ವಿಶೇಷ ಲೇಖನ: ಮೋಹನ್ ಕುಮಾರ್.ಎಂ.ಸಿ , ವಕೀಲರು.
ಗೃಹ ಸಚಿವ ಅಮಿತ್ ಷ (Amith sha) ರವರೇ ಕೇಳಿಸಿಕೊಳ್ಳಿ ನೀವು ಇವತ್ತು ಎತ್ತಿರುವಂತಹ ಪ್ರಶ್ನೆ “ಅಂಬೇಡ್ಕರ್ ಅವರ ಹೆಸರನ್ನು ಪದೇ ಪದೇ ಬಳಸುವುದು ಶೋಕಿಯಾಗಿದೆ. ಅವರ ಹೆಸರು ಬದಲಿಗೆ ಭಗವಂತನ ಹೆಸರನ್ನು ಹೇಳಿದ್ದರೆ ಏಳು ಜನ್ಮದ ವರೆಗೂ ಸ್ವರ್ಗ ಲಭ್ಯವಾಗುತ್ತಿತ್ತು” ಇದು ನಿಮ್ಮ ಮೂರ್ಖತನ ಅಷ್ಟೇ.. ಇಂತಹ ಹೇಳಿಕೆಗಳು ಇಡೀ ದೇಶದ ಶೋಷಿತ ಸಮುದಾಯಗಳ ಸಂಕಷ್ಟ ಮತ್ತು ಅವಮಾನವನ್ನು ಮಾಡುವ ಉದ್ದೇಶವನ್ನು ಹೊಂದಿರುವುದು ತಿಳಿಯುತ್ತದೆ.
ನಿಮ್ಮ ಈ ಹೇಳಿಕೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಆದರೆ ಇತಿಹಾಸವನ್ನು ಸರಿಯಾಗಿ ತಿಳಿದುಕೊಳ್ಳಿ ಏಕೆಂದರೆ 1922 ಫೆಬ್ರವರಿ 22 ದೆಹಲಿಯಲ್ಲಿ ಅಖಿಲ ಭಾರತ ಶೋಷಿತ ಮತ್ತು ಹಿಂದುಳಿದ ವರ್ಗಗಳ ಸಮ್ಮೇಳನದಲ್ಲಿ ಕೊಲ್ಲಾಪುರ ಪ್ರಾಂತ್ಯದ ದೊರೆ ಮತ್ತು ಮೀಸಲಾತಿಯ ಜನಕ ಎಂದೇ ಸುಪ್ರಸಿದ್ಧರಾದ *ಛತ್ರಪತಿ ಶಾಹು ಮಹಾರಾಜ್* ಒಂದು ಮಾತನ್ನ ಹೇಳ್ತಾರೆ ಈ ಶೋಷಿತ ಮತ್ತು ಹಿಂದುಳಿದ ವರ್ಗಗಳು ಈ ವ್ಯಕ್ತಿಯ ನಾಯಕತ್ವದಲ್ಲಿ ಮುಂದೆ ಸಾಗಬೇಕು, ಇವರನ್ನು ಆದರ್ಶವಾಗಿ ಸ್ವೀಕರಿಸಬೇಕು ಮತ್ತು ಇವರನ್ನು ಮುಂದಿಟ್ಟುಕೊಳ್ಳಬೇಕು ಎಂದು ಹೇಳಿದ್ದಾರೆ.. ಹಾಗದರೆ ಆ ವ್ಯಕ್ತಿ ಯಾರು ಅಂತ ಗೊತ್ತಾ ಅಮಿತ್ ಷ ರವರೇ? ಕೇಳಿಸಿಕೊಳ್ಳಿ ಅವರೇ ಅಂಬೇಡ್ಕರ್ ಅಂಬೇಡ್ಕರ್ ಅಂಬೇಡ್ಕರ್.
ನೀವು ಹೇಳಿದ ಭಗವಂತ ಅಲ್ಲ.. ಅವರದ್ದೇ ಪದಗಳಲ್ಲಿ ಹೇಳುವುದಾದರೆ
You should all keep before you Bheemrao Ambedkar. you great leader has you ideal and try to be fallow him to be like him… ಎಂದಿದ್ದಾರೆ.
