Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ಅಭಿಪ್ರಾಯ > ಮೋದಿ ಮೆಚ್ಚಿಸಲು ಓನ್ ನೇಷನ್ ಓನ್ ಎಲಕ್ಷನ್ ತರಲಾಗುತ್ತಿದೆ: ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಟೀಕೆ
ಅಭಿಪ್ರಾಯ

ಮೋದಿ ಮೆಚ್ಚಿಸಲು ಓನ್ ನೇಷನ್ ಓನ್ ಎಲಕ್ಷನ್ ತರಲಾಗುತ್ತಿದೆ: ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಟೀಕೆ

Dinamaana Kannada News
Last updated: December 21, 2024 8:44 am
Dinamaana Kannada News
Share
SHARE

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ “ಒಂದು ದೇಶ- ಒಂದು ಚುನಾವಣೆ” ಜಾರಿಯ ಉದ್ದೇಶವು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸಿ, ದೇಶವನ್ನು ಏಕಚಕ್ರಾಧಿಪತ್ಯದತ್ತ ಕೊಂಡೊಯ್ಯುವ ಷಡ್ಯಂತ್ರದಂತೆ ಕಾಣುತ್ತಿದೆ. ಮೋದಿ ಮೆಚ್ಚಿಸಲು ಮುಂದಾಗಿರುವ ಈ ಮಸೂದೆಯಿಂದ ದೇಶದ ಒಕ್ಕೂಟ ವ್ಯವಸ್ಥೆಗೆ ಮಾರಕ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಕಿಡಿಕಾರಿದರು.

ಕೇಂದ್ರ ಸರ್ಕಾರ ಜಾರಿ ಮಾಡಿರುವ “ಒಂದು ದೇಶ-ಒಂದು ಚುನಾವಣೆ ಕುರಿತು ಪ್ರತಿಕ್ರಿಯಿಸಿರುವ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜನಮನ್ನಣೆ ಕಳೆದುಕೊಂಡಿರುವುದು ಇತ್ತೀಚಿನ ಲೋಕಸಭಾ ಚುನಾವಣೆ ಸೇರಿದಂತೆ ಎಲ್ಲಾ ಚುನಾವಣೆಗಳಲ್ಲಿ ರುಜುವಾತಾಗಿದೆ. ಅದನ್ನು ಮರೆಮಾಚಲು ಮತ್ತು‌ ವಾಮಮಾರ್ಗದಲ್ಲಿ ‘ಜನ ಮತ’ವನ್ನು ತನ್ನ ಹಿತಕ್ಕೆ ತಕ್ಕಂತೆ ಮಾರ್ಪಡಿಸಿಕೊಳ್ಳಲು ಆರ್ ಎಸ್ ಎಸ್ ಮತ್ತು ಬಿಜೆಪಿ ನಡೆಸುತ್ತಿರುವ ಸಂಚಿನ ಭಾಗವೇ ಈ “ಒಂದು ದೇಶ- ಒಂದು ಚುನಾವಣೆ” ಆಗಿದೆ.

ಲೋಕಸಭೆ- ವಿಧಾನಸಭಾ ಚುನಾವಣೆಗಳು ಪ್ರತ್ಯೇಕ‌ ನಡೆದರೆ ಚರ್ಚಿತ ಸಂಗತಿ-ಸಂಕಥನಗಳು ಭಿನ್ನವಾಗಿರುತ್ತವೆ. ವಿಧಾನಸಭಾ ಚುನಾವಣೆಗಳಲ್ಲಿ ಆಯಾ ಪ್ರದೇಶದ ಒಲವು, ನಿಲುವು, ಹಿತಾಸಕ್ತಿಗಳು ಚರ್ಚೆಯ ಮುನ್ನೆಲೆಯಲ್ಲಿರುತ್ತವೆ. ಹೀಗಾಗಿಯೇ ದೇಶದ ಅನೇಕ ರಾಜ್ಯಗಳಲ್ಲಿ ಬೇರೆ ಬೇರೆ ಪಕ್ಷಗಳು ಅಧಿಕಾರದಲ್ಲಿವೆ. ತಮ್ಮ ಹಿತಕ್ಕೆ ಪೂರಕವಾಗುವಂತ ಪಕ್ಷಗಳನ್ನು ಜನ ಆಯ್ಕೆ ಮಾಡಿಕೊಂಡಿದ್ದಾರೆ. ಇದರಿಂದ ದೇಶದಲ್ಲೆಡೆ ಆಡಳಿತದಲ್ಲಿ ಕೇಸರಿಯನ್ನು ಹಬ್ಬಿಸುವ ಆರ್ ಎಸ್ ಎಸ್ ಉದ್ದೇಶ ಈಡೇರಿಲ್ಲ. ಒಂದು‌ ದೇಶ-ಒಂದು ಚುನಾವಣೆಯ ಮೂಲಕ ಈ ‘ಪ್ರಾದೇಶಿಕ ರಾಜಕೀಯ ವೈವಿಧ್ಯವನ್ನು ನಾಶ ಪಡಿಸಿ, ಏಕ ಚಕ್ರಾಧಿಪತ್ಯ ಸ್ಥಾಪಿಸಲು ಬಿಜೆಪಿ ಹವಣಿಸುತ್ತಿದೆ ಎಂದು ಸಂಸದೆ ಡಾ.ಪ್ರಭ ಮಲ್ಲಿಕಾರ್ಜುನ್ ಅವರು ಆರೋಪಿಸಿದ್ದಾರೆ.

