ದಾವಣಗೆರೆ (Davanagere): ಅಕ್ರಮ ಗಾಂಜಾ ಗಿಡ ಬೆಳೆದ ಆರೋಪಿಗೆ 04 ತಿಂಗಳು 13 ದಿನ ಸಾದಾ ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ರೂ ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
ದಿ.14.09.2020 ರಂದು ದಾವಣಗೆರೆ ಗ್ರಾಮಾಂತರ ಠಾಣೆ ಸಿಪಿಐ ಬಿ. ಮಂಜುನಾಥ್ ಅವರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ ಸಿಬ್ಬಂದಿಗಳ ತಂಡ ಜರೀಕಟ್ಟೆ ಗ್ರಾಮದ ಶ್ರೀ ರವೀಂದ್ರನಾಥ್ ಬಡಾವಣೆಯ ಶಿರಮನಹಳ್ಳಿ ಕೆಂಚಪ್ಪ ಎಂಬುವವರು ಜರೀಕಟ್ಟೆ ಗ್ರಾಮ ಮನೆಯ ಹತ್ತಿರ ಹೋಗಿ ನೋಡಿದಾಗ ಮನೆಯ ಪಕ್ಕದ ಖಾಲಿ ಜಾಗದಲ್ಲಿ ಕಾನೂನು ಬಾಹಿರವಾಗಿ ಒಂದು 06 ಅಡಿ ಎತ್ತರದ ಗಾಂಜಾ ಗಿಡ ಬೆಳೆಸಿದ್ದು, ಆರೋಪಿಯು ಅಕ್ರಮ ಗಾಂಜಾಗಿಡವನ್ನು ಬೆಳೆದಿದ್ದರಿಂದ ಆರೋಪಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಹದಡಿ ಪೊಲೀಸ್ ಠಾಣೆ ಪ್ರಕರಣ ದಾಖಲಿಸಿಕೊಂಡು ಪ್ರಕರಣದ ತನಿಖಾಧಿಕಾರಿ ಪಿಎಸ್ಐ ಪ್ರಸಾದ್ .ಪಿ, ತನಿಖೆ ಕೈಗೊಂಡು ಆರೋಪಿತರ ವಿರುದ್ಧ ನ್ಯಾಯಾಲಯಕ್ಕೆ ದೋಷರೋಪಣಾಪಟ್ಟಿಯನ್ನು ಸಲ್ಲಿಸಿದ್ದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ರಾಜೇಶ್ವರಿ .ಎನ್ ಹೆಗಡೆ ಅವರು ಆರೋಪಿ ಶಿರಮನಹಳ್ಳಿ ಕೆಂಚಪ್ಪ ಮೇಲೆ ಆರೋಪ ಸಾಬೀತಾಗಿದ್ದರಿಂದ ನ 8 ರಂದು 04 ತಿಂಗಳು, 13 ದಿನ ಸಾದಾ ಕಾರಾಗೃಹ ಶಿಕ್ಷೆ ಮತ್ತು 10,000/-ರೂ ದಂಡ ವಿಧಿಸಿದ್ದಾರೆ. ಆರೋಪಿತನು ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದು , ಬಂಧನದ ಅವಧಿ ಪರಿಗಣಿಸಿ ಶಿಕ್ಷಾ ಅವಧಿಯನ್ನು ಸೆಟ್ ಆಪ್ ಮಾಡಲಾಗಿದೆ. ಸರ್ಕಾರಿ ವಕೀಲರಾದ ಮಂಜುನಾಥ್ .ಬಿ ರವರು ನ್ಯಾಯ ಮಂಡನೆ ಮಾಡಿದ್ದಾರೆ.
ಪ್ರಕರಣದಲ್ಲಿ ತನಿಖೆ ಕೈಗೊಂಡು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ ತನಿಖಾಧಿಕಾರಿ ಪ್ರಸಾದ್ .ಪಿ, ಪ್ರಕರಣದಲ್ಲಿ ದಾಳಿಮಾಡಿ ಆರೋಪಿ ಬಂಧಿಸುವಲ್ಲಿ ಸಿಪಿಐ ಮಂಜುನಾಥ್.ಬಿ, ರವರನ್ನು , ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ ಸಿಬ್ಬಂದಿಗಳಾದ ರಾಜು ಲಮಾಣಿ, ಹನುಮಂತಪ್ಪ, ಶ್ರೀನಿವಾಸ, ನಾಗರಾಜ್, ಅಶೋಕ ರವರುಗಳನ್ನು ಹಾಗೂ ನ್ಯಾಯಾಮಂಡನೆ ಮಾಡಿದ ಸರ್ಕಾರಿ ವಕೀಲ ಮಂಜುನಾಥ್.ಬಿ ರವರನ್ನು ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್, ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ ಎಂ. ಸಂತೋಷ & ಮಂಜುನಾಥ. ಜಿ ರವರು ಶ್ಲಾಘೀಸಿದ್ದಾರೆ.
Read also : Davanagere | ನ. 14 ರಂದು ವಿದ್ಯುತ್ ವ್ಯತ್ಯಯ