Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ಅಭಿವೃದ್ಧಿ ಸಂಸ್ಥೆಯ ಸಿಲ್ಕ್ ಇಂಡಿಯಾ-2024 :  ರೇಷ್ಮೆ ಸೀರೆಗಳ ಬೃಹತ್‌ ಪ್ರದರ್ಶನ ಮತ್ತು ಮಾರಾಟಕ್ಕೆ   ಚಾಲನೆ 
ತಾಜಾ ಸುದ್ದಿ

ಅಭಿವೃದ್ಧಿ ಸಂಸ್ಥೆಯ ಸಿಲ್ಕ್ ಇಂಡಿಯಾ-2024 :  ರೇಷ್ಮೆ ಸೀರೆಗಳ ಬೃಹತ್‌ ಪ್ರದರ್ಶನ ಮತ್ತು ಮಾರಾಟಕ್ಕೆ   ಚಾಲನೆ 

Dinamaana Kannada News
Last updated: May 24, 2024 4:46 pm
Dinamaana Kannada News
Share
silka india davanagere
ಅಭಿವೃದ್ಧಿ ಸಂಸ್ಥೆ ವತಿಯಿಂದ ಆಯೋಜಿಸಿರುವ ಸಿಲ್ಕ್ ಇಂಡಿಯಾ-2024 ರೇಷ್ಮೆ ಸೀರೆಗಳ ಬೃಹತ್‌ ಪ್ರದರ್ಶನಕ್ಕೆ ಚಾಲನೆ
SHARE

Kannada News | Dinamaana.com | 24-05-2024 

ದಾವಣಗೆರೆ :  ನಗರದ ಪೂಜಾ ಇಂಟರ್ ನ್ಯಾಷನಲ್ ಹೊಟೇಲ್ ನಲ್ಲಿ ಅಭಿವೃದ್ಧಿ ಸಂಸ್ಥೆ  ವತಿಯಿಂದ  ಸಿಲ್ಕ್ ಇಂಡಿಯಾ-2024 ರೇಷ್ಮೆ ಸೀರೆಗಳ ಬೃಹತ್‌ ಪ್ರದರ್ಶನಕ್ಕೆ   ಮಿಸ್ ದಾವಣಗೆರೆ ಸೃಜನಾ ಮತ್ತು ರೂಪದರ್ಶಿ ಮೋನಿಕಾ ಅವರು ಚಾಲನೆ ನೀಡಿದರು.

24.5.2024 ರಿಂದ  2.6.2024 ವರೆಗೆ 10 ದಿವಸಗಳ ಕಾಲ ಹೋಟೆಲ್ ಪೂಜಾ ಇಂಟರ್‌ ನ್ಯಾಶನಲ್ ಪ್ರದರ್ಶನ ನಡೆಯಲಿದೆ. ರೇಷ್ಮೆ ಉತ್ಪಾದನೆಯಲ್ಲಿ ಪ್ರಪಂಚದಲ್ಲಿಯೇ ಮುಂಚೂಣಿಯಲ್ಲಿದ್ದು, ಭಾರತದಲ್ಲಿ ಉತ್ಪಾದನೆಯಾಗುವ ರೇಷ್ಮೆಗೆ ರಾಷ್ಟ್ರೀಯ ಅಂತರರಾಷ್ಟ್ರೀಯ ಮತ್ತು ಮಾರುಕಟ್ಟೆಯಲ್ಲಿ ಬಹಳ ಬೇಡಿಕೆಯಿದೆ.

ದೇಶದಲ್ಲಿ ವಾಯುಗುಣ ಮತ್ತು ನಿಸರ್ಗಕ್ಕೆಅನುಗುಣವಾಗಿ 4 ವಿವಿಧ ಪ್ರಭೇದದ ರೇಷ್ಮೆಗಳಿದ್ದು ಅವುಗಳಲ್ಲಿ ತಸ್ಸರ್, ಎರಿ, ಮುಲ್‌ಬಾರಿ ಮತ್ತು ಮುಗಾ ರೇಷ್ಮೆಯ ಪ್ರಮುಖವಾಗಿದ್ದು, ಇದರಲ್ಲಿ  ಟಸ್ಸರ್ ಮತ್ತು ಮುಗಾ ರೇಷ್ಮೆಯು ಒಂದು ನೈಜವಾದ ಹಾಗೂ ಉಷ್ಣವಲಯದಲ್ಲಿ ಬೆಳೆಯುವ ವನ್ಯ ರೇಷ್ಮೆ ಹಾಗೂ ಸಾವಯವ (ಆರ್ಗಾನಿಕ್) ರೇಷ್ಮೆಯಾಗಿದೆ. ತಸ್ಸರ್ ಮತ್ತು ಮುಗಾರೇಷ್ಮೆ ಉತ್ಪಾದನೆಯಲ್ಲಿ ಅಸ್ಸಾಂ, ಬಿಹಾರ್ ಮತ್ತು ಛತ್ತೀಸ್ ಘಡ  ರಾಜ್ಯಗಳು ದೇಶದಲ್ಲಿ ಪ್ರಮುಖವಾಗಿದೆ.

