Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ರಾಜಕೀಯ > Political analysis | ವಿಜಯೇಂದ್ರ ಸೇಫ್ಟಿಗೆ ನಡ್ಡಾ ಬರುತ್ತಿದ್ದಾರೆ
ರಾಜಕೀಯ

Political analysis | ವಿಜಯೇಂದ್ರ ಸೇಫ್ಟಿಗೆ ನಡ್ಡಾ ಬರುತ್ತಿದ್ದಾರೆ

Dinamaana Kannada News
Last updated: December 23, 2024 3:32 am
Dinamaana Kannada News
Share
Political analysis
Political analysis
SHARE

ಕಳೆದ ವಾರ ದಿಲ್ಲಿಗೆ ಹೋದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪಕ್ಷ ಸಂಘಟನೆಗಾಗಿ ತಾವು ಮಾಡುತ್ತಿರುವ ಪ್ರಯತ್ನಗಳ ಬಗ್ಗೆ ಅವರು ವಿವರಿಸಿದ್ದಾರೆ. ಹೀಗೆ ವಿಜಯೇಂದ್ರ ಅವರು ಹೇಳಿದ್ದನ್ನು ಸಮಾಧಾನದಿಂದ ಕೇಳಿಸಿಕೊಂಡ ಪ್ರಧಾನಿ ಮೋದಿಯವರು ವೆರಿಗುಡ್ ಎಂದಿದ್ದಾರೆ.

ಕಾರಣ?  ಕರ್ನಾಟಕದಲ್ಲಿ ಪಕ್ಷ ಸಂಘಟನೆಗಾಗಿ ವಿಜಯೇಂದ್ರ ಅವರು ಮಾಡುತ್ತಿರುವ ಪ್ರಯತ್ನಗಳ ಬಗ್ಗೆ ಅಷ್ಟೊತ್ತಿಗಾಗಲೇ ಮೋದಿಯವರು ಫೀಡ್ ಬ್ಯಾಕ್ ತರಿಸಿಕೊಂಡಿದ್ದರಂತೆ. ಹೀಗಾಗಿ ವಿಜಯೇಂದ್ರ ಅವರು ತಮ್ಮ ಪ್ರಯತ್ನಗಳ ಬಗ್ಗೆ ಹೇಳುತ್ತಿದ್ದಂತೆಯೇ:ವೆರಿ ಗುಡ್. ಪಕ್ಷ ಸಂಘಟನೆಯ ವಿಷಯದಲ್ಲಿ ನೀವು ಮಾಡಿದ ಕೆಲಸಗಳ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ. ಈ ವಿಷಯದಲ್ಲಿ ಕರ್ನಾಟಕ ದೇಶದಲ್ಲೇ ನಾಲ್ಕನೇ ಸ್ಥಾನ ಪಡೆದಿದೆ. ಕರ್ನಾಟಕದಲ್ಲಿ ನಮಗೆ ಅಧಿಕಾರ ಇಲ್ಲದಿದ್ದರೂ, ರಾಷ್ಟ್ರಮಟ್ಟದಲ್ಲಿ ಪಕ್ಷಕ್ಕೆ ಮಾದರಿಯಾಗುವಂತೆ ಸಂಘಟನೆ ಮಾಡಿದ್ದೀರಿ. ಅದಕ್ಕಾಗಿ ನಿಮಗೆ ಅಭಿನಂದನೆ ಎಂದಿದ್ದಾರೆ.

ಹೀಗೆ ವಿಜಯೇಂದ್ರ ಅವರಿಗೆ ಶಭಾಷ್ ಗಿರಿ ಕೊಟ್ಟ ಪ್ರಧಾನಿ ಮೋದಿಯವರು: ಇನ್ನುಳಿದ ಯಾವುದೇ ವಿಷಯಗಳ ಬಗ್ಗೆ ಯೋಚಿಸಬೇಡಿ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ನಡ್ಡಾ ಅವರು ಆದಷ್ಟು ಬೇಗ ಕರ್ನಾಟಕಕ್ಕೆ ಬರುತ್ತಾರೆ.ಎಲ್ಲವನ್ನೂ ಸರಿ ಮಾಡುತ್ತಾರೆ ಎಂದಿದ್ದಾರೆ.

