ದಾವಣಗೆರೆ, ಜೂ.21 : ನಗರದ ದೇವಾಂಗ ಸಂಘದ ವತಿಯಿಂದ 7ನೇ ವರ್ಷದ ದೇವಾಂಗ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಎಸ್.ಎಸ್.ಎಲ್.ಸಿ. ಸ್ಟೇಟ್ ಸಿಲಬಸ್‍ನಲ್ಲಿ ಶೇ. 85, ಸಿಬಿಎಸ್‍ಇ ಎಸ್ಸೆಸ್ಸೆಲ್ಸಿಯ ಪಠ್ಯಕ್ರಮದಲ್ಲಿ ಶೇ.75 ಹಾಗೂ ಪಿಯುಸಿಯಲ್ಲಿ ಶೇ.85ರಷ್ಟು ಅಂಕ ಪಡೆದಿರುವ ದೇವಾಂಗ ವಿದ್ಯಾರ್ಥಿಗಳು ಅಂಕಪಟ್ಟಿ, ಪ್ರಮಾಣ ಪತ್ರ ಮತ್ತು ಇತ್ತೀಚಿನ ಪೋಟೋ ದೊಂದಿಗೆ ಜೂ.30 ರೊಳಗಾಗಿ ಶ್ರೀ ದೇವಾಂಗ ವಿದ್ಯಾರ್ಥಿ ನಿಲಯ, ಡಾ. ಪುರಂದರ ಆಸ್ಪತ್ರೆ ರಸ್ತೆ, ಎಂ.ಸಿ.ಸಿ. ‘ಎ’ ಬ್ಲಾಕ್, ದಾವಣಗೆರೆ ಇಲ್ಲಿಗೆ ಅರ್ಜಿ ಸಲ್ಲಿಸತಕ್ಕದ್ದು.
ಹೆಚ್ಚಿನ ಮಾಹಿತಿಗಾಗಿ 94494 22359, 98806 62036, 89715 90727, 91648 29666 ದೇವಾಂಗ ಸಂಘದ ಅಧ್ಯಕ್ಷರಾದ ಬಿ.ಎನ್. ಬಾಬು, ಸಂಪರ್ಕಿಸಬಹುದೆಂದು ತಿಳಿಸಿದ್ದಾರೆ.