ದಾವಣಗೆರೆ: ನಗರದ ಗಣೇಶ್ ಪೇಟೆಯ ಪಿಂಜಾರಗಲ್ಲಿನ ಶ್ರೀ ಕನ್ನಿಕಾಪರಮೇಶ್ವರಿ ದೇವಸ್ಥಾನ ಹಿಂಬಾಗದ ನಿವಾಸಿ ಸಿ.ಎನ್.ಪ್ರಸನ್ನ ಕುಮಾರ್ ರವರ ಧರ್ಮಪತ್ನಿ ಸಿ.ಪಿ.ಸುಶೀಲಮ್ಮ ಅವರು 13ರ ಶನಿವಾರ ರಾತ್ರಿ 11 ಗಂಟೆಗೆ ದೈವಾಧೀನರಾದರು.
ಮೃತರ ಅಂತಿಮ ಕ್ರಿಯಾದಿಗಳನ್ನು 14ರ ಭಾನುವಾರ ಮಧ್ಯಾಹ್ನ 2 ಗಂಟೆ ವೇಳೆಗೆ ಪಿ.ಬಿ. ರಸ್ತೆಯಲ್ಲಿರುವ ವೈಕುಂಠ ಧಾಮದಲ್ಲಿ ನೆರವೇರಿಸಲಾಯಿತು. ಮೃತರು ಪತಿ ಸಿ.ಎನ್.ಪ್ರಸನ್ನ ಕುಮಾರ್, ಪುತ್ರರಾದ ಸಿ.ಪಿ ಸತೀಶ್ ಕುಮಾರ್ ಹಾಗೂ ಸಿ. ಪಿಹರೀಶ್ ಕುಮಾರ್ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರಾದ ಸಿ.ಪಿ.ಸುಶೀಲಮ್ಮ ಅವರು ವಾರ್ತಾ ವಿಹಾರ ದಿನಪತ್ರಿಕೆಯ ಸಂಪಾದಕರಾದ ಸಿ.ಪಿ.ಸತೀಶ್ ಕುಮಾರ್ ಅವರ ತಾಯಿ.
ಸಿ.ಪಿ.ಸತೀಶ ಕುಮಾರ್ ಅವರಿಗೆ ಮಾತೃ ವಿಯೋಗ
Leave a comment