ದಾವಣಗೆರೆ (Davanagere) ಆ.12 : 2024 ನೇ ಸಾಲಿನ ಅಗ್ನಿಪಥ್ ಯೋಜನೆಯಡಿ ವಿವಿಧ ಹುದ್ದೆಗಳಿಗೆ ಲಿಖಿತ ಪರೀಕ್ಷೆಯಲ್ಲಿ ಆಯ್ಕೆಗೊಂಡ ಅಭ್ಯರ್ಥಿಗಳಿಗೆ ದೈಹಿಕ ಹಾಗೂ ವೈದ್ಯಕೀಯ ಪರೀಕ್ಷೆಯನ್ನು ಆಗಸ್ಟ್. 22 ರಿಂದ 31 ರವರೆಗೆ ಶಿವಮೊಗ್ಗ ನಗರದ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
ಆಭ್ಯರ್ಥಿಗಳ ಪ್ರವೇಶ ಪತ್ರಗಳನ್ನು ಅಭ್ಯರ್ಥಿಗಳ ಇ-ಮೇಲ್‍ಗೆ ಕಳುಹಿಸಲಾಗಿದೆ.
Read also : Davanagere news : ದಾವಣಗೆರೆ ವೃತ್ತಿ ರಂಗಾಯಣಕ್ಕೆ ಕಡಕೋಳ ನೇಮಕ
ಅಗ್ನಿವೀರ್ ಸೇನಾ ನೇಮಕಾತಿ ರ್ಯಾಲಿಯಲ್ಲಿ ದಾವಣಗೆರೆ, ಶಿವಮೊಗ್ಗ, ಬಾಗಲಕೋಟೆ, ವಿಜಯಪುರ, ಧಾರವಾಡ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಗದಗ, ಹಾವೇರಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಅಭ್ಯರ್ಥಿಗಳಿಗೆ ಮಾತ್ರ ಮೀಸಲಾಗಿರುತ್ತದೆ ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಶಿವಮೊಗ್ಗ ಉಪ ನಿರ್ದೇಶಕರಾದ ಡಾ. ಸಿ.ಎ ಹಿರೇಮಠ್ ತಿಳಿಸಿದ್ದಾರೆ.