ದಾವಣಗೆರೆ (Davangere District) : ಸಾಕ್ಷರತಾ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಅಚ್ಚುಕಟ್ಟಾಗಿ ನಿರ್ವಹಿಸಬೇಕು, ಅನಕ್ಷರಸ್ಥರನ್ನು ಸಾಕ್ಷರತೆಗೆ ಒಳಪಡಿಸಬೇಕು ಎಂದು ಸಿಇಒ ಡಾ. ಸುರೇಶ್ ಇಟ್ನಾಳ್ ಹೇಳಿದರು.
ಜಿಪಂ ಕಚೇರಿ (Davangere District Panchayat) ಸಭಾಂಗದಲ್ಲಿ ನಡೆದ ಸಾಕ್ಷರತಾ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಸಾಕ್ಷರತಾ ಕಾರ್ಯಕ್ರಮ ಜಿಲ್ಲೆಯಲ್ಲಿ ನಿಖರವಾಗಿ, ಕ್ರಮಬದ್ಧವಾಗಿ ನಡೆಯಬೇಕು. ಎಲ್ಲರೂ ಕಾರ್ಯದಲ್ಲಿ ತೊಡಗಿ ಸಾಕ್ಷರತೆ ಪ್ರಮಾಣ ಹೆಚ್ಚಿಸುವಲ್ಲಿ ಮುಂದಾಗಬೇಕು ಎಂದರು.
ಇದನ್ನು ಓದಿ : Davangere news : ಹೊಸ ಅಂಚೆ ಕಚೇರಿ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿ
ಕಲಿಕಾರ್ಥಿಗಳು ಪ್ರಶ್ನೆ ಪತ್ರಿಕೆ ಸಾಹಿತ್ಯ ಮತ್ತು ವರ್ಕ್ ಶೀಟ್ ಬಳಸಲು ನಿಗದಿಪಡಿಸಿದ ವೆಬ್‌ಲಿಂಕ್ ಬ್ರೋಚರನ್ನು ಸಿಇಒ ಬಿಡುಗಡೆ ಮಾಡಿದರು.
ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳು 3 ಕಾರ್ಯಕ್ರಮ ಬಗ್ಗೆ ಭೌತಿಕ ಗುರಿ ಮತ್ತು ಸಮೀಕ್ಷೆ ಪ್ರಗತಿ ಮಂಡಿಸಿದರು.
ಡಿಡಿಪಿಐ, ಬಿಇಒ ಸೇರಿದಂತೆ ಸಾಕ್ಷರತೆ ಇಲಾಖೆ ಅಧಿಕಾರಿಗಳು ಇದ್ದರು.