ಅಭಿವೃದ್ಧಿ  ಸಂಸ್ಥೆಯನ್ನು ಭಾರತದಲ್ಲಿರುವ ಕುಶಲಕರ್ಮಿಗಳು ಮತ್ತು ನೇಕಾರರ ಶ್ರೋಯೋಭಿವೃದ್ಧಿಗಾಗಿ ಮೈಸೂರಿನಲ್ಲಿ ಸ್ಥಾಪಿಸಲಾಗಿದೆ. ನೇಕಾರರು ಮತ್ತು ಕುಶಲಕರ್ಮಿಗಳು ಉತ್ಪಾದಿಸುವ ಉತ್ಪನ್ನಗಳಿಗೆ ದೇಶದ ಮುಖ್ಯ ನಗರಗಳಲ್ಲಿ ಮಾರಾಟ ಮೇಳವನ್ನು ಆಯೋಜಿಸುವ ಮೂಲಕ ನೇರವಾಗಿ ಅವರ ಉತ್ಪನ್ನಗಳು ಗ್ರಾಹಕರಿಗೆ ತಲುಪಿಸುವಂತೆ  ವ್ಯವಸ್ಥೆ ಮಾಡುವುದು ಮತ್ತು ಮಧ್ಯವರ್ತಿಗಳ ಹಾವಳಿಯಿಲ್ಲದೆ ನೇಕಾರರೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿ ಲಾಭವನ್ನು ಹೆಚ್ಚು ಗಳಿಸುವಂತೆ ಮಾಡುವ ಉದ್ದೇಶವನ್ನು ಸಂಸ್ಥೆಯು ಹೊಂದಿದೆ.

ಕಾಂಚಿಪುರಂವರೆಗಿನ  ರೇಷ್ಮೆ ಸೀರೆ ಉತ್ಪಾದಕರು, ರೇಷ್ಮೆ ಸೀರೆ ವಿನ್ಯಾಸಗಾರರು ಮತ್ತು ರೇಷ್ಮೆ ಸಹಕಾರ ಸಂಘಗಳು 60 ಕ್ಕೂ ಹೆಚ್ಚಿನ ಮಳಿಗೆಗಳಲ್ಲಿ ತಮ್ಮ ರಾಜ್ಯದ ಸಾಂಪ್ರದಾಯಿಕ ರೇಷ್ಮೆ ಸೀರೆ  ಮತ್ತು  ಉತ್ಪನ್ನಗಳನ್ನು ದಾವಣಗೆರೆ ಜನತೆಯ ಮುಂದೆ ಪ್ರತಿ ದಿನ ಬೆಳಿಗ್ಗೆ 10.30  ರಿಂದ ರಾತ್ರಿ 8.30 ರವರೆಗೆ ಪ್ರದರ್ಶಿಸಿ ಮಾರಾಟ ಮಾಡುವರು.

ಮೇಳದಲ್ಲಿ ತಸ್ಸರ್‌ರೇಷ್ಮೆ ಸೀರೆಗಳು, ಕ್ರೇಪ್ ಮತ್ತುಜಾರ್ಜೆಟ್ ಸಿಲ್ಕ್ ಸೀರೆಗಳು, ಅರಿಣಿ ರೇಷ್ಮೆ ಸೀರೆಗಳು, ಧರ್ಮಾವರಂ ಸೀರೆಗಳು, ಕಾಂಚಿಪುರಂ ಸಿಲ್ಕ್ ಮತ್ತು ಮದುವೆ ಸೀರೆಗಳು, ರಾ ಸಿಲ್ಕ್ ಮತ್ತು ಕೋಸಾ ಸೀರೆಗಳು, ಕಲ್ಕೊತ್ತಾ ಗಣಪತಿ ಸೀರೆಗಳು, ಢಾಕ ಸೀರೆಗಳು, ಡಿಸೈನರ್‌ಎಂಬ್ರಾಯಿಡರಿ ಸೀರೆ ಮತ್ತು ಡ್ರೆಸ್, ಬಾಲು ಚೆರಿ  ರೇಷ್ಮೆ, ಮಟ್ಕಾ ಸೀರೆಗಳು, ಪ್ರೀಂಟೆಡ್ ಸೀರೆಗಳು, ಪಶ್ಮೀನಾ ಸೀರೆಗಳು, ಡಿಸೈನರ್‌ ಡ್ರೆಸ್ ಮೇಟಿರಿಯಲ್ ಗಳು ಮತ್ತು ಸೀರೆಗಳು, ಬಾಗಲ್‌ಪುರ್‌ ರೇಷ್ಮೆ ಸೀರೆ ಮತ್ತು ಡ್ರೆಸ್, ಉಪ್ಪಡಾ ಮತ್ತು ಗೊಡ್ವಾಲ್ ಸೀರೆಗಳು, ಮಹೇಶ್ವರಿ ಮತ್ತು ಕೋಟಾ ಸಿಲ್ಕ್, ಟೆಂಪಲ್ ಬಾರ್ಡಾರ್‌ ಉಳ್ಳ ಮಲ್ಬೆರಿ  ಸಿಲ್ಕ್, ಕಲ್ಕೋತ್ತಾ ರೇಷ್ಮೆ ಸೀರೆಗಳು, ಬನಾರಸ್ ಮತ್ತು ಜಮ್‌ದಾನಿ ರೇಷ್ಮೆ, ಶಿಫಾನ್ ಸೀರೆಗಳು, ಬುಟ್ಟಿ ಸೀರೆಗಳು, ಚಂದೇರಿ ಸಿಲ್ಕ್ ಮತ್ತು  ಕೈ ಅಚ್ಚಿನ ಸೀರೆಗಳು ಪ್ರದರ್ಶನಗೊಳ್ಳಲಿದೆ.

