ದಾವಣಗೆರೆ (Davanagere) : ಕೊಂಡಜ್ಜಿಯ 10 ಎಕರೆ ಭೂಮಿ ರಂಗಾಯಣಕ್ಕೆ ದೊರೆತ್ತಿದ್ದು ಇಲ್ಲಿ ಇಡೀ ರಾಜ್ಯಕ್ಕೆ ಮುಕುಟ ಪ್ರಾಯವಾಗಿರುವ ವಿಶ್ವ ರಂಗಭೂಮಿ ಕಟ್ಟುವ ಕೆಲಸ ಮಾಡೋಣ ಎಂದು ಸಂಗೀತ ನಿರ್ದೇಶಕ ಹಂಸಲೇಖ ಹೇಳಿದರು.
ಇಲ್ಲಿನ ಜೆಜೆಎಂ ವೈದ್ಯಕೀಯ ಕಾಲೇಜಿನ ಸಭಾಂಗಣದಲ್ಲಿ ವೃತ್ತಿ ರಂಗಭೂಮಿ ರಂಗಾಯಣ ಭಾನುವಾರ ಏರ್ಪಡಿಸಿದ್ದ ನಾಂದಿ-ಆರಂಭೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿಶ್ವ ರಂಗಭೂಮಿ ರಂಗಮಂದಿರ ದಾವಣಗೆರೆ ಯಲ್ಲಿ ಸ್ಥಾಪನೆ ಆಗಲು ಇಲ್ಲಿನ ಕಲಾವಿದರು ಸಿದ್ದರಾಗಬೇಕು. ಇದೊಂದು ವೃತ್ತಿ ರಂಗಾಯಣ ದೇಶಕ್ಕೆ ಮಾದರಿ ಆಗುವ ಸಾಮರಸ್ಯದ ನಾಟಕಗಳನ್ನು ಪ್ರದರ್ಶನ ಆಗಬೇಕಿದೆ. ನಾಟಕದ ಮೂಲಕ ಇಡೀ ವಿಶ್ವಕ್ಕೆ ದೊಡ್ಡ ಸಂದೇಶ ಕಳುಹಿಸೋಣ ಎಂದರು.
ಥೈಲ್ಯಾಂಡ್ ನಲ್ಲಿ ಸಿಯಾಮ್ ನಿರಾಮಿತ್ ರಂಗಮಂದಿರ ಇದೆ. ಎರಡು ಸಾವಿರ ಜನರು ಕುಳಿತು ಕೊಳ್ಳುವ ಅವಕಾಶ ಇದೆ. ಐನೂರು ಕಲಾವಿದರು ಪ್ರದರ್ಶನ ನೀಡಲು ಸಾಧ್ಯವಿರುವ ರಂಗಮಂದಿರ ಇದೆ. ಇಂತಹ ಪ್ರಯತ್ನ ಆಗಬೇಕು ದಾವಣಗೆರೆಯಲ್ಲಿ ನಡೆಯಬೇಕು ಎಂದರು.
ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಮಾತನಾಡಿ, ಎರಡು ವರ್ಷಗಳಿಂದ ಕಲೆ, ರಂಗಭೂಮಿ ಗೆ ಹೆಚ್ಚು ಆದ್ಯತೆ ಸಿಗುತ್ತಿದೆ. ವೃತ್ತಿ ರಂಗಭೂಮಿಗೆ ಮತ್ತೆ ತವರೂರು ಆಗಲಿದೆ. ₹ ೪ ಕೋಟಿ ಅನುದಾನ ಸಿಗಲಿದೆ. ಸಂಸದರ ನಿಧಿಯ ಸದ್ಬಳಕೆಗೂ ಒತ್ತು ನೀಡಲಿದ್ದೇನೆ ಎಂದರು.
Read also : Davanagere | 22 ಕೆರೆಗಳ ಏತನೀರಾವರಿ ಯೋಜನೆ ವ್ಯಾಪ್ತಿಗೆ ಆಲೂರು-ಮೆಳ್ಳೆಕಟ್ಟೆ ಕೆರೆ ಸೇರಿಸಲು ಒತ್ತಾಯ
ಪ್ರತಿಯೊಬ್ಬ ಮಗುವಿಗೂ ರಂಗಭೂಮಿ ತರಬೇತಿ ಅಗತ್ಯ. ಮೊಬೈಲ್ ಹಾವಳಿ ಬಿಡಿಸಲು ಕ್ರೀಡೆ, ನಾಟಕ, ಕಲೆಯತ್ತ ಮಕ್ಕಳನ್ನು ಕರೆತರಬೇಕು. ಮಕ್ಕಳಲ್ಲಿಬಿರುವ ಪ್ರತಿಭೆ ಗುರುತಿಸಲು ಅನುಕೂಲವಾಗುತ್ತದೆ. ಮಕ್ಕಳಿಗೆ ಕೌಟುಂಬಿಕ ಮೌಲ್ಯ ಹೇಳಲು ಪೋಷಕರಿಗೆ ಸಮಯ ಸಿಗುತ್ತಿಲ್ಲ. ಇದನ್ನು ಅಜ್ಜಿ ತಾತ ಮಾಡಬೇಕು. ಸ್ವಾತಂತ್ರ್ಯ ಚಳವಳಿಯಲ್ಲಿ, ಸಾಮಾಜಿಕ ಸುಧಾರಣೆಯಲ್ಲಿ ರಂಗಭೂಮಿ ಕೊಡುಗೆ ಅಪಾರ. ಮೂಢನಂಬಿಕೆ ಹೋಗಲಾಡಿಸಲು ನಾಟಕ ಉತ್ತಮ ಕೆಲಸ ಮಾಡಿವೆ. ರಂಗಾಯಣದ ಜೊತೆಗೆ ನಾವು ಇರಲಿದ್ದೇವೆ ಎಂದು ಭರವಸೆ ನೀಡಿದರು.
ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ, ಮಾಯಕೊಂಡ ಕ್ಷೇತ್ರದ ಶಾಸಕ ಕೆ.ಎಸ್.ಬಸವಂತಪ್ಪ. ಧೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ವಿಧಾನಪರಿಷತ್ ಮಾಜಿ ಸದಸ್ಯ ಮೋಹನ್ ಕುಮಾರ್ ಕೊಂಡಜ್ಜಿ, ಧಾರವಾಡ ರಂಗಾಯಣ ನಿರ್ದೇಶಕ ರಾಜು ತಾಳಿಕೋಟೆ, ರಂಗಕರ್ಮಿ ಚಿಂದೋಡಿ ಶ್ರೀಕಂಟೇಶ್, ಶಶಿಧರ್ ಬಾಳಗಟ್ಟ, ರಂಗ ಸಮಾಜದ ಸದಸ್ಯ ಮಹಾಂತೇಶ್ ಗಜೇಂದ್ರಗಡ, ವೃತ್ತಿ ರಂಗಭೂಮಿ ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ವೃತ್ತಿಪರ ರಂಗಭೂಮಿ ರಂಗಾಯಣದ ವಿಶೇಷಾಧಿಕಾರಿ ರವಿಚಂದ್ರ ಇತರರು ಇದ್ದರು.