ಯಾವಾಗ ಮೋದಿಯವರು ಈ ಮಾತು ಹೇಳಿದರೋ? ಇದರಿಂದ ಖುಷಿಯಾದ ವಿಜಯೇಂದ್ರ ಸಮಾಧಾನದಿಂದ ಕರ್ನಾಟಕಕ್ಕೆ ವಾಪಸ್ದಾಗಿದ್ದಾರೆ. ದಿಲ್ಲಿಯ ಬಿಜೆಪಿ ಮೂಲಗಳ ಪ್ತಕಾರ:ಕರ್ನಾಟಕದಲ್ಲಿ ನಡೆದ ಪಕ್ಷ ಸಂಘಟನೆಯ ಪರ್ವವನ್ನು ಹೊಗಳಿ,ವಿಜಯೇಂದ್ರ ಅವರಿಗೆ ಶಹಬ್ಬಾಸ್ ಗಿರಿ ಕೊಡಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರು ಡಿಸೆಂಬರ್ 29 ರ ಭಾನುವಾರ ಕರ್ನಾಟಕಕ್ಕೆ ಬರಲಿದ್ದಾರೆ.

ಒಂದು ಸಲ ಅವರು ಹೀಗೆ ಬಹಿರಂಗವಾಗಿ ಶಹಬ್ಬಾಸ್ ಗಿರಿ ಕೊಟ್ಟು ಹೋದರು ಎಂದರೆ ಕರ್ನಾಟಕದಲ್ಲಿ ವಿಜಯೇಂದ್ರ ಅಧ್ಯಾಯ ನಿರಾತಂಕವಾಗಿ ಮುಂದುವರಿಯಲಿದೆ ಎಂದೇ ಅರ್ಥ. ಮತ್ತದೇ ಕಾಲಕ್ಕೆ ವಿಜಯೇಂದ್ರ ವಿರುದ್ಧ ಅಪಸ್ವರ ಎತ್ತುತ್ತಿರುವ ಯತ್ನಾಳ್ ಅಂಡ್ ಟೀಮಿಗೆ ಹಿನ್ನಡೆಯಾಗಲಿದೆ ಎಂಬುದು ನಿಸ್ಸಂಶಯ.

ರವಿ ಎಪಿಸೋಡು ತಂದ ಒಗ್ಗಟ್ಟು (Political analysis)

ಇನ್ನು ವಿಧಾನಪರಿಷತ್ತಿನಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕುರಿತು ಬಿಜೆಪಿ ನಾಯಕ ಸಿ.ಟಿ.ರವಿ ಆಡಿದರೆನ್ನಲಾದ ಮಾತುಗಳು ಭಾರೀ ವಿವಾದಕ್ಕೆ ಕಾರಣವಾಗಿದೆ.

ಇಲ್ಲ,ನಾನು ಅಂತಹ ಮಾತನಾಡಿಲ್ಲ ಅಂತ ಸಿ.ಟಿ.ರವಿ ಹೇಳುತ್ತಿದ್ದಾರಾದರೂ ಖಾಸಗಿ ಟಿವಿ ಚಾನೆಲ್ಲುಗಳಲ್ಲಿ ಪ್ರಸಾರವಾದ ಘಟನೆಯ ವಿವರಗಳು ಸಿ.ಟಿ.ರವಿಯವರ ಮೇಲಿನ ಆರೋಪವನ್ನು ಜೀವಂತವಾಗಿಟ್ಟಿದೆ.

ಅಂದ ಹಾಗೆ ಈ ಪ್ರಕರಣದ ಬಗೆಗಿನ ವ್ಯಾಖ್ಯಾನಗಳು ಏನೇ ಇರಲಿ.ಆದರೆ ಈ ಎಪಿಸೋಡಿನ ಮೂಲಕ ರಾಜ್ಯ ಬಿಜೆಪಿಯ ಆಂತರಿಕ ಬಿಕ್ಕಟ್ಟಿಗೆ ತಾತ್ಕಾಲಿಕ ಬ್ರೇಕ್ ಅಂತೂ ಬಿದ್ದಿದೆ. ವಸ್ತುಸ್ಥಿತಿ ಎಂದರೆ ಯತ್ನಾಳ್ ಅಂಡ್ ಟೀಮಿಗೆ ಶಕ್ತಿ ತುಂಬುವಂತೆ ಮಾತನಾಡುತ್ತಿದ್ದ ಸಿ.ಟಿ.ರವಿ ಅವರು ವಿಜಯೇಂದ್ರ ಪಾಳಯಕ್ಕೆ ಮುಜುಗರವಾಗುವಂತೆ ಮಾಡಿದವರು. ಆದರೆ ಯಾವಾಗ ವಿಧಾನಪರಿಷತ್ತಿನಲ್ಲಿ ಸಿ.ಟಿ.ರವಿ ಎಪಿಸೋಡು ನಡೆಯಿತೋ? ಇದಾದ ನಂತರ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತವರ ಬ್ರಿಗೇಡ್ ಮಿಂಚಿನಂತೆ ಬೀದಿಗಿಳಿಯಿತು.

