ದಾವಣಗೆರೆ (Davanagere) : ಕೊಲೆ ಯತ್ನ ಮತ್ತು ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ 2 ವರ್ಷ 6 ತಿಂಗಳು ಕಾರಾಗೃಹ ಶಿಕ್ಷೆ ಮತ್ತು 12 ಸಾವಿರ ರೂ. ದಂಡ ವಿಧಿಸಿ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿ ಆದೇಶ ಹೊರಡಿಸಿದೆ.
ನಗರದ ಡಿಸಿಎಂ ಟೌನ್ ಶಿಪ್ ನ ನಿವಾಸಿ ಅಣ್ಣಪ್ಪ (34) ಶಿಕ್ಷೆಗೆ ಒಳಗಾದ ಆರೋಪಿ.
ಘಟನೆ ವಿವರ: ಹಳೆ ಚಿಕ್ಕನಹಳ್ಳಿಯ ಸಂತೋಷ್ ಕುಮಾರ್ ಮತ್ತು ಜಯರಾಜ್ ಕೇಶವ ಎಂಬುವರ ಬಳಿ 13-05-2018 ರಂದು ಅಣ್ಣಪ್ಪ 1 ಲಕ್ಷ ರೂ. ಕೈ ಸಾಲ ಪಡೆದಿದ್ದ. ಆ ದಿನವೇ ಸಂಜೆ 5.20 ಗಂಟೆಗೆ ಸಂತೋಷ್ ಕುಮಾರ್ ಮತ್ತು ಜಯರಾಜ್ ಕೇಶವ ಇಬ್ವರು ಅಣ್ಣಪ್ಪನ ಮನೆಗೆ ಹೋಗಿ ಕೇಳಿದ್ದಾರೆ. ಸದ್ಯ ನನ್ನ ಬಳಿ ಹಣವಿಲ್ಲ 6 ತಿಂಗಳು ಬಿಟ್ಟು ಕೊಡುವುದಾಗಿ ಅಣ್ಣಪ್ಪ ಹೇಳಿದ್ದಾರೆ.
Read also : Davanagere | ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ನೇಮಕಾತಿ ಅವಧಿ ವಿಸ್ತರಣೆ
ಇಲ್ಲ, ನಮಗೆ ಈಗಲೇ ಹಣ ಬೇಕೆಂದು ಸಂತೋಷ್ ಕುಮಾರ್ ಮತ್ತು ಜಯರಾಜ್ ಕೇಶವ ಕೇಳಿದ್ದಾರೆ. ಈ ವೇಳೆ ಅಣ್ಣಪ್ಪ, ಸಂತೋಷ್ ಕುಮಾರ್ ನಿಗೆ ಜಾತಿ ನಿಂದನೆ ಮಾಡಿದ್ದಾನೆ. ಅಲ್ಲದೇ ಜಯರಾಜನಿಗೆ ಚಾಕುವಿನಿಂದ ಹೊಟ್ಟೆಗೆ, ಎದೆಗೆ ಚುಚ್ಚಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ.
ಕೂಡಲೇ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಅಣ್ಣಪ್ಪನ ವಿರುದ್ಧ ದೂರು ದಾಖಲಿಸಿದ್ದಾರೆ.
ತನಿಖೆ ನಡೆಸಿದ ತನಿಖಾಧಿಕಾರಿಗಳಾದ ಎಂ.ಕೆ.ಗಂಗಲ್, ಮೊಹಮ್ಮದ್ ಬಾಬು ಅವರು ಅಣ್ಣಪ್ಪನ ವಿರುದ್ಧ ನ್ಯಾಯಾಲಯಕ್ಕೆ ದೋಷರೋಪಣಾ ಸಲ್ಲಿಸಿದ್ದರು
ವಿಚಾರಣೆ ನಡೆಸಿದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಆರ್.ಎನ್.ಪ್ರವೀಣ್ ಕುಮಾರ್ ಅವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ 2 ವರ್ಷ 6 ತಿಂಗಳು ಶಿಕ್ಷೆ, 12 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿ ಆದೇಶ ಹೊರಡಿಸಿದ್ದಾರೆ.
ದೂರುದಾರ ಪರವಾಗಿ ಸರ್ಕಾರಿ ವಕೀಲ ಜಯಪ್ಪ ಅವರು ವಾದ ಮಾಡಿದ್ದರು.
ಪ್ರಕರಣದಲ್ಲಿ ತನಿಖೆ ಕೈಗೊಂಡು ಆರೋಪಿ ವಿರುದ್ಧ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ ತನಿಖಾಧಿಕಾರಿ ಎಂ.ಕೆ.ಗಂಗಲ್, ಮೊಹಮ್ಮದ್ ಬಾಬು ಹಾಗೂ ಕೆಟಿಜೆ ನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳು ಹಾಗೂ ಪಿರ್ಯಾದಿದಾರರ ಪರವಾಗಿ ನ್ಯಾಯಮಂಡನೆ ಮಾಡಿದ ಸರ್ಕಾರಿ ವಕೀಲರಾದ ಜಯಪ್ಪ ಅವರಿಗೆ ಎಸ್ಪಿ ಉಮಾ ಪ್ರಶಾಂತ, ಹೆಚ್ಚುವರಿ ಎಸ್ಪಿ ವಿಜಯಕುಮಾರ್ ಎಂ. ಸಂತೋಷ , ಜಿ. ಮಂಜುನಾಥ ಶ್ಲಾಘಿಸಿದ್ದಾರೆ.