ದಾವಣಗೆರೆ: ನಗರದ ಎಸ್.ಕೆ.ಪಿ.ರಸ್ತೆಯಲ್ಲಿನ ಶ್ರೀಕನ್ನಿಕಾ ಪರಮೇಶ್ವರಿ ದೇವಸ್ಥಾನ (ರಿ.) ಪಬ್ಲಿಕ್ ರಿಲೀಜಿಯಸ್ ಟ್ರಸ್ಟ್‍ನಿಂದ ವಾಸವಿ ದೇವಿಯ ಜಯಂತಿ ಅಂಗವಾಗಿ ಮೇ 18ರಂದು ಶನಿವಾರ ಎಸ್.ಕೆ.ಪಿ. ರಸ್ತೆಯಲ್ಲಿನ ದೇವಸ್ಥಾನದಲ್ಲಿ ಆದಿ ಪರಾಶಕ್ತಿ ಶ್ರೀ ಕನ್ನಿಕಾ ಪರಮೇಶ್ವರಿ ದೇವಿಗೆ ವಿಶೇಷ ಅಲಂಕಾರ, ವಿಶೇಷ ಪೂಜೆಗಳೊಂದಿಗೆ ಮಧ್ಯಾಹ್ನ 12.30ಕ್ಕೆ ಮಹಾ ಮಂಗಳಾರತಿ ನಂತರ ಅನ್ನ ಸಂತರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿದೆ.
ಅಲ್ಲದೇ ಪ್ರತಿವರ್ಷದಂತೆ ದೇವಿಯ ಉತ್ಸವ ಮೂರ್ತಿಯ ಮೆರವಣಿಗೆ ಸಂಜೆ 6ರ ನಂತರ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ. ಎಲ್ಲಾ ಕಾರ್ಯಕ್ರಮಗಳಿಗೆ ಸರ್ವ ಭಕ್ತಾಧಿಗಳು ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಟ್ರಸ್ಟ್‍ನ ಅಧ್ಯಕ್ಷ, ಉಪಾಧ್ಯಕ್ಷರು ಸೇರಿದಂತೆ ಎಲ್ಲಾ ಪದಾಧಿಕಾರಿಗಳು ಕೋರಿದ್ದಾರೆ.