ ಸ್ನೇಹಿತರ ಜೊತೆಗೆ ಬುಲೆರೋ ವಾಹನದಲ್ಲಿ ಬಂದಿದ್ದ ಮಾಹಿತಿ ಇದ್ದು, ಕೊಲೆಯಾದ ಸ್ಥಳಕ್ಕೆ ಅಲ್ಲಿನ ಎಸ್ಪಿ ರಂಜಿತ್ ಕುಮಾರ್ ಬಂಡಾರು, ಶ್ವಾನದಳ, ಎಫ್‍ಎಸ್‍ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಓರ್ವ ಶಂಕಿತನನ್ನು ವಶಕ್ಕೆ ಪಡೆದಿರುವ ಮಾಹಿತಿ ಲಭ್ಯವಾಗಿದೆ.
Read also : ಕಳುವಾದ ಸ್ವತ್ತು ವಾರಸುದಾರರಿಗೆ ಹಸ್ತಾಂತರ : ಉತ್ತಮ ಕರ್ತವ್ಯ ನಿರ್ವಹಿಸಿದ ಸಿಬ್ಬಂದಿಗೆ ಬಹುಮಾನ
ಚಿಕ್ಕಜಾಜೂರು ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಹತ್ಯೆ ನಡೆದಿದ್ದು, ಯುವಕನ ದೇಹ ರಕ್ತ ಸಿಕ್ತವಾಗಿದ್ದು, ಮುಖ ಗುರುತು ಸಿಗದಷ್ಟು ಭೀಕರವಾಗಿ ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಲಾಗಿದೆ.