Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > ದುಡಿಯುವ ಜನರ ಹನಿ ಬೆವರಿನಲ್ಲಿ ಸೂರ್ಯನನ್ನು ಕಾಣುವ ಕವಿ-ಇಸ್ಮಾಯಿಲ್ ಎಲಿಗಾರ್
Blog

ದುಡಿಯುವ ಜನರ ಹನಿ ಬೆವರಿನಲ್ಲಿ ಸೂರ್ಯನನ್ನು ಕಾಣುವ ಕವಿ-ಇಸ್ಮಾಯಿಲ್ ಎಲಿಗಾರ್

Dinamaana Kannada News
Last updated: July 12, 2024 5:13 am
Dinamaana Kannada News
Share
dinamaana Ismail Eligar
ಕವಿ-ಇಸ್ಮಾಯಿಲ್ ಎಲಿಗಾರ್
SHARE

Kannada News | Dinamaanada Hemme  | Dinamaana.com | 12-07-2024

ಪ್ರಜಾಶಕ್ತಿಯೇ ಮೇಲುಗೈ (Ismail Eligar)

ಹರಪನಹಳ್ಳಿ ಎಂಬ ದೊಡ್ಡ ಹಳ್ಳಿ ಅದೆಷ್ಟು ಜನರಿಗೆ ಆಸರೆ ನೀಡಿದೆ ಎಂಬುದನ್ನು ಯೋಚಿಸಿದರೆ ಆಶ್ಚರ್ಯವಾಗುತ್ತದೆ.

ಇಲ್ಲಿನ ಜನರ ಸಹಜ ಮಾತು,ಕತೆ,ಕವಿತೆಗಳಿಗೂ ಅಂತಹ ಅಂತರವೇನಿಲ್ಲ.ಜಗತ್ತು ಇಪ್ಪತ್ತೆರಡನೆಯ ಶತಮಾನದತ್ತ ದಾಪುಗಾಲು ಹಾಕುತ್ತಿದ್ದರೂ “ಇಲ್ಲಿ ಸ್ವಲ್ಪ ತಿರುಗಿ ..”ಎಂದು ಹನ್ನೆರೆಡನೆ ಶತಮಾನದ ಶರಣರ ಕಾಯಕಜೀವಿಗಳ ಕಥನವನ್ನು ಹೇಳುವ ಹಲವಾರು ದಾರಿಗಳಿವೆ. ಅದೇನು ಕಾರಣವೋ ಏನೋ…ಈ ಊರಿನಲ್ಲಿ ರಾಜಕೀಯದ  ರಾಜ್ಯಶಕ್ತಿಗಿಂತ ಪ್ರಜಾಶಕ್ತಿಯೇ ಮೇಲುಗೈ ಸಾಧಿಸಿದೆ.

 ನನ್ನ ಕವನದ ಸಾಲುಗಳು

ದುಡಿವ ಜನರ ಬೆವರ ಹನಿಗಳು:

ಹನಿ ಬೆವರಿನಲ್ಲಿ

ನನ್ನವರು ಕೋಟಿ ಸೂರ್ಯರು;

ಅವರೊಮ್ಮೆ

ಗಟ್ಟಿಯಾಗಿ ಕೂಗಿದರೆ ಸಾಕು,

ಅಂಗವಿಕಲರಾಗುತ್ತಾರೆ

ಇಲ್ಲಿನ ಜೀವವಿರೋಧಿಗಳು

ಜನರ ಹನಿ ಬೆವರಿನಲ್ಲಿ ಸೂರ್ಯನನ್ನು ಕಾಣುವ ಕವಿ (Ismail Eligar)

ಹೀಗೆ ಗಟ್ಟಿಯಾಗಿ ಹೇಳುವವರನ್ನು, ಖಂಡಿತ ಎಡವಾದಿ ಬದ್ಧತೆಯ ಮತ್ತು ಹೋರಾಟಗಳ ಹಾದಿಯಲ್ಲಿ ಸಾಗುತ್ತಿರುವ ಕವಿ ಎಂದು ಸುಲಭವಾಗಿ ಊಹಿಸಬಹುದು.

ಹರಪನಹಳ್ಳಿಯ ಹಲವು ಪ್ರಗತಿಪರ ಚಿಂತಕರ ಪೈಕಿ , ದುಡಿಯುವ ಜನರ ಹನಿ ಬೆವರಿನಲ್ಲಿ ಸೂರ್ಯನನ್ನು ಕಾಣುವ ಕವಿಯ ಕಾಣ್ಕೆ ಇಸ್ಮಾಯಿಲ್ ಎಲಿಗಾರರ ಪ್ರತಿಭೆಗೆ ಮತ್ತು ಬದ್ಧತೆಗೆ ಸಾಕ್ಷಿಯಂತಿದೆ.

“ಲಿಂಗಾರ್ಚನೆ ಮಾಡುವ ಮಹಿಮರೆಲ್ಲ ಸಲುಗೆಯಿಂದ ಒಳಗೈದಾರೆ.ಆನು ದೇವಾ ಹೊರಗಣವನು, ನಿಮ್ಮ ನಾಮವಿಡಿದ ಅನಾಮಿಕ ನಾನು.ಸಂಬೋಳಿ ಸಂಬೋಳಿ ಎಂದು ಇಂಬಿನಲ್ಲಿ ಇದ್ದೇನೆ “ಚಳುವಳಿಯ ಸಂಕೇತದಂತೆ ಇರುವ ಬಸವಣ್ಣನವರ ಈ ವಚನ ಈ ನೆಲದಲ್ಲಿ ಸದಾ ಪಿಸುಗುಟ್ಟುವಂತೆ ಕೇಳಿಸುತ್ತದೆ.

ಸಮತಾವಾದವನ್ನೇ ಉಸಿರಾಡುವ ಮೇಷ್ಟ್ರು (Ismail Eligar)

ಅಸ್ಪೃಶ್ಯರು ಊರ ಒಳಗೆ ಬರುವ ಸಂದರ್ಭದಲ್ಲಿ ಬಳಸುವ ಸಂಬೋಳಿ ಪದವನ್ನೇ ಬಸವಣ್ಣ ಬಳಸಿದ್ದಾರೆ. ಬಸವಣ್ಣ ಶಿವಾಲಯದ ಹೊರಗೆ ಅಸ್ಪೃಶ್ಯ ರ ಜೊತೆ ನಿಂತು ಅವರಿಗೆ ಮಾನಸಿಕ ಧೈರ್ಯ ತುಂಬುವ ಮತ್ತು ಒಳಗಿರುವ ಜನರ ಟೊಳ್ಳನ್ನು ಬಯಲಿಗೆಳೆಯುವ ಕೆಲಸವನ್ನು , ಹರಪನಹಳ್ಳಿಯ ಕೆಲ ಸಂಗಾತಿಗಳು ತಮ್ಮ ಬರೆಹ ಮತ್ತು ಬದುಕಿನ ಮೂಲಕ ಮಾಡುತ್ತಿದ್ದಾರೆ.

Read also : ದಿನಮಾನಹೆಮ್ಮೆ: ಬಂಡಾಯದ ಕೂಗು:ಡಿ.ಬಿ.ಬಡಿಗೇರ ಮಾಸ್ತರ

ಅಂತಹ ಸಂಗಾತಿಗಳ ಪೈಕಿ ಇಸ್ಮಾಯಿಲ್ ಎಲಿಗಾರ್ ಮೇಷ್ಟ್ರು ಕೂಡ ಒಬ್ಬರು. ಕವಿಗೋಷ್ಟಿಯಿರಲಿ, ರಾಜಕಾರಣಿಗಳ ಮೇಳ ಇರಲಿ, ಮನೆ ಮನೆಯ ಚರ್ಚೆಗಳಿರಲಿ, ಮದುವೆ ಮನೆಯೇ ಆಗಿರಲಿ, ಇವರಿದ್ದಲ್ಲಿ  ಲವಲವಿಕೆಯ ಅಂತರ್ ಪ್ರವಾಹ ಸದಾ ಹರಿಯುತ್ತಿರುತ್ತದೆ.

“…..ಸಮತೆಯೆಂಬುದು ಯೋಗದಾಗು ನೋಡಾ”ಎಂದು ಶರಣ ಹಾವಿನಾಳು ಕಲ್ಲಯ್ಯನ ಹಾಗೆ ಸಮತಾವಾದವನ್ನೇ ಉಸಿರಾಡುವ ಎಲಿಗಾರ್ ಮೇಷ್ಟ್ರು ,

 ಬರೆಯಬೇಕು

ನಮ್ಮ ಮನೆಯ

ಗೋಡೆಯ ಕ್ಯಾಲೆಂಡರ್ ತುಂಬ

ಸಮತೆಯ ಹಾಡು;

….ಮನುಷ್ಯರೆಲ್ಲಾ ಒಂದಾಗಿ

ಕೋಮು ಸಾಮರಸ್ಯಕ್ಕೆ ಮುಂದಾಗಿ

ಎಂದು ಬರವಣಿಗೆ ಎಂಬ ಚಳುವಳಿಗಳ ಮೂಲಕ ಹೋರಾಟಗಳಿಗೆ ಅಣಿಯಾಗುತ್ತಾರೆ.

ಪ್ರಿಯ ನೆಲವೇ….ಎಂದು ಅಂತಃಕರಣದಿಂದ ಪಿಸುಗುಟ್ಟುವಂತೆ ಕೇಳಿಸುವ ಪದವನ್ನೇ ಸಂಕಲನದ ಹೆಸರಿಟ್ಟ ಕವಿ ಎಲಿಗಾರ್,

ನಮ್ಮ ಮನೆಯ

ಗೋಡೆಯ ಕ್ಯಾಲೆಂಡರ್ತುಂಬಾ

ರಕ್ತದ ಕಲೆಗಳು

ಹಸಿರಾಗಿ ಮತ್ತೆ ಮತ್ತೆ..

ಕೇಸರಿಯಾಗಿ,

ಇಲ್ಲಿ ಮನುಷ್ಯ

ಮನುಷ್ಯನನ್ನೇ ಕೊಲ್ಲುತ್ತಿದ್ದಾನೆ

ಪ್ರಿಯ ನೆಲವೇ

ಮರೆತು ಬಿಟ್ಟೆಯಾ

ಉದ್ದಗಲದ ನಿನ್ನ ಚರಿತ್ರೆಯ

ಕವಿತೆಯ ಉದ್ದಕ್ಕೂ ದೇಶದ ಚರಿತ್ರೆ,ವರ್ತಮಾನಗಳ ವಿಷಾದ ಮತ್ತು ಸಂಕಟದ  ಅನುಭವಗಳನ್ನು ತೆರೆದಿಡುತ್ತಾರೆ.ಅಷ್ಟೇ ಅಲ್ಲದೆ,

ಬರೆಯಬೇಕು

ನಮ್ಮ ಮನೆಯ ಗೋಡೆಯ ತುಂಬ

ಸಮತೆಯ ಹಾಡು;

ಎಂದು ಆಶಿಸುತ್ತಾರೆ.

ಇಡೀ ಕವಿತೆಯಲ್ಲಿ ಕವಿ ಉಸುರುವ “ಪ್ರಿಯ ನೆಲವೇ..”ಎನ್ನುವುದಿದೆಯಲ್ಲ ಓದುಗನ ಎದೆ ತಟ್ಟುತ್ತದೆ.ಜಾಗತೀಕರಣದ ದಾಳಿಗೆ ತುತ್ತಾದ ಎಷ್ಟೋ ಜನರ ಪಾಲಿಗೆ , ಪೋಖ್ರಾನ್ ನೆಲ , ಕಾರ್ಗಿಲ್ ಯುದ್ಧ , ಇಂದಿಗೂ ನಡುಕ ತರಿಸಬಲ್ಲುದು.

 ಅನ್ನ,ಬಟ್ಟೆ,ಬದಲಿಗೆ

ಬಾಂಬ್ ನೀಡಿದವರೇ

ಬಯಲಾಯಿತು ನಿಮ್ಮ ಬಣ್ಣ:

ನೀವಿಟ್ಟ ಹೆಜ್ಜೆಗಳೇ

ನಿಮಗೆ ಸಾವಾಗುತ್ತವೆ.

ಎಂದು ಹೇಳುತ್ತಲೇ ಜಗತ್ತಿನ ಸುತ್ತ ಕಣ್ಣು ಹಾಯಿಸುವ ಕವಿಗೆ,

ಮಾರುಕಟ್ಟೆ ತುಂಬಾ ಹೆಣದ ರಾಶಿಗಳೇ ಕಾಣಿಸುವ ರೂಪಕ ಹೆಚ್ಚು ಕಾಡುತ್ತದೆ.

ಅಭಿನಯ , ಬರವಣಿಗೆ,ನಾಟಕ ನಿರ್ದೇಶನ , ಬೀದಿನಾಟಕಗಳ ಆಯೋಜನೆ,ಸಮುದಾಯ, ಭಾರತೀಯ ಜನಕಲಾ ಸಮಿತಿ, ಬಿ.ಜಿ.ವಿ.ಎಸ್.,ಕನ್ನಡ ಸಾಹಿತ್ಯ ಪರಿಷತ್,…ಹೀಗೆ ಹತ್ತು ಹಲವು ಪ್ರಕಾರಗಳಲ್ಲಿ ಹರಿದು ಹಂಚಿ ಹೋಗಿರುವ ಇಸ್ಮಾಯಿಲ್ ಎಲಿಗಾರರ ಪ್ರತಿಭೆಗೆ ಮತ್ತು ಅವರ ಬದ್ಧತೆಗೆ ಎಂದೂ ಸಾವಿಲ್ಲ.

ಯಾಕೋ ಏನೋ….

ಪರೀಕ್ಷಿಸಬೇಡಿ

ನಮ್ಮನ್ನು

ಕಾಲಕಾಲಕ್ಕೆ ನಾವೆಲ್ಲರೂ

ಒಂದೇ

ಭಾರತೀಯರು ನಾವು

ಬಹುತ್ವ

ಭಾರತದ ರೂವಾರಿಗಳು!

ಎಂದು ಕೂಗಿ ಕೂಗಿ ಹೇಳುತ್ತಿರುವ, ದೇಶದ ಅಲ್ಪಸಂಖ್ಯಾತನೊಬ್ಬ ಅನುಭವಿಸುತ್ತಿರುವ “ಪರದೇಸಿತನ”ದ ನೋವಿನ ನುಡಿಗಳಂತೆ ಕೇಳಿಸುತ್ತಿದೆ.  ಮತ್ತೆ ಮತ್ತೆ “ಸಂಬೋಳಿ,ಸಂಬೋಳಿ”ಎಂಬ ಕೂಗು ಕೇಳಿಸಿದಂತಾಗಿ ಮನ ಬೆಚ್ಚುತ್ತದೆ.

ಸೃಜನಶೀಲ ಕವಿ (Ismail Eligar)

ಆ ಕಾಲದ ಅಸ್ಪೃಶ್ಯರ ಜೊತೆಗೆ ಬಸವಣ್ಣ ನಿಂತಂತೆ , ನಮ್ಮದೇ ಬಂಧುವೊಬ್ಬ ನಮ್ಮಳಗಿದ್ದೂ ಅನ್ಯನಾಗಿರಬೇಕಾದ ಈ ಕಾಲದ  ಸಂಕಟಗಳ ಅನಾವರಣ ಮಾಡುವ ಕವಿ ಇಸ್ಮಾಯಿಲ್ ಎಲಿಗಾರರಂತಹ ದೇಶದ ಸಾವಿರಾರು ಸೃಜನಶೀಲ, ಮಾನವೀಯ ಮನಸ್ಸುಗಳ ಜೊತೆ ನಾವೆಲ್ಲ ಇಂದು ನಿಲ್ಲಬೇಕಿದೆ.