ಹೆಚ್ಚಿನ ವಿವರಗಳಿಗೆ ದಯವಿಟ್ಟು ಸಂಪರ್ಕಿಸಿ  : ದೂರವಾಣಿ: 8660714252,

TAGGED:Development Agency silk india.dinamaana.comLatest Kannada Newsಅಭಿವೃದ್ಧಿ ಸಂಸ್ಥೆ .ಕನ್ನಡ ಸುದ್ದಿದಿನಮಾನ.ಕಾಂ
Share This Article
Twitter Email Copy Link Print
Previous Article sanduru ಸೊಂಡೂರಿನ ಕಗ್ಗತ್ತಲೆಯ ಕಥನಗಳು-33 ಊರು ನಮ್ಮದಲ್ಲವೋ…ನಾವೇ ಈ ಊರಿನವರಲ್ಲವೋ ಹೇಗೆ ಹೇಳುವುದು?
Next Article davanagere ಪತ್ರಕರ್ತರಿಗೆ ಸಾಮಾಜಿಕ ಹೊಣೆಗಾರಿಕೆ ಹೆಚ್ಚು : ಡಾ.ಶಿವಕುಮಾರ್ ಕಣಸೋಗಿ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

ಸೊಂಡೂರಿನ ಕಗ್ಗತ್ತಲೆಯ ಕಥನಗಳು-15 ಬದಲಾದ ರಾಜಕಾರಣದ ವರಸೆಗಳು

ಈ ಹಿಂದೆಯೂ ಗಣಿಗಾರಿಕೆ ಇರಲೇ ಇಲ್ಲ ಅಂತೇನಿಲ್ಲ. ಕೇವಲ 'ಎ' ಮತ್ತು 'ಬಿ' ವರ್ಗದ ಗಣಿಗಾರಿಕೆಯಿತ್ತು. ಕೆಲವೇ ಕೆಲವು ಕಂಪೆನಿಗಳ…

By Dinamaana Kannada News

ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ಅಗತ್ಯ ; ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ/ಲಕ್ಷ್ಮೀಶ್ವರ  ಜ. 19 (Davanagere) ; ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಬೇಕು ಎಂದು ದಾವಣಗೆರೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಸಲಹೆ…

By Dinamaana Kannada News

ವಿಜಯೇಂದ್ರ ಕ್ಯಾಂಪಿನ ಕನಸುಗಳು..

Kannada News | Dinamaana.com | 01-07-2024 ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಇತ್ತೀಚೆಗೆ ದಿಲ್ಲಿಗೆ ಹೋಗಿದ್ದರು. ಲೋಕಸಭಾ ಚುನಾವಣೆಯ…

By Dinamaana Kannada News

You Might Also Like

Farmers' registration process for crop insurance scheme begins
ತಾಜಾ ಸುದ್ದಿ

ಬೆಳೆವಿಮೆ ಯೋಜನೆಗೆ ರೈತರ ನೋಂದಣಿ ಪ್ರಕ್ರಿಯೆ ಆರಂಭ

By Dinamaana Kannada News
Davangere
ತಾಜಾ ಸುದ್ದಿ

Davanagere | ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ : ಆರೋಪಿಗೆ 20 ವರ್ಷ ಕಠಿಣ ಶಿಕ್ಷೆ

By Dinamaana Kannada News
Davanagere
ತಾಜಾ ಸುದ್ದಿ

Davanagere | ಕಂಪ್ಯೂಟರ್ ಆಧಾರಿತ ಕಂಬೈನ್ಡ್ ಗ್ರ್ಯಾಜುಯೇಟ್ ಲೆವೆಲ್ ಪರೀಕ್ಷೆಗಾಗಿ ಅರ್ಜಿ ಆಹ್ವಾನ

By Dinamaana Kannada News
Davanagere
ತಾಜಾ ಸುದ್ದಿ

Davanagere | ನಿಮ್ಮೊಂದಿಗೆ ನಾವಿದ್ದೇವೆ ಧೈರ್ಯದಿಂದಿರಿ : ರೈತರಿಗೆ ಸಚಿವರಿಂದ ಅಭಯ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?