ಒಂದು ಕಡೆಯಿಂದ ಸಂಘಪರಿವಾರದ ಪಡೆ ಸಿ.ಟಿ.ರವಿ ಬೆನ್ನಿಗೆ ನಿಂತು ಮಿಡತೆಗಳ ಪಡೆಯಂತೆ ಆವರಿಸಿದರೆ,ಮತ್ತೊಂದೆಡೆ ವಿಜಯೇಂದ್ರ ಪಡೆ ಕೂಡಾ ಸಿ.ಟಿ.ರವಿ ರಕ್ಷಣೆಗೆ ಧಾವಿಸಿತು. ಗಮನಿಸಬೇಕಾದ ಸಂಗತಿ ಎಂದರೆ ಈ ಸಂದರ್ಭದಲ್ಲಿ ಯತ್ನಾಳ್,ಅರವಿಂದ ಬೆಲ್ಲದ್ ಅವರಂತಹ ನಾಯಕರು ಹೆಚ್ಚು ಪ್ರತಿಕ್ರಿಯಿಸಲಾಗದ ಸ್ಥಿತಿಯಲ್ಲಿದ್ದರೆ ವಿಜಯೇಂದ್ರ ಬ್ರಿಗೇಡ್ ಮಾತ್ರ ಎಲ್ಲ ಕೋನಗಳಿಂದಲೂ ಸಿ.ಟಿ.ರವಿ ಅವರ ರಕ್ಷಣೆಗೆ ಧಾವಿಸಿತು.

ಅಂದ ಹಾಗೆ ಯತ್ನಾಳ್,ಬೆಲ್ಲದ್ ಅವರಂತಹ ನಾಯಕರಿಗೆ ಈ ಎಪಿಸೋಡು ಪಂಚಮಸಾಲಿ ರಾಜಕಾರಣದ ಧರ್ಮಸಂಕಟವಾದರೆ ವಿಜಯೇಂದ್ರ ಪಡೆಗೆ ಅದು ಬಾಧಿಸಲಿಲ್ಲ. ನಿಜ ಹೇಳಬೇಕೆಂದರೆ ಆರೆಸ್ಸೆಸ್ ಪಡೆ ಮತ್ತು ವಿಜಯೇಂದ್ರ ಟೀಮಿನ ಅಬ್ಬರವಿಲ್ಲದಿದ್ದರೆ ಸಿ.ಟಿ.ರವಿ ಮತ್ತಷ್ಟು ಸಂಕಟ ಎದುರಿಸುವುದು ನಿಶ್ಚಿತವಾಗಿತ್ತು. ಪರಿಣಾಮ?ಸಿ.ಟಿ.ರವಿ ಎಪಿಸೋಡು ತನಗರಿವಿಲ್ಲದಂತೆಯೇ ರಾಜ್ಯ ಬಿಜೆಪಿಯ ಬಣ ಬಡಿದಾಟಕ್ಕೆ ತತ್ಕಾಲದ ಬ್ರೇಕ್ ಹಾಕಿ ಒಂದು ಬಗೆಯ ಒಗ್ಗಟ್ಟು ಮೂಡಿಸಿರುವುದು ನಿಜ.\

ಸಂಘ ಪರಿವಾರಕ್ಕೆ ಸಮಾಧಾನವಿಲ್ಲ (Political analysis)

ಈ ಮಧ್ಯೆ ವಿಧಾನಪರಿಷತ್ತಿನ ಎಪಿಸೋಡಿನಲ್ಲಿ ಸಿ.ಟಿ.ರವಿ ಅವರನ್ನು ಬಂಧಿಸಿದ ರೀತಿ ಸಂಘಪರಿವಾರದ ನಾಯಕರಿಗೆ ಇಷ್ಟವಾಗಿಲ್ಲ ಎಂಬುದು ನಿಜವಾದರೂ,ಅದೇ ಕಾಲಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬಗ್ಗೆ ಸಿ.ಟಿ.ರವಿ ಆಡಿದರೆನ್ನಲಾದ ಮಾತುಗಳೂ ಪಥ್ಯವಾಗಿಲ್ಲ.