1946 ರಲ್ಲಿ ಬ್ರೀಟಿಷರು ಹೇಳುತ್ತಾರೆ ಭಾರತಕ್ಕೆ ಸ್ವತಂತ್ರವನ್ನು ನೀಡ್ತಿವಿ ನಿಮ್ಮ ದೇಶಕ್ಕೆ ಒಂದು ಸಂವಿಧಾನವನ್ನು ರಚಿಸಿಕೊಳ್ಳಿ ಎಂದಾಗ ಭಾರತದಲ್ಲಿ ಸ್ವತಂತ್ರ ಹೋರಾಟಗಾರರಲ್ಲಿ ಅಗ್ರಗಣ್ಯರಾಗಿದ್ದಂತಹ ಜವರ್ಲಾಲ್ ನೆಹರು, ಸರೋಜಿನಿ ನಾಯ್ಡು, ಸರ್ಧಾರ್ ವಲ್ಲಭಭಾಯ್ ಪಟೇಲ್ ಇನ್ನೂ ಮುಂತಾದ ನಾಯಕರು ಯುರೋಪ್ ದೇಶಕ್ಕೆ ಹೋಗ್ತಾರೆ ‘ಸರ್ ಐವರ್ ಜನ್ನಿಂಗ್’ ರವರನ್ನು ಕಾಣಲಿಕ್ಕೆ. ಯಾಕೆಂದರೆ ಯೂರೋಪ್ ದೇಶದ ಸಂವಿಧಾನವನ್ನು ಬರೆದವರು ಇವರೆ.
ಹಾಗಾಗಿ ಅವರ ಹತ್ತಿರ ಹೋಗಿ ಭಾರತ ಮುಂದೆ ಸಾಗಬೇಕಾದರೆ ನಮಗೆ ಒಂದು ಸಂವಿಧಾನ ಬೇಕು ಹಾಗಾಗಿ ತಾವು ದಯಮಾಡಿ ನಮ್ಮ ದೇಶಕ್ಕೆ ಸಂವಿಧಾನವನ್ನು ಬರೆದು ಕೊಡಿ ಎಂದು ಕೇಳುತ್ತಾರೆ. ಆಗ ಸರ್ ಐವರ್ ಜನಿಂಗ್ ಅವರು ಹೇಳುತ್ತಾರೆ
“ನೋಡಿ ನೀವು ದಾರಿ ತಪ್ಪಿ ಬಂದಿದ್ದೀರಿ ನಾನು ಯುರೋಪ್ ಖಂಡಗಳ ಅಥವಾ ಯುರೋಪ್ ದೇಶದ ಸಂವಿಧಾನವನ್ನು ಹಲವು ಬಾರಿ ಬರೆಯಬಲ್ಲೆ. ಆದರೆ ಭಾರತದಂತಹ ಬಹು ಸಂಸ್ಕೃತಿ, ಬಹು ಜಾತಿ, ಬಹು ಧರ್ಮಿಯರಿರುವ ಭಾರತಕ್ಕೆ ಸಂವಿಧಾನವನ್ನು ಬರೆಯಬೇಕಾದರೆ ಭಾರತದಲ್ಲಿಯೇ ಇರುವ ಆ ಮಹಾನ್ ವ್ಯಕ್ತಿಯಿಂದ ಮಾತ್ರ ಸಾಧ್ಯ ಎಂದು ಹೇಳುತ್ತಾರೆ* ಅಮಿತ್ ಷಾ ರವರೇ ಸರ್ ಐವರ್ಜನ್ನಿಂಗ್ ಅವರು ಹೇಳಿದ ಆ ಹೆಸರು ಯಾವುದು ಗೊತ್ತಾ ??ಕೇಳಿಸಿಕೊಳ್ಳಿ
“ಅಂಬೇಡ್ಕರ್ ಅಂಬೇಡ್ಕರ್ ಅಂಬೇಡ್ಕರ್“ನೀವು ಹೇಳಿದ ಭಗವಂತನ ಹೆಸರಲ್ಲ.
ಇದಾದ ಮೇಲೆ ಅವರೆಲ್ಲರೂ ಭಾರತಕ್ಕೆ ಬಂದು ಚರ್ಚೆ ಮಾಡುತ್ತಾರೆ ಅಂಬೇಡ್ಕರ್ ಅವರಿಗೆ ಸಂವಿಧಾನ ಬರೆಯುವುದಕ್ಕೆ ಹೇಗೆ ಆಹ್ವಾನ ನಿಡೋದು ಅಂತ.. ಸಾಧ್ಯವಿಲ್ಲ, ಸಾಧ್ಯವೇ ಇಲ್ಲ ಎಂದು ಕೊನೆಗೆ ಚುನಾವಣೆಯನ್ನು ಮಾಡ್ತಾರೆ ಆ ಚುನಾವಣೆಯಲ್ಲಿ ಯಾರು ಬೇಕಾದ್ರೂ ಆಯ್ಕೆ ಆಗಲಿ ಆದರೆ ಅಂಬೇಡ್ಕರ್ ಮಾತ್ರ ಯಾವುದೇ ಕಾರಣಕ್ಕೂ ಗೆಲ್ಬಾರ್ದು ಮತ್ತು ಸಂವಿಧಾನ ರಚನಾ ಸಮಿತಿ ಒಳಗಡೆ ಅಂಬೇಡ್ಕರ್ ಬರಬಾರದು ಅಂತ ಅನೇಕ ತಂತ್ರ,ಷಡ್ಯಂತ್ರ, ಕುತಂತ್ರಗಳನ್ನು ಮಾಡುತ್ತಾರೆ.
ಆದರೂ ಸಹ ಬಾಬಾಸಾಹೇಬ್ ಅಂಬೇಡ್ಕರ್ ರವರು ಅವರಿಗಿದ್ದ ಅಪಾರವಾದ ಜ್ಞಾನವನ್ನು ಬಳಸಿಕೊಂಡು, ಅವಿರತವಾದ ಹೋರಾಟದಿಂದ ಸಂವಿಧಾನ ರಚನಾ ಸಮಿತಿ ಒಳಗಡೆ ಬರ್ತಾರೆ.. ಕರಡು ರಚನಾ ಸಮಿತಿಯ ಅಧ್ಯಕ್ಷರೂ ಆಗ್ತಾರೆ. ಅವರ ಜೊತೆಗೆ ಇನ್ನೂ ಆರು ಜನ ಸದಸ್ಯರನ್ನು ಒಳಗೊಂಡಂತಹ ಕರಡು ರಚನಾ ಸಮಿತಿ ರಚನೆ ಆಗುತ್ತೆ.
ನೆನಪಿರಲಿ ಒಟ್ಟು ಏಳು ಜನರ ಸಮೀತಿಯಲ್ಲಿ ಆರು ಜನ ಸದಸ್ಯರು ತಮ್ಮ ವೈಯಕ್ತಿಕ ಹಿತಾಸಕ್ತಿ ಮತ್ತು ಸಮಸ್ಯೆಗಳಿಗೆ ಸಿಲುಕಿಕೊಂಡು ಸಂವಿಧಾನ ರಚಿಸುವ ಜವಾಬ್ದಾರಿಯಿಂದ ದೂರ ಉಳಿಯುತ್ತಾರೆ ಆದರೆ ಕೊನೆಗೆ ಆ ಎಲ್ಲಾ ಕೆಲಸ ಕಾರ್ಯಗಳನ್ನು ಅತ್ಯಂತ ಶ್ರದ್ಧೆ ಮತ್ತು ನಿಷ್ಠೆಯಿಂದ 2ವರ್ಷ,11ತಿಂಗಳು,18 ದಿನಗಳವರೆಗೆ ಭಾರತ ಸಂವಿಧಾನವನ್ನ ಬರೆದು ಸಮರ್ಪಿಸಿರುವುದು ಅಮಿತ್ ಷ ರವರೇ ಕೇಳಿಸಿಕೊಳ್ಳಿ ಅದೇ ‘ಅಂಬೇಡ್ಕರ್ ಅಂಬೇಡ್ಕರ್ ಅಂಬೇಡ್ಕರ್…’ನೀವು ಹೇಳಿದ ಭಗವಂತ ಅಲ್ಲ..