 ಬಿ.ಶ್ರೀನಿವಾಸ ದಾವಣಗೆರೆ

TAGGED:Davangere Newsdinamaana.comDinamaanada HemmeKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂದಿನಮಾನದ ಹೆಮ್ಮೆ
Share This Article
Twitter Email Copy Link Print
Previous Article SDPI Davanagere ರಸ್ತೆ ದುರಸ್ತಿಗೆ ಎಸ್‌ಡಿಪಿಐ ಒತ್ತಾಯ
Next Article harihara ತುಂಗಾರತಿ : ಯೋಗಮಂಟಪ  ರೂಪುರೇಷಗಳ ಕುರಿತು  ಚರ್ಚೆ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
ವಾರದ ಕಥೆವಾರದ ಕಥೆ

Popular Posts

ಮೆಣಸಿನಕಾಯಿಗೂ ಎಂಎಸ್ಪಿ ಚಿಂತನೆ: ಸಚಿವ ಶಿವಾನಂದ ಪಾಟೀಲ

ಹಾವೇರಿ : ಮೆಣಸಿನಕಾಯಿ ಬೆಳೆಗೂ ಕನಿಷ್ಟ ಬೆಂಬಲ ಬೆಲೆ ನಿಗದಿ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು…

By Dinamaana Kannada News

DAVANAGERE : ನ್ಯಾಯ ವಿತರಣೆ ಮಾಡುವಲ್ಲಿ ವಕೀಲರ ಪಾತ್ರ ಪ್ರಮುಖ : ನ್ಯಾ. ರಾಜೇಶ್ವರಿ ಎನ್. ಹೆಗಡೆ

ದಾವಣಗೆರೆ, ಆ.6 (DAVANAGERE ):- ಸಾರ್ವಜನಿಕರು ಅದರಲ್ಲೂ ವಿಶೇಷವಾಗಿ ಶೋಷಿತರು, ದಮನಿತರು, ಸಮಾಜದ ಕೆಳಸ್ತರದಲ್ಲಿರುವವರು ನ್ಯಾಯ ವಿತರಣೆಯಿಂದ ವಂಚಿತರಾಗಿದ್ದು ಅವರಿಗೆ…

By Dinamaana Kannada News

ಜಿಎಂ ವಿಶ್ವವಿದ್ಯಾಲಯ : ಪ್ರಸಕ್ತ ಸಾಲಿನಲ್ಲಿ 1000 ಜಾಬ್ ಆಫರ್ಸ್ ಸ್ವೀಕರಿಸಿದ ವಿದ್ಯಾರ್ಥಿಗಳು

ದಾವಣಗೆರೆ (Davanagere): ನಗರದ  ಜಿಎಂ ವಿಶ್ವವಿದ್ಯಾಲಯ ಮತ್ತು ಜಿ ಎಂ ತಾಂತ್ರಿಕ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳು ವಿವಿಧ ಕಂಪನಿಗಳಿಗೆ…

By Dinamaana Kannada News

You Might Also Like

bhadra-dam
ತಾಜಾ ಸುದ್ದಿ

Bhadra dam | ಭದ್ರಾ ಜಲಾಶಯ : ತುಂಬಲು ದಿನಗಣನೆ ಆರಂಭ

By Dinamaana Kannada News
Dinesh K Shetty
ತಾಜಾ ಸುದ್ದಿ

ದಾವಣಗೆರೆ|ದೇಶ ಮತ್ತು ಯೋಧರ ವಿಚಾರದಲ್ಲಿ ರಾಜಕೀಯ ಸಲ್ಲ: ದಿನೇಶ್ ಕೆ ಶೆಟ್ಟಿ

By Dinamaana Kannada News
recruitment for posts in BSF
ತಾಜಾ ಸುದ್ದಿ

BSFನಲ್ಲಿ 3588 ಹುದ್ದೆಗಳ ಭರ್ಜರಿ ನೇಮಕಾತಿ

By Dinamaana Kannada News
Gold price
ತಾಜಾ ಸುದ್ದಿ

ಮೂರು ದಿನಗಳಲ್ಲಿ ಚಿನ್ನದ ಬೆಲೆ 2,400 ರೂ. ಇಳಿಕೆ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?