ಜಗಳೂರು ಸುದ್ದಿ: ತಾಲ್ಲೂಕಿನ ಅಸಗೋಡು ವಡ್ಡರಹಟ್ಟಿ ಗ್ರಾಮದಲ್ಲಿ ಪ್ರಾಥಮಿಕ ಶಾಲೆಯ ಎರಡು ಮಕ್ಕಳು ಶಾಲೆ ಬಿಟ್ಟ ನಂತರ ಕೃಷಿಹೊಂಡದ ದಡದಲ್ಲಿ ಆಟ ಆಡುವಾಗ ಕಾಲು ಜಾರಿ ಬಿದ್ದು ಸಾವನ್ನಪಿರುವ ಘಟನೆ ಸೋಮವಾರ ಸಂಜೆ ನಡೆದಿದೆ.ತಾಲ್ಲೂಕಿನಅಸಗೋಡುವಡ್ಡರಹಟ್ಟಿ ಗ್ರಾಮದಲ್ಲಿ ಪ್ರಾಥಮಿಕ ಶಾಲೆಯ ಪಕ್ಕದ 50 ಮೀಟರ್ ದೂರದಲ್ಲೇ ಕೃಷಿ ಹೊಂಡ ಇದ್ದು, ಶಾಲೆ ಬಿಟ್ಟ ನಂತರ ಮೂವರು ವಿದ್ಯಾರ್ಥಿಗಳು ಕೃಷಿ ಹೊಂಡದ ಮೇಲೆ ಆಟ ಆಡುತ್ತಾ ಕಾಲು ಜಾರಿ ಹೊಂಡಕ್ಕೆ ಬಿದ್ದಿದ್ದಾರೆ.
ಗಂಗೋತ್ರಿ (11), ತನುಜಾ(11) ನಾಲ್ಕನೇ ತರಗತಿಯ ವಿದ್ಯಾರ್ಥಿಗಳೇ ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಇವರ ಜೊತೆಯಲ್ಲಿ 5 ನೇ ತರಗತಿ ಕುಷಿಯ ಕೂಗಾಟ ಕೇಳಿ ಅವರನ್ನು ಗ್ರಾಮಸ್ಥರು ಮೇಲಕ್ಕೆ ಎತ್ತಿ ರಕ್ಷಣೆ ಮಾಡಿದ್ದಾರೆ. ಅಷ್ಟರೊಳಗೆ ಗಂಗೋತ್ರಿ, ತನುಜಾ ಮೃತ ಪಟ್ಟಿದ್ದು ಮಕ್ಕಳು ಸಾವು ನೋಡಿ ಸಂಬಂಧಿಕರ ಆಂಕ್ರಂದನ ಮುಗಿಲು ಮುಟ್ಟಿತ್ತು.
ಮೃತ ವಿದ್ಯಾರ್ಥಿಗಳ ತಂದೆ ತಾಯಿ ಕೂಲಿ ಕೆಲಸಕ್ಕೆ ಹೊರಗಡೆ ಹೋಗಿದ್ದಾರೆ. ಅಜ್ಜಿಯ ಜೊತೆಯಲ್ಲಿ ಮಕ್ಕಳು ಇದ್ದು ಶಾಲೆಗೆ ಹೋಗುತ್ತಿದ್ದರು ಎನ್ನಲಾಗಿದೆ. ಈ ಸಂಬಂಧ ಸ್ಥಳಕ್ಕೆ ಬಿಳಿಚೋಡು ಪೋಲೀಸರು ಬೇಟಿ ನೀಡಿ ಸ್ಥಳ ಪರಿಶೀಲನೆ ಮಾಡುತ್ತಿದ್ದಾರೆ.
English Summary: While playing on the bank of the farm, two children slipped and fell, one died and one escaped