ಹರಿಹರ : ಭದ್ರಾ ಬಲದಂಡೆ ನಾಲೆ ಸೀಳಿ ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಬಹು ಗ್ರಾಮಗಳಿಗೆ ನೀರು ಹರಿಸುವ ಅವೈಜ್ಞಾನಿಕ ಯೋಜನೆ ವಿರೋಧಿಸಿ ಜುಲೈ 4ರ ಶುಕ್ರವಾರ ಹರಿಹರದ ಶಿವಮೊಗ್ಗ ರಸ್ತೆಯ ಪಕೀರಸ್ವಾಮಿ ಮಠದಿಂದ ತಹಶೀಲ್ದಾರ್ ಕಚೇರಿಯ ವರೆಗೆ ಪ್ರತಿಭಟನೆ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ತಿಳಿಸಿದರು.
ಜೆಡಿಎಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷಾತೀತ ಪ್ರತಿಭಟನೆಯಾಗಿದ್ದು, ಕನ್ನಡಪರ ಸಂಘಟನೆಗಳು, ರೈತಪರ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು ಹಾಗೂ ಶಾಸಕ ಬಿ.ಪಿ ಹರೀಶ್, ಮಾಜಿ ಶಾಸಕ ಎಸ್.ರಾಮಪ್ಪ, ಎಂಎಲ್‍ಎ ಆಕಾಂಕ್ಷಿತರು ಪಾಲ್ಗೊಳ್ಳಬೇಕೆಂದು ಮಾಧ್ಯಮದ ಮೂಲಕ ಆಹ್ವಾನ ನೀಡಿದರು.
ಭದ್ರಾ ಬಲದಂಡೆ ನಾಲೆ ಸೀಳಿ ಚಿತ್ರದುರ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಗ್ರಾಮಗಳಿಗೆ ನೀರು ಹರಿಸುವ ಅವೈಜ್ಞಾನಿಕ ಕಾಮಗಾರಿಯನ್ನು ತಡೆಯಲು ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಸೇರಿದಂತೆ ಸ್ಥಳೀಯ ಕಾಂಗ್ರೆಸ್ ಮುಖಂಡರಿಗೆ ಸವಾಲು ಹಾಕಿದ್ದಾರೆ.
Read also : ದಾವಣಗೆರೆ | ಸಂಚಾರಿ ನಿಯಮ ಉಲ್ಲಂಘನೆ : ಆಟೋಗಳ ಮೇಲೆ 07 ಪ್ರಕರಣ ದಾಖಲು
ಗೋಷ್ಟಿಯಲ್ಲಿ ನಗರಸಭಾಧ್ಯಕ್ಷೆ ಕವಿತಾ ಮಾರುತಿ ಬೇಡರ, ಸದಸ್ಯರಾದ ವಿರುಪಾಕ್ಷಿ, ಬಿ ಅಲ್ತಾಫ್, ಮಾಜಿ ಅಧ್ಯಕ್ಷ ಬಿ.ಸುರೇಶ್, ಮುಖಂಡರಾದ ಸಿರಿಗೇರೆ ಜಿ.ಎಂ ಪರಮೇಶ್ ಗೌಡ್ರು, ಸದಾನಂದ, ರಮೇಶ್, ಮಾರುತಿ ಬೇಡರ, ಬಾವಿಕಟ್ಟಿ ಮಲ್ಲಿಕಾರ್ಜುನ್, ಖಡರನಾಯಕನಹಳ್ಳಿ ಅಶೋಕ್, ಜಿ ನಂಜಪ್ಪ, ಅಡಿಕೆ ಪ್ರೇಮ್ ಕುಮಾರ್, ಮಹದೇವಪ್ಪ, ಭಾನುವಳ್ಳಿ ರುದ್ರೇಶ್, ಬಸವರಾಜಪ್ಪ ಸಂಗಮೇಶ್ ಮಂಜುಳಮ್ಮ, ಆಸಿಫ್, ವಿನಾಯತ್, ನಾಗರಾಜ್ ಮತ್ತಿತರರಿದ್ದರು.