ಜನಸಂಖ್ಯೆ, ಪ್ರದೇಶ ವ್ಯಾಪ್ತಿ ಮತ್ತಿತರ ಕಾರಣಗಳಿಂದ ಮುಂದಿನ ಕ್ಷೇತ್ರ‌ ಪುನರ್ವಿಂಗಡಣೆ ಹೊತ್ತಿಗೆ ಹಿಂದಿ ಭಾಷಿಕ ಉತ್ತರ ಮತ್ತು ಮಧ್ಯಭಾರತದ ರಾಜ್ಯಗಳು ಸಂಸತ್ ಕ್ಷೇತ್ರಗಳನ್ನು ಹೆಚ್ಚಿಸಿಕೊಳ್ಳಲಿವೆ. ದಕ್ಷಿಣದ ರಾಜ್ಯಗಳು ರಾಜಕೀಯವಾಗಿ ವ್ಯತಿರಿಕ್ತ ಪ್ರತಿಕ್ರಿಯೆ ನೀಡಿದರೂ ಉತ್ತರದ ‘ಶಕ್ತಿಯ ಮೇಲೆಯೇ ಅಧಿಕಾರದಲ್ಲಿ ಮುಂದುವರಿಯುವ ಲೆಕ್ಕಾಚಾರ ಬಿಜೆಪಿಯದು. ಹೀಗಾದರೆ, ಈಗಾಗಲೇ‌ ಅನುದಾನ ತಾರತಮ್ಯಕ್ಕೆ ಈಡಾಗಿರುವ ದಕ್ಷಿಣ ರಾಜ್ಯಗಳು ಇನ್ನಷ್ಟು ತುಳಿತಕ್ಕೆ ಒಳಗಾಗಬೇಕಾಗುತ್ತದೆ ಎಂದು ಸಂಸದರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಯಾವುದೇ ರಾಜ್ಯ ತನ್ನದೇ ರಾಜಕೀಯ ಕಾರಣಕ್ಕೆ ವಿಧಾನಸಭೆಯನ್ನು ವಿಸರ್ಜಿಸಿದರು ಅಥವಾ ಉಪಚುನಾವಣೆಗಳು ನಡೆದರು ಮುಂದಿನ ಅವಧಿವರೆಗೆ ಚುನಾವಣೆಗಾಗಿ ಕಾಯಬೇಕಾಗುತ್ತೆ. ಇದರಿಂದ ಒಕ್ಕೂಟ ವ್ಯವಸ್ಥೆಗೆ ಹೊಡೆತ ಬೀಳಲಿದೆ. ರಾಜ್ಯಗಳು ಚುನಾವಣಾ ಸಮಯ ನಿರ್ಧರಿಸುವಲ್ಲಿ ತಮಗಿರುವ ಸ್ವಾಯತ್ತತೆಯನ್ನು ಕಳೆದುಕೊಳ್ಳುತ್ತವೆ.

ಕೇಂದ್ರದಲ್ಲಿ ಮೂರು ಅವಧಿಯ ಅಧಿಕಾರ ನಡೆಸಿ‌ ಎಲ್ಲಾ ರೀತಿಯ ಸಂಪನ್ಮೂಲ ಕ್ರೋಢೀಕರಿಸಿ ಸದೃಢಗೊಂಡಿರುವ ಬಿಜೆಪಿ, ಇದೀಗ ಹಣಬಲ- ಅಧಿಕಾರ ಬಲದ ಮೂಲಕ ಸಣ್ಣಪುಟ್ಟ ಪಕ್ಷಗಳನ್ನು ಹಣಿಯುವ ಕೆಲಸಕ್ಕೆ ಕೈ ಹಾಕಿದೆ. ಒಂದು ದೇಶ- ಒಂದು ಚುನಾವಣೆಗೆ 15 ಪಕ್ಷಗಳ ತೀವ್ರ ವಿರೋಧವಿದ್ದಾಗ್ಯೂ ಅವುಗಳ ಮನವಿಗೆ ಮನ್ನಣೆ ನೀಡದೆ ಅಭಿಪ್ರಾಯ ಹತ್ತಿಕ್ಕಿ, ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ಸವಾರಿ ಮಾಡಲು ಬಿಜೆಪಿ, ಆರ್.ಎಸ್.ಎಸ್ ಮುಂದಾಗಿರುವುದು ಖಂಡನೀಯ ಎಂದು ಸಂಸದರು ವಾಗ್ದಾಳಿ ನಡೆಸಿದರು.

