ಹರಿಹರ: ಪರಿಸರಕ್ಕಾಗಿ ನಾವು ಒಕ್ಕೂಟ ಹಾಗೂ ದಾವಣಗೆರೆ ಜೈನ್ ಇಂಜಿನಿಯರಿಂಗ್ ಕಾಲೇಜಿನಿಂದ ಹರಿಹರ ಹೊರವಲಯದ ಜೋಡಿ ರಸ್ತೆಯಲ್ಲಿ ಬುಧವಾರ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ‘ಗಿಡ ನೆಡೋಣ ಬನ್ನಿ’ ಕಾರ್ಯಕ್ರಮ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀನಿವಾಸನಗರದ ‘ಐಕಾಂತಿಕ’ ತೋಟದ ಪ್ರಗತಿಪರ ರೈತ ರಾಘವರವರು ಸಸಿ ನೆಟ್ಟ ನಂತರ ನೀರು ನಿಲ್ಲುವ ಪಾತಿಯನ್ನು ವೈಜ್ಞಾನಿಕವಾಗಿ ರಚಿಸಿ ಪ್ರಾತ್ಯಾಕ್ಷಿಕೆ ನೀಡಿದರು. ಈ ಹಿಂದೆ ನೆಟ್ಟಿದ್ದ ಸಸಿ ಒಣಗಿರುವ ಜಾಗಗಳಲ್ಲಿ 80 ಸಸಿಗಳನ್ನು ಈ ತಂಡದಿಂದ ನೆಡಲಾಯಿತು.
ಐಕಾಂತಿಕ ಬುಡಕಟ್ಟು ಸಮುದಾಯದ ಅಭಿಶೇಕ್, ಜಬಿಉಲ್ಲಾ, ಶಂಭುಲಿಂಗ, ಪಾಂಡುರಂಗ, ವಿಜಯ ಮಹಾಂತೇಶ್, ಜಯಚಂದ್ರ, ಶಿವಯೋಗಿ, ಯಶ್ವಿಕ, ಮೌನೇಶ್, ಶಶಾಂಕ, ನರೇಶ್, ವಿರೇಶ್ ಕುಮಾರ್, ಶಿವಯೋಗಿ, ಭಿಕ್ಷಾವರ್ತಿಮಠ್, ವರ್ಚಸ್, ಮಂಜಮ್ಮ, ಪರಮೇಶಪ್ಪ ಗೌಡ್ರು ಅಮರಾವತಿ, ಬಸವರಾಜ ಜಿ.ಎಚ್, ತುಲಸಿದಾಸ ಪಟೇಲ್, ರಾಮಕೃಷ್ಣ ಮತ್ತು ಅಣ್ಣಪ್ಪ. ಸಾಮಾಜಿಕ ಅರಣ್ಯ ಇಲಾಖೆ ಡಿಸಿಎಫ್ ರಾಘವೆಂದ್ರರಾವ್ ಮತ್ತು ಆರ್‍ಎಫ್‍ಒ ಅಮೃತ, ಪ್ರಾದೇಶಿಕ ಅರಣ್ಯ ಇಲಾಖೆ ಡಿಎಫ್‍ಒ ಶಶಿಧರ್, ಭಾಗ್ಯಲಕ್ಷಿ ಮತ್ತು ದಾವಣಗೆರೆ ಜೈನ್ ಇಂಜಿನಿಯರಿಂಗ್ ಕಾಲೇಜ್‍ನ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರಿದ್ದರು.