ದಾವಣಗೆರೆ: ಯೋಗವನ್ನು ವೈಜ್ಞಾನಿಕವಾಗಿ ಪರಿಚಯಿಸಿದ ಕೋಲಾರ ಜಿಲ್ಲೆ ಬೆಳ್ಳೂರು ಬಿ.ಕೆ.ಎಸ್.ಅಯ್ಯಂಗಾರ್ ಯೋಗದಿಂದ ಆರೋಗ್ಯ ಕಾಪಾಡಿ ಕೊಳ್ಳುವುದನ್ನು ಜಗತ್ತಿಗೆ ತೋರಿಸಿ ಕೊಡುವ ಜೊತೆಗೆ ಬೆನ್ನುಹುರಿ, ಬೆನ್ನು ನೋವು, ಸೊಂಟನೋವಿಗೂ ಪರಿಹಾರ ಕಲ್ಪಿಸಿದ ಮಹಾನ್ ಸಾಧಕರಾಗಿದ್ದಾರೆ ಎಂದು ಆದರ್ಶ ಯೋಗ ಪ್ರತಿಷ್ಠಾನದ ಯೋಗಾಚಾರ್ಯ ಡಾ.ರಾಘವೇಂದ್ರ ಗುರೂಜಿ ತಿಳಿಸಿದರು.
ನಗರದ ದೇವರಾಜ ಅರಸು ಬಡಾವಣೆಯ ಆದರ್ಶ ಯೋಗ ಪ್ರತಿಷ್ಠಾನದ ಶ್ರೀ ಮಹಮ್ಮಾಯಿ ವಿಶ್ವ ಯೋಗ ಮಂದಿರ ಹಾಗೂ ಯೋಗ ಚಿಕಿತ್ಸಾ ಕೇಂದ್ರದಲ್ಲಿ ಭಾನುವಾರ ವಿಶೇಷ ಯೋಗ ಚಿಕಿತ್ಸಾ ಸಂಶೋಧನಾ ಕಾರ್ಯಾಗಾರದ ಸಮಾರೋಪದಲ್ಲಿ ಮಾತನಾಡಿು, ಬಿ.ಕೆ.ಎಸ್.ಅಯ್ಯಂಗಾರ್ ತೋರಿಸಿಕೊಟ್ಟ ಯೋಗ ಮಾದರಿಯಲ್ಲಿತರಬೇತಿ ಪಡೆದ ನೂರಾರು ಸಾಕಷ್ಟು ಸಮಸ್ಯೆಯಿಂದ ಇಲ್ಲಿ ಮುಕ್ತರಾಗಿದ್ದಾರೆ ಎಂದರು.
ದಾವಣಗೆರೆ ವಿವಿ ಎಂಎಸ್‍ಸಿ ಯೋಗ ವಿಭಾಗದ ವಿದ್ಯಾರ್ಥಿಗಳಾದ ವಿ.ಕೆ.ರಾಹುಲ್, ಎಸ್.ಸಂವೇದಿತಾ ಸಹಾಯಕ ಪ್ರಾಧ್ಯಾಪಕಿ ಬಿ.ಲತಾ ಹಾಗೂ ತಮ್ಮ ಮಾರ್ಗದರ್ಶನದಲ್ಲಿ ಎ ಥೆರಾಪೆಟಿಕ್ ಸ್ಟಡಿ ಆನ್ ಕ್ರೋನಿಕ್ ಸ್ಪೈನ್ ಡಿಸಾರ್ಡರ್ ಥ್ರೂ ಅಯ್ಯಂಗಾರ್ ಯೋಗ ಥೆರಪಿ(ಅಯ್ಯಂಗಾರ್ ಯೋಗ ಚಿಕಿತ್ಸೆ ಮೂಲಕ ದೀರ್ಘಕಾಲದ ಬೆನ್ನು ಮೂಳೆಯ ಅಸ್ವಸ್ಥತೆಗಳ ಕುರಿತ ಚಿಕಿತ್ಸಕ ಅಧ್ಯಯನ) ವಿಷಯವಾಗಿ ಪ್ರಬಂಧ ಮಾಡಿಸಿದ್ದಾರೆ ಎಂದು ಅವರು ಹೇಳಿದರು.
Read also : Political analysis |ಇದು ಡಿಕೆಶಿ ಕ್ಯಾಂಪಿನ ಲೇಟೆಸ್ಟು ಚಿಂತೆ
ದಾವಿವಿ ಯೋಗ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಎನ್.ಎಸ್.ಸುಮನ್ ಮಾತನಾಡಿ, ದಾವಿವಿಯಲ್ಲಿ ಯೋಗ ವಿಜ್ಞಾನ ವಿಭಾಗವಿದ್ದು, ಇದೀಗ ಮತ್ತಷ್ಟು ಹೊಸ ಕೋರ್ಸ್ ಆರಂಭಿಸುತ್ತಿದೆ. ಯಾವುದೇ ಪದವಿ ಪಡೆದವರು ಯೋಗ ವಿಜ್ಞಾನ ವಿಭಾಗದಲ್ಲಿ ದಾಖಲಾತಿ ಪಡೆಯಬಹುದು ಎಂದರು.
ವಿದ್ಯಾರ್ಥಿಗಳಾದ ಸಂವೇದಿತಾ, ವಿ.ಕೆ.ರಾಹುಲ್ ಮಾತನಾಡಿದರು. ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ ಎಸ್.ಬಡದಾಳ್ ಅಧ್ಯಕ್ಷತೆ ವಹಿಸಿದ್ದರು. ವರದಿಗಾರ ಎಂ.ಬಿ.ನವೀನ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಇ.ಎಂ.ಮಂಜುನಾಥ, ವರದಿಗಾರ ಬಸವರಾಜ ದೊಡ್ಡಮನಿ ಮಾತನಾಡಿದರು.