TAGGED:MP Dr. Prabha MallikarjunPrime Minister Narendra Modi
Share This Article
Twitter Email Copy Link Print
Previous Article davanagere ಅಂಬೇಡ್ಕರ್ ಬಗ್ಗೆ ಅವಹೇಳನ : ಅಮಿತ್ ಷಾ ಕ್ಷಮೆಗೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಆಗ್ರಹ
Next Article Applications invited DAVANAGERE | ವೃತ್ತಿ ನಾಟಕ ಶಿಬಿರಕ್ಕೆ ಅರ್ಜಿ ಆಹ್ವಾನ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ಜಲ ಜೀವನ್ ಮೀಷನ್ ಎಂಐಎಸ್ ಸಮಾಲೋಚಕರ ಹುದ್ದೆಗೆ ಅರ್ಜಿ ಆಹ್ವಾನ

ದಾವಣಗೆರೆ, ಜೂ.21   :   ಜಿಲ್ಲೆಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದಲ್ಲಿ ಜಲ ಜೀವನ್ ಮೀಷನ್ ಯೋಜನೆಯಡಿ ಖಾಲಿ…

By Dinamaana Kannada News

ಹರಿಹರ | ವಿವಿಧ ಸೌಲಭ್ಯಗಳ್ನು ಪಡೆಯಲು ಅರ್ಜಿ ಆಹ್ವಾನ

ಹರಿಹರ : ಪ್ರಸಕ್ತ ಸಾಲಿನ ಮುಕ್ತ ನಿಧಿ ಅನುದಾನದಲ್ಲಿ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅರ್ಹ ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳನ್ನು ಪಡೆಯಲು…

By Dinamaana Kannada News

Political analysis | ಇತಿಹಾಸ ಮರೆಯದ ಕೌತುಕದ ಕ್ಷಣಗಳು..

ಅವತ್ತು ಮಾಜಿ ಪ್ರಧಾನಿ ಇಂದಿರಾಗಾಂಧಿ ತಮ್ಮ ಪುತ್ರ ಸಂಜಯ್ ಗಾಂಧಿ ಅವರೊಂದಿಗೆ ಕರ್ನಾಟಕಕ್ಕೆ ಬಂದರು. ರಾಜಕೀಯವಾಗಿ ಬಸವಳಿದಿದ್ದ ಅವರಿಗೆ ತುರ್ತು…

By Dinamaana Kannada News

You Might Also Like

K.P. Suresh
ಅಭಿಪ್ರಾಯ

ಆಗಸ್ಟ್‌ 15ರ ದುಗುಡ : ಬರಹ ಕೆ.ಪಿ.ಸುರೇಶ್

By Dinamaana Kannada News
MP Dr. Prabha Mallikarjun
ತಾಜಾ ಸುದ್ದಿ

ಇಎಸ್‌ಐ ಅರ್ಹತಾ ಮಿತಿಯನ್ನು ಪರಿಷ್ಕರಿಸಲು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಒತ್ತಾಯ 

By Dinamaana Kannada News
MLA dg shanthana Gowda MC mohan
ಅಭಿಪ್ರಾಯ

ಹಾಲಿ ಶಾಸಕರ ಸ್ವಗ್ರಾಮದಲ್ಲಿಯೇ ಪ್ರಜಾಪ್ರಭುತ್ವವನ್ನು ಅಸ್ಪೃಶ್ಯತೆಯ ಕಗ್ಗತ್ತಲಲ್ಲಿ ಕೂರಿಸಲಾಗಿದೆ !

By Dinamaana Kannada News
Anil Hosamani
ಅಭಿಪ್ರಾಯ

ಪ್ರಜ್ಞೆಯ ಹಸಿವನ್ನು ಪ್ರತಿನಿಧಿಸಿದ ಅನಿಲ್ ಹೊಸಮನಿಯುವರ ಕಾರ್ಯಕ್ರಮ

By Dinamaana Kannada News ಬಿ.ಶ್ರೀನಿವಾಸ
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?