ಇತ್ತೀಚಿಗೆ ವಿಶ್ವಸಂಸ್ಥೆ ಒಂದು ಸಮೀಕ್ಷೆಯನ್ನು ಮಾಡತ್ತೆ. ಲಂಡನ್ ಯುನಿವರ್ಸಿಟಿಯಲ್ಲಿ ತುಂಬಾ ಚೆನ್ನಾಗಿ ಓದ್ಕೊಂಡು ಓದು ಮುಗಿದ ಮೇಲೆ ತನ್ನ ದೇಶದಲ್ಲಿ ತಾನು ಕಲಿತ ವಿದ್ಯೆ ಮತ್ತು ಬುದ್ಧಿಯನ್ನು ಬಳಸಿಕೊಂಡು ಆ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುವ ಕೆಲಸದಲ್ಲಿ ತೊಡಗಿಸಿಕೊಂಡ ತಮ್ಮ ಯೂನಿವರ್ಸಿಟಿಯ ವಿದ್ಯಾರ್ಥಿಗಳ ಸಮೀಕ್ಷೆಯನ್ನು ಮಾಡಿದಾಗ ಇಡೀ ಪ್ರಪಂಚದಾದ್ಯಂತ ಸಿಕ್ಕಂತಹ ನೂರು ಜನ ಹಳೇ ವಿದ್ಯಾರ್ಥಿಗಳ ಪಟ್ಟಿಯಲ್ಲಿ ಮೊಟ್ಟ ಮೊದಲ ಹೆಸರು ಯಾವುದು ಗೊತ್ತಾ ಅಮಿತ್ ಷ ರವರೇ ಕೇಳಿಸಿಕೊಳ್ಳಿ *ಅಂಬೇಡ್ಕರ್ ಅಂಬೇಡ್ಕರ್ ಅಂಬೇಡ್ಕರ್* ನೀವು ಹೇಳಿದ ಭಗವಂತನದ್ದಲ್ಲ.
ಹಾಗಾಗಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ವಿಶ್ವ ಜ್ಞಾನಿ ಎಂದು ಕರೆಯಲಾಗುತ್ತಿದೆ. ಅಂಬೇಡ್ಕರ್ ಎನ್ನುವುದು ಕೇವಲ ಹೆಸರಲ್ಲ ಈ ದೇಶದ ಉಸಿರು, ಈ ದೇಶದ ಶಕ್ತಿ ಅವರು ಆಧುನಿಕ ರಾಷ್ಟದ ನಿರ್ಮಾತೃ, ಆಧುನಿಕ ಪ್ರವರ್ತಕ* ಎಂದೆಲ್ಲಾ ಕರೆಯುತ್ತಾರೆ.
ಬ್ರಾಹ್ಮಣ ಕ್ಷತ್ರಿಯ ಬನಿಯಾ ಸಮುದಾಯದ ಮಹಿಳೆಯರು ಸೇರಿದಂತೆ ದೇಶದ ಒಟ್ಟು ಜನಸಂಖ್ಯೆಯ ಅರ್ದ ಬಾಗದಷ್ಟಿರುವ ಎಲ್ಲಾ ಮಹಿಳೆಯರಿಗೆ ಸರ್ವ ಸ್ವಾತಂತ್ರ್ಯವನ್ನು, ಹಕ್ಕು ಅವಕಾಶಗಳನ್ನು ಕಲ್ಪಿಸಿರುವುದು ಅಮಿತ್ ಷ ರವರೇ ಯಾವ ಭಗವಂತನೂ ಅಲ್ಲ ಅದೇ ಅಂಬೇಡ್ಕರ್ ಅಂಬೇಡ್ಕರ್ ಅಂಬೇಡ್ಕರ್.
ಈ ದೇಶದ 95% ಜನರಿಗೆ ವಿದ್ಯಬ್ಯಾಸದ ಹಕ್ಕನ್ನು, ಓಟಿನ ಹಕ್ಕನ್ನು, ನೋಟಿನ ಹಕ್ಕನ್ನು, ಶೂಟು ಬೂಟಿನ ಹಕ್ಕನ್ನು , ರಾಜಕೀಯ ಸೀಟಿನ ಹಕ್ಕನ್ನು, ಊರು ಸೂರಿನ ಹಕ್ಕನ್ನು , ನೆಲ ಮತ್ತು ಜಲ ಸ್ಪರ್ಶದ ಹಕ್ಕನ್ನು ನೀಡಿದ್ದು ನಿಮ್ಮ ಯಾವ ಬಗವಂತನೂ ಅಲ್ಲ ಅಮಿತ್ ಷ ರವರೇ ಇದೆಲ್ಲವನ್ನ ನೀಡಿರುವುದು ಅಂಬೇಡ್ಕರ್ ಅಂಬೇಡ್ಕರ್ ಅಂಬೇಡ್ಕರ್…
ಆದರೆ ಈ ಮೇಲೆ ತಿಳಿಸಿದ ಇಷ್ಟು ಕೆಲಸ ಕಾರ್ಯಗಳನ್ನು ಮಾಡಲಿಕ್ಕೆ ಸಾಧ್ಯವಾಗಿರೋದು ಅಂಬೇಡ್ಕರ್ ಅಂಬೇಡ್ಕರ್ ಅಂಬೇಡ್ಕರ್
ರವರಿಗೆ ಮಾತ್ರ ನೀವು ಹೇಳುತ್ತಿರುವ ಯಾವ ಭಗವಂತನಿಗೂ ಅಲ್ಲ….