ತಾವು ಅಂತಹ ಮಾತುಗಳನ್ನಾಡಿಲ್ಲ ಅಂತ ಸಿ.ಟಿ.ರವಿ ಈ ಕ್ಷಣದವರೆಗೆ ವಾದಿಸುತ್ತಿದ್ದರೂ ಸಂಘ ಪರಿವಾರದ ಬಹುತೇಕ ನಾಯಕರಲ್ಲಿ ಸಮಾದಾನ ಕಾಣಿಸುತ್ತಿಲ್ಲ. ಹೀಗಾಗಿಯೇ,ಇಂತಹ ಮಾತುಗಳು ನಾವು ನಂಬಿದ ತತ್ವಕ್ಕೆ ತಕ್ಕುದಲ್ಲ ಅಂತ ಹೇಳುತ್ತಿರುವ ಪರಿವಾರದ ಹಲವು ನಾಯಕರು ಮುಂದೇನು ಅಂತ ಕಾದು ನೋಡುತ್ತಿದ್ದಾರೆ.

ಇಷ್ಟಾದರೂ ಸಂಘಪರಿವಾರ ಸಾಲಿಡ್ಡಾಗಿ ಸಿ.ಟಿ.ರವಿ ರಕ್ಷಣೆಗೆ ನಿಲ್ಲಲು ಆಡಳಿತಾರೂಢ ಕಾಂಗ್ರೆಸ್ಸಿನ ಧೋರಣೆ ಕಾರಣ. ಸಿ.ಟಿ.ರವಿ ವಿಧಾನಪರಿಷತ್ತಿನಲ್ಲಿ ಆಡಿದರೆನ್ನಲಾದ ಮಾತುಗಳು ಸಭಾಪತಿಯವರ ಅಂಗಳದಲ್ಲಿ ಪ್ರಶ್ನಿತವಾಗುವ ಮುನ್ನ ಪೋಲೀಸರು ಮಧ್ಯೆ ಪ್ರವೇಶಿಸಿದ್ದು,ರವಿಯವರನ್ನು ಬಂಧಿಸಿದ್ದು ಪರಿವಾರಕ್ಕೆ ಪಥ್ಯವಾಗಿಲ್ಲ.

ನಿಯಮಾವಳಿಗಳ ಪ್ರಕಾರ ವಿಧಾನಸಭೆ, ವಿಧಾನಪರಿಷತ್ತಿನ ಪ್ರತಿನಿಧಿಗಳಿಗೆ ಸಭಾಧ್ಯಕ್ಷರು ಮತ್ತು ಸಭಾಪತಿಗಳ ಸುಭದ್ರ ರಕ್ಷಣೆಯಿದೆ. ಆದರೆ ಇಂತಹ ರಕ್ಷಣೆಯ ಕತೆಯನ್ನು ಬದಿಗಿಟ್ಟು ಸಿ.ಟಿ.ರವಿಯವರನ್ನು ಬಂಧಿಸಿದ ಬೆಳವಣಿಗೆಯನ್ನು ಪರಿವಾರದ ನಾಯಕರು ಸಹಿಸಿಕೊಳ್ಳುತ್ತಿಲ್ಲ. ಹೀಗಾಗಿ ಈ ಎಪಿಸೋಡನ್ನು ಇಲ್ಲಿಗೆ ಕೈ ಬಿಡದಿರಲು ಬಯಸಿರುವ ಪರಿವಾರದ ನಾಯಕರು ಎಲ್ಲವನ್ನೂ ಹದ್ದುಗಣ್ಣುಗಳಿಂದ ನೋಡುತ್ತಿದ್ದಾರೆ.

ಸಚಿವ ಪರಮೇಶ್ವರ್ ಕುಪಿತರಾಗಿದ್ದಾರಾ? (Political analysis)

ಈ ಮಧ್ಯೆ ಸಿ.ಟಿ.ರವಿ ಎಪಿಸೋಡಿನ ಕೆಲ ಬೆಳವಣಿಗೆಗಳ ಬಗ್ಗೆ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಕುಪಿತರಾಗಿದ್ದಾರೆ ಎಂಬ ಮಾತು ಕಾಂಗ್ರೆಸ್ ಪಾಳಯದಿಂದ ಕೇಳಿ ಬರುತ್ತಿದೆ. ಅಂದ ಹಾಗೆ ಸಿ.ಟಿ.ರವಿ ಅವರು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಬಗ್ಗೆ ಆಡಿದರೆನ್ನಲಾದ ಮಾತುಗಳ ಹಿನ್ನೆಲೆಯಲ್ಲಿ ಪೋಲೀಸರು ಧಿಡೀರ್ ಕ್ರಮ ತೆಗೆದುಕೊಂಡರಲ್ಲ?

