ದಾವಣಗೆರೆ (Davanagere): ಸಮಾಜದಲ್ಲಿ ನೌಕರರು ಮತ್ತು ಪತ್ರಕರ್ತರು ಸಾರ್ವಜನಿಕರ ಹಿತ್ತಾಸಕ್ತಿಗೆ ಧಕ್ಕೆ ಭಾರದಂತೆ ಕಾರ್ಯ ನಿರ್ವಹಿಸಬೇಕಾಗುತ್ತದೆ ಎಂದು ಪತ್ರಕರ್ತ ಬಿ.ಚನ್ನವೀರಯ್ಯ ಹೇಳಿದರು.
ಜಿಲ್ಲಾ ಕನಕ ನೌಕರರ ಬಳಗದವರು ಇತ್ತೀಚೆಗೆ ಮಹಾನಗರ ಪಾಲಿಕೆ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದವರಿಗೆ ಕನಕ ನೌಕರರ ಬಳಗದವರು ಜಿಲ್ಲಾ ಕುರುಬರ ವಿದ್ಯಾವರ್ಧಕ ಸಂಘದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ನೌಕರರ ವರ್ಗ ಮತ್ತು ಪತ್ರಕರ್ತರು ಸಮಾಜದ ಶ್ರೇಯೋಭಿವೃಧಿಗೆ ಹಗಲಿರುಳು ಶ್ರಮಿಸುತ್ತಾರೆ. ಇಂತಹ ಸಂದರ್ಭಗಳಲ್ಲಿ ನಾವು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕಾಗುತ್ತದೆ ಎಂದರು.
ಸಾರ್ವಜನಿಕರು ನಮ್ಮ ಮೇಲೆ ಅಷ್ಠೇ ನಂಬಿಕೆ ಇಟ್ಟಿರುತ್ತಾರೆ ಸಾರ್ವಜನಿಕರ ಹಿತ್ತಾಸಕ್ತಿಗೆ ಧಕ್ಕೆ ಬಾರದ ರೀತಿಯಲ್ಲಿ ಕಾರ್ಯನಿರ್ವಹಿಸಿದಾಗ ಮಾತ್ರ ನಮ್ಮ ಜವಾಬ್ದಾರಿ ಹಾಗೂ ಕರ್ತವ್ಯಗಳಿಗೆ ನ್ಯಾಯಕೊಟ್ಟಾಂತಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಕುರುಬ ಸಮಾಜದ ಅಧ್ಯಕ್ಷ ಬಿ.ಎಚ್.ಪರುಶುರಾಮಪ್ಪ ಮಾತನಾಡಿ, ನೌಕರ ವರ್ಗದವರು ಭಾಷಾ ನಿಪುಣತೆ ಹೊಂದಿರಬೇಕಾಗುತ್ತದೆ. ಏಕೆಂದರೆ ಇತ್ತಿಚಿನ ದಿನಗಳಲ್ಲಿ ಉತ್ತರಭಾರತ ಮತ್ತು ದಕ್ಷೀಣ ಭಾರತದವರ ಜೊತೆಯಲ್ಲಿ ಕಾರ್ಯನಿರ್ವಹಿಸಬೇಕಾದರೆ ಮುಜುಗರವಾಗಲಿದೆ. ಆದ್ದರಿಂದ ಭಾಷಾ ನೈಪುಣ್ಯತೆ ಅನಿವಾರ್ಯವಾಗಿದೆ. ನಿಮ್ಮಕೆಲಸ ಕಾರ್ಯಗಳಲ್ಲಿ ಶ್ರದ್ದೆ ಮತ್ತು ನಿಷ್ಠೆ ಬೇಕಾಗುತ್ತದೆ. ಸಮಾಜ ನಿಮ್ಮಿಂದ ಸಾಕಷ್ಟು ನೀರೀಕ್ಷೆ ಮಾಡುತ್ತದೆ ಅಂತಹ ನೀರಿಕ್ಷೆಗಳಿಗೆ ನಿಮ್ಮಿಂದ ಸ್ಪಂದನೆ ಅತ್ಯವಶ್ಯಕವಾಗಿರುತ್ತದೆ. ಆದ್ದರಿಂದ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಲು ಸಲಹೆ ನೀಡಿದರು.
ಜಿಲ್ಲಾ ಸರ್ಕಾರಿ ನೌಕರರ ಸಂಘಕ್ಕೆ ಮೂರನೇ ಬಾರಿಗೆ ಚುನಾಯಿತರಾಗಿರುವ ಕೃಷಿ ಇಲಾಖೆಯ ಬಿ.ಆರ್.ತಿಪ್ಪೆಸ್ವಾಮಿ ಮಾತನಾಡಿ, ಸಾಧಕರನ್ನು ನೌಕರ ವರ್ಗ ಗೌರವಿಸುತ್ತಿರುವುದು ಅವರ ಕಾರ್ಯಗಳಿಗೆ ಮತ್ತಷ್ಟು ಉತ್ತೇಜನ ನೀಡಿದ್ದಂತಾಗುತ್ತದೆ. ಜಿಲ್ಲೆಯಲ್ಲಿ ಕನಕ ನೌಕರರ ವರ್ಗದವರು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ. ಇದೇ ರೀತಿಯಾಗಿ ಸಮಾಜಮುಖಿ ಕಾರ್ಯಗಳನ್ನು ಮಾಡುವುದಾಗಿ ಹೇಳಿದರು.
ಹಿರಿಯ ಪತ್ರಕರ್ತ ಲೋಕಿಕೆರೆ ಪುರಂದರ್ ಕೂಡ ಮಾತನಾಡಿದರು. ವೇಟ್ ಲಿಫ್ಟಿಂಗ್ ನಲ್ಲಿ ಸಾಧನೆ ಮಾಡಿದ ಪ್ರಶಾಂತ ಎಂ.ಕೊಗ್ಗನೂರು ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಶಿವಾನಂದ ದಳವಾಯಿ. ಪ್ರಾಸ್ತಾವಿಕವಾಗಿ ಮಾತನಾಡಿದರು.
ಗಣೇಶ್ ದಳವಾಯಿ, ಗೌರವಾಧ್ಯಕ್ಷರಾದ ಹಾಲೇಶಪ್ಪ. ಉಪಾಧ್ಯಕ್ಷರಾದ ನಾಗೇಶ್ ಗೌಡ್ರು. ಪರಶುರಾಮಪ್ಪ. ಗುರುಮೂರ್ತಿ. ಅವಿನಾಶ್. ರಂಗನಾಥ್. ಕುಬೇಂದ್ರ ಕುಮಾರ್. ಉಮೇಶ್ .ಜೆ,ಆರ್ ಶಿವಲಿಂಗಪ್ಪ.ಶಾಮನೂರು ಪದ್ದಪ್ಪ, ಮಂಜುನಾಥ್ ಜಿಲ್ಲಾ ಕನಕ ನೌಕರ ಬಳಗದ ಪದಾಧಿಕಾರಿಗಳು ಉಪಸ್ಥಿತರಿದ್ದರು.
Read also : ಬಿಸಿಯೂಟ ತಯಾರಕರ ಗೌರವಧನದಲ್ಲಿ ಕೇಂದ್ರದ ಪಾಲು ಹೆಚ್ಚಿಸಲು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಆಗ್ರಹ