ಭಾರತದ ಸಮಸ್ತ ಶೋಷಿತ, ಹಿಂದುಳಿದ ಸಮುದಾಯಗಳು ಅಂಬೇಡ್ಕರ್ ರವರ ಹೆಸರಿನ ಜೊತೆಗೆ ಅವರ ತತ್ವ ಮತ್ತು ಸಿದ್ಧಾಂತಗಳನ್ನ ಚಾಚೂ ತಪ್ಪದೇ ಅನುಸರಿಸಲು ಸಿದ್ಧರಾದರೆ ನೀವುಗಳು ಅಧಿಕಾರಗಳನ್ನು ಕಳೆದುಕೊಂಡು ಬಿಕಾರಿಗಳಾಗಿ, ಪರದೇಶಿಗಳಾಗಿ ಈ ದೇಶವನ್ನೇ ಬಿಟ್ಟು ಓಡುವಂತಹ ಪರಿಸ್ಥಿತಿ ಬರುತ್ತೆ ನೆನಪಿರಲಿ…
ಇವತ್ತು ಮತ್ತೆ ನೀವು ನಮ್ಮನ್ನು ಎಚ್ಚರಿಸಿದ್ದೀರಿ.. ಈ ಸಂದರ್ಭದಲ್ಲಿ ಶೋಷಿತ ಸಮುದಾಯಗಳಿಗೆ ನಾನು ಒಂದು ಕಿವಿ ಮಾತನ್ನು ಹೇಳುತ್ತೇನೆ ಏನೆಂದರೆ ಅಮಿತ್ ಷಾ ರವರ ಮಾತಿಗೆ ಯಾರು ತಲೆ ಕೆಡಿಸಿಕೊಳ್ಳಬೇಡಿ ಯಾಕೆಂದರೆ ಈ ದೇಶದ ಮನುವಾದಿಗಳಿಗೆ ನಾವು ಯಾವಾಗಲೂ ಬೀದಿಯಲ್ಲಿಯೇ ಇರಬೇಕು.
ಹಾಗಾಗಿ ನಮ್ಮನ್ನ ಬೀದಿಗಿಳಿಸಲು ಈ ತರದ ತಲೆ ಪ್ರತಿಷ್ಟೆ ಹೇಳಿಕೆಗಳನ್ನು ಪದೆ ಪದೆ ಕೊಟ್ಕೊಂಡು ಇರುತ್ತಾರೆ ನಾವು ಇವುಗಳಿಗೆ ತಲೆ ಕೆಡಿಸಿಕೊಳ್ಳದೆ ನಾವು ನಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಅತ್ಯಂತ ಎಚ್ಚರಿಕೆಯಿಂದ ಮುನ್ನಡೆಯಬೇಕು ಮತ್ತು ಚುನಾವಣಾ ಸಂದರ್ಭದಲ್ಲಿ ಇಂತಹ ಉದ್ಧಟತನ ಮೆರೆದ ಯಾರೇ ಆಗಲಿ ಇಂತವರನ್ನು ತಿರಸ್ಕರಿಸುವ ಮೂಲಕ ಇವರಿಗೆ ಸರಿಯಾದ ಪ್ರತ್ಯುತ್ತರಗಳನ್ನು ನೀಡಲೇಬೇಕು ಎಂದು ಹೇಳುತ್ತಾ, ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳಲಿಕ್ಕೆ ಕಾರಣಕರ್ತರಾದ ಕೇಂದ್ರ ಗೃಹ ಸಚಿವರಾದ ಅಮಿತ್ ಷಹ ಅವರಿಗೆ ಅಂಬೇಡ್ಕರ್ ನಮನಗಳು, ಅಂಬೇಡ್ಕರ್ ನಮನಗಳು, ಅಂಬೇಡ್ಕರ್ ನಮನಗಳನ್ನು ಸಲ್ಲಿಸುತ್ತೇನೆ..