ಹೀಗೆ ಕ್ರಮ ತೆಗೆದುಕೊಂಡವರು ಸಿ.ಟಿ.ರವಿ ಅವರನ್ನು ರಾತ್ರಿಯಿಡೀ ಅಲೆದಾಡಿಸಿದರು.ಹೀಗೆ ರವಿಯವರನ್ನು ಪೋಲೀಸರು ಅಲೆದಾಡಿಸಿದ ರೀತಿ ಪರಮೇಶ್ವರ್ ಅವರಿಗೆ ಇಷ್ಟವಾಗಿಲ್ಲವಂತೆ. ತಮ್ಮ ಗಮನಕ್ಕೆ ತಾರದೆ ಈ ಎಪಿಸೋಡಿನಲ್ಲಿ ಪೋಲೀಸರನ್ನು ಬಳಸಿಕೊಳ್ಳಲಾಗಿದೆ. ಹೀಗೆ ಗೃಹ ಸಚಿವರ ಗಮನಕ್ಕೆ ತಾರದೆ ಒಂದು ಎಪಿಸೋಡನ್ನು ನಿರ್ವಹಿಸುವುದು ಎಂದರೆ ಏನರ್ಥ? ಎಂಬ ಅಸಮಾಧಾನ ಪರಮೇಸ್ವರ್ ಅವರಲ್ಲಿದೆ ಎಂಬುದು ಕಾಂಗ್ರೆಸ್ ಪಾಳಯದ ಮಾತು.

ಅಂದ ಹಾಗೆ ಈ ಎಪಿಸೋಡಿನ ಬಗ್ಗೆ ಪ್ರತಿಕ್ರಿಯಿಸಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಕೂಡಾ, ರವಿಯವರನ್ನು ಬಂಧಿಸಿದ ತಕ್ಷಣ ನ್ಯಾಯಾಧೀಶರ ಮುಂದೆ ಹಾಜರುಪಡಿಸಬೇಕಿತ್ತು ಎಂದಿದ್ದಾರೆ. ಅರ್ಥಾತ್, ಸಿ.ಟಿ.ರವಿಯವರನ್ನು ಬಂಧಿಸಿ,ನಡೆಸಿಕೊಂಡ ರೀತಿ ಕಾಂಗ್ರೆಸ್ ಪಾಳಯದಲ್ಲಿ ಮಿಶ್ರಭಾವನೆ ಮೂಡಿಸಿದೆ.

ಕಾಂಗ್ರೆಸ್ಸಿಗೆ ಸಾಧ್ಯವಾದರೆ ಬಿಜೆಪಿಗೇಕೆ ಸಾಧ್ಯವಿಲ್ಲ? (Political analysis)

ಇನ್ನು ಸಿ.ಟಿ.ರವಿ ಎಪಿಸೋಡಿನಲ್ಲಿ ಕಾಂಗ್ರೆಸ್ಸಿಗೆ ಸಾಧ್ಯವಾಗಿರುವುದು ರಾಹುಲ್ ಗಾಂಧಿ ಎಪಿಸೋಡಿನಲ್ಲಿ ಬಿಜೆಪಿಗೇಕೆ ಸಾಧ್ಯವಾಗಿಲ್ಲ?ಎಂಬ ಪ್ರಶ್ನೆ ಕಮಲ ಪಾಳಯದಲ್ಲಿ ಕಾಣಿಸಿಕೊಂಡಿದೆ.

ಇಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬಗ್ಗೆ ಸಿ.ಟಿ.ರವಿ ಆಕ್ಷೇಪಾರ್ಹ ಮಾತುಗಳನ್ನಾಡಿದ ಆರೋಪ ಎದ್ದ ತಕ್ಷಣ ಅವರನ್ನು ಪೋಲೀಸರು ಬಂಧಿಸುತ್ತಾರೆ. ಹೀಗೆ ಒಬ್ಬ ಜನಪ್ರತಿನಿಧಿಯನ್ನು ಎತ್ತಾಕಿಕೊಂಡು ಹೋಗಲು ಪೋಲೀಸರಿಗೆ ನಿಯಮಾವಳಿಗಳ ಅಡ್ಡಿಯೇ ಆಗುವುದಿಲ್ಲ.

ಆದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬಿಜೆಪಿಯ ಸಂಸದರನ್ನು ತಳ್ಳಿ ಬೀಳಿಸುತ್ತಾರೆ.ಬಿದ್ದವರು ಗಾಯಗೊಂಡು ಆಸ್ಪತ್ರೆ ಸೇರುತ್ತಾರೆ.ಆದರೆ ಈ ಎಪಿಸೋಡಿನಲ್ಲಿ ಇದುವರೆಗೆ ರಾಹುಲ್ ಗಾಂಧಿಯವರ ಮೇಲೆ ಕ್ರಮ ಕೈಗೊಳ್ಳಲಾಗಿಲ್ಲ.ಕ್ರಮವಿರಲಿ,ಕನಿಷ್ಟ ಪಕ್ಷ ಸರಿಯಾದ ವಿಚಾರಣೆ ನಡೆಸಲೂ ಆಗಿಲ್ಲ.

ಕರ್ನಾಟಕದಲ್ಲಿ ನಿಯಮಬಾಹಿರವಾಗಿ ರವಿಯವರನ್ನು ಬಂಧಿಸಲು ಕಾಂಗ್ರೆಸ್ ಸರ್ಕಾರಕ್ಕೆ ಸಾಧ್ಯವಾಗಿದೆ.ಆದರೆ ನಿಯಮಪ್ರಕಾರವಾಗಿ ದಿಲ್ಲಿಯಲ್ಲಿ ರಾಹುಲ್ ಗಾಂಧಿ ಅವರ ವಿರುದ್ದ ಕ್ರಮ ಕೈಗೊಳ್ಳುವ ಕೆಲಸವಾಗಿಲ್ಲ ಎಂದರೆ ಏನರ್ಥ?ಅಗ್ರೆಸಿವ್ ರಾಜಕಾರಣದಲ್ಲಿ ಕಾಂಗ್ರೆಸ್ ಗಿರುವ ವೇಗ ಬಿಜೆಪಿಗಿಲ್ಲ ಎಂಬುದು ಕಮಲ ಪಾಳಯದ ಲೇಟೆಸ್ಟ್ ಫೀಲಿಂಗು.

ಲಾಸ್ಟ್ ಸಿಪ್ (Political analysis)

ಅಂದ ಹಾಗೆ ಮೊನ್ನೆ  ಜಾತ್ಯಾತೀತ ಜನತಾದಳದ ಇಬ್ಬರು ನಾಯಕರು ಗಂಭೀರ ಚರ್ಚೆಯಲ್ಲಿ ತೊಡಗಿದ್ದರು. ‘ಅಲ್ಲಾ, ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ತರಲು ನಮ್ಮ ನಾಯಕರು ಹೊರಟಿದ್ದಾರಲ್ಲ? ಇದು ಸಕ್ಸಸ್ ಆಗುತ್ತದಾ?ಅಂತ ಒಬ್ಬ ನಾಯಕರು ಪ್ರಶ್ವಿಸಿದ್ದಾರೆ.

ಇದಕ್ಕೆ ಪ್ರತಿಯಾಗಿ ಮತ್ತೊಬ್ಬ ನಾಯಕರು,ಯಾಕಾಗಲ್ಲ? ಇವತ್ತಿನ ಸ್ಥಿತಿಯಲ್ಲಿ ನಿಖಿಲ್ ಕುಮಾರಸ್ವಾಮಿ ಅಧ್ಯಕ್ಷರಾಗುವುದೇ ಪಕ್ಷಕ್ಕೆ ಸೇಫು ಎಂದಿದ್ದಾರೆ. ‘ಅಲ್ಲಣ್ಣ,ಅಷ್ಟು ಚಿಕ್ಕವರು,ಅನುಭವವೂ ಕಡಿಮೆ.ಅಂತವರು ಪಕ್ಷದ ರಾಜ್ಯಾಧ್ಯಕ್ಷರಾದರೆ ಸೀನಿಯರುಗಳಿಗೆ ಅಸಮಾಧಾನವಾಗುವುದಿಲ್ಲವೇ?’ಅಂತ ಮೊದಲನೆಯವರು ಕೇಳಿದರೆ ಯಥಾ ಪ್ರಕಾರ ಇನ್ನೊಬ್ಬರು‌ ಉತ್ತರಿಸಿದರಂತೆ.

‘ಅಲ್ರೀ,ಸೀನಿಯರುಗಳಿಗೆ ಬೇಸರವಾಗುವುದಿಲ್ಲವೇ?ಅಂತ ಕೇಳುತ್ತಿದ್ದೀರಲ್ಲ?ಅ ಸೀನಿಯರುಗಳು ಯಾರು?ಅವರ ಪೈಕಿ ಯಾರಾದರೊಬ್ಬರಿಗೆ ಅಧ್ಯಕ್ಷ ಸ್ಥಾನ ಕೊಟ್ಟರೆ ನಿರ್ವಹಿಸುತ್ತಾರಾ?ಇವತ್ತು ಪಕ್ಷವನ್ನು ನಿರ್ವಹಿಸುವುದು ಎಂದರೆ ತಮಾಷೆಯಲ್ಲ.ಎಲ್ಲಕ್ಕಿಂತ ಮುಖ್ಯವಾಗಿ ಅಧ್ಯಕ್ಷರಾಗುವವರಿಗೆ ಒಂದು ಹಿನ್ನೆಲೆ‌ ಇರಬೇಕು.ಅದೇ ರೀತಿ ಪಾರ್ಟಿ ಫಂಡು ಹಾಕುವ ಶಕ್ತಿ ಇರಬೇಕು.

ಈ ವಿಷಯದಲ್ಲಿ ನಿಖಿಲ್‌ ಕುಮಾರಸ್ವಾಮಿ ಅವರಿಗಿರುವಷ್ಟು ಪ್ಲಸ್ ಪಾಯಿಂಟು ಬೇರೆ ಯಾರಿಗಿದೆ?ಅವರ ಹಿನ್ನೆಲೆಯಲ್ಲಿ ಅಜ್ಜ ದೇವೇಗೌಡರು,ತಂದೆ ಕುಮಾರಸ್ವಾಮಿ ಅವರಿದ್ದಾರೆ.ಯಾರೇನೇ ಹೇಳಲಿ.ಆದರೆ ಇವತ್ತಿಗೂ ಹಳೆ‌ ಮೈಸೂರು ಭಾಗದಲ್ಲಿ ಒಕ್ಕಲಿಗರ ಅರವತ್ತು ಪರ್ಸೆಂಟ್ ಮತಗಳು ಗೌಡರ ಕುಟುಂಬದ ಜತೆಗಿವೆ.

ನೆನಪಿಡಿ,ಇವತ್ತು ನಾವು ಚನ್ನಪಟ್ಟಣದಲ್ಲಿ ಸೋತಿರಬಹುದು.ಅದರೆ ಮುಂದಿನ ಚುನಾವಣೆಯಲ್ಲಿ ರಾಮನಗರ,ಚನ್ನಪಟ್ಟಣ ಮತ್ತು ಮಾಗಡಿ ಸೇರಿದಂತೆ ಬಹುತೇಕ ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ.ಇದಕ್ಕೆ ಗೌಡರ ಕುಟುಂಬದ ಬಗ್ಗೆ ಬಹುಸಂಖ್ಯಾತ ಒಕ್ಕಲಿಗರಿಗಿರುವ ಅಭಿಮಾನ ಕಾರಣ. ಇಂತಹ ಸಂದರ್ಭದಲ್ಲಿ ದೇವೇಗೌಡರ ಕುಟುಂಬದ ನಿಖಿಲ್‌ಕುಮಾರಸ್ವಾಮಿ ಅಧ್ಯಕ್ಷರಾದರೆ ಬೂಸ್ಟರ್ ಡೋಸು ಕೊಟ್ಟಂತೆ.

ಇದೇ ರೀತಿ ನಿಖಿಲ್‌ ಕುಮಾರಸ್ವಾಮಿ ಅಧ್ಯಕ್ಷರಾದರೆ ಪಾರ್ಟಿ ಫಂಡು ಸಹಜವಾಗಿಯೇ ಬರುತ್ತದೆ.ಹೀಗಿರುವಾಗ ಸೀನಿಯರುಗಳಿಗೆ ಛಾನ್ಸು ಕೊಡಬೇಕು ಅನ್ನುವುದೆಲ್ಲ ಪ್ರಾಕ್ಟಿಕಲ್ ಅಲ್ಲ. ಇನ್ನು ನಿಖಿಲ್‌ಕುಮಾರಸ್ವಾಮಿ ಅವರಿಗೆ ಅನುಭವ ಇಲ್ಲ ಅಂತ ನೀವು ಹೇಳುತ್ತೀರಿ.ಆದರೆ ಚುನಾವಣೆಯಲ್ಲಿ ಗೆದ್ದವರಿಗಿಂತ ಪದೇ ಪದೇ ಸೋಲು ಕಂಡವರು ಹೆಚ್ಚು ಅನುಭವಿಗಳು.ಅಂತವರಿಗೆ ಕಷ್ಟ ಕಾಲದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದರ ಅರಿವು ಇರುತ್ತದೆ,ಸಹನೆ ಇರುತ್ತದೆ ಅಂತ ಈ ನಾಯಕರು ವಿವರಿಸಿದಾಗ ಎದುರಿಗಿದ್ದ ನಾಯಕರು:ನೀವು ಹೇಳಿದ್ದೂ ಸರಿ ಬಿಡ್ರಣ್ಣ’ ಎಂದರಂತೆ.

Read also : Political analysis | ವಿಜಯೇಂದ್ರ ಟೀಮಿಗೆ ಸರ್ಜರಿ ಫಿಕ್ಸ್

ಆರ್.ಟಿ.ವಿಠ್ಠಲಮೂರ್ತಿ

TAGGED:Dinamana.comKannada NewsPolitical Analysisಕನ್ನಡ ಸುದ್ದಿದಿನಮಾನ.ಕಾಂರಾಜಕೀಯ ವಿಶ್ಲೇಷಣೆ
Share This Article
Twitter Email Copy Link Print
Previous Article Davangere MP Dr. Prabha Mallikarjun DAVANAGERE | ವಿದ್ಯಾರ್ಥಿಗಳಿಗೆ ದಾವಣಗೆರೆಯಲ್ಲಿಯೇ ಉದ್ಯೋಗ ಆಧಾರಿತ ತರಬೇತಿ ನೀಡಲು ಸಂಸದರ ದಿಟ್ಟ ಹೆಜ್ಜೆ 
Next Article DAVANAGERE Davanagere | ಸರ್ಕಾರದ ಸೌಲಭ್ಯಗಳನ್ನು ಸಕಾಲದಲ್ಲಿ ತಲುಪಿಸಿ : ಡಿಸಿ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
ವಾರದ ಕಥೆವಾರದ ಕಥೆ

Popular Posts

ಹರಿಹರ : ವಿದ್ಯುತ್ ವ್ಯತ್ಯಯ

ಹರಿಹರ:  ತಾಲ್ಲೂಕಿನ ಕುರುಬರಹಳ್ಳಿ 66/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ನಿಮಿತ್ತ ಜೂ.30 ರಂದು ಬೆಳಿಗ್ಗೆ…

By Dinamaana Kannada News

Power outage | ಮೇ.13 ರಂದು ವಿದ್ಯುತ್ ವ್ಯತ್ಯಯ

ದಾವಣಗೆರೆ (Davanagere): ದಾವಣಗೆರೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಮಹಾನಗರಪಾಲಿಕೆ ವತಿಯಿಂದ ಪಾದಚಾರಿರಸ್ತೆ  (ಪುಟ್ಟಪಾತ್)ಕಾಮಗಾರಿ ಕೆಲಸ ಹಮ್ಮಿಕೊಂಡಿರುವುದರಿಂದ ಮೇ.13 ರಂದು…

By Dinamaana Kannada News

Davanagere : ಗಾಂಜಾ ಮಾರಾಟ ಆರೋಪಿ ಬಂಧನ

ದಾವಣಗೆರೆ (Davanagere):  ನಗರದ ಬಾಡಕ್ರಾಸ್ ನಿಂದ ಆಂಜನೇಯ ಕಾಟನ್ ಮೀಲ್ ಕಡೆ ಹೋಗುವ ಸಾರ್ವಜನಿಕ ರಸ್ತೆಯಲ್ಲಿ ಅಕ್ರಮವಾಗಿ ಗಾಂಜಾ ಸಾರ್ವಜನಿಕರಿಗೆ…

By Dinamaana Kannada News

You Might Also Like

bhadra-dam
ತಾಜಾ ಸುದ್ದಿ

Bhadra dam | ಭದ್ರಾ ಜಲಾಶಯ : ತುಂಬಲು ದಿನಗಣನೆ ಆರಂಭ

By Dinamaana Kannada News
Dinesh K Shetty
ತಾಜಾ ಸುದ್ದಿ

ದಾವಣಗೆರೆ|ದೇಶ ಮತ್ತು ಯೋಧರ ವಿಚಾರದಲ್ಲಿ ರಾಜಕೀಯ ಸಲ್ಲ: ದಿನೇಶ್ ಕೆ ಶೆಟ್ಟಿ

By Dinamaana Kannada News
recruitment for posts in BSF
ತಾಜಾ ಸುದ್ದಿ

BSFನಲ್ಲಿ 3588 ಹುದ್ದೆಗಳ ಭರ್ಜರಿ ನೇಮಕಾತಿ

By Dinamaana Kannada News
Gold price
ತಾಜಾ ಸುದ್ದಿ

ಮೂರು ದಿನಗಳಲ್ಲಿ ಚಿನ್ನದ ಬೆಲೆ 2,400 ರೂ. ಇಳಿಕೆ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?