Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > DAVANAGERE :ಸಮಾಜ ಸುಧಾರಣೆ ಚಿಂತನೆ ಸಿದ್ಧರಾಮ ಸಂಸ್ಕೃತಿ ನೆಲೆಯೂರಲು ಕಾರಣ : ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ
ತಾಜಾ ಸುದ್ದಿ

DAVANAGERE :ಸಮಾಜ ಸುಧಾರಣೆ ಚಿಂತನೆ ಸಿದ್ಧರಾಮ ಸಂಸ್ಕೃತಿ ನೆಲೆಯೂರಲು ಕಾರಣ : ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ

Dinamaana Kannada News
Last updated: August 5, 2024 12:27 pm
Dinamaana Kannada News
Share
DAVANAGERE
ಶಿವಯೋಗಿ ಶ್ರೀ ಸಿದ್ಧರಾಮೇಶ್ವರ ದೇವರ 62ನೇ ರಥೋತ್ಸವ ,ಲಿಂಗೈಕ್ಯ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿರವರ 22ನೇ ಸಂಸ್ಮರಣೋತ್ಸವ
SHARE

ದಾವಣಗೆರೆ ಜು.5 (DAVANAGERE ):  ಸಿದ್ಧರಾಮರ ವ್ಯಕ್ತಿತ್ವ ಹಲವು ಮುಖಗಳಲ್ಲಿ ಅರಳಿದೆ. ಸಮೇಜೋಧರ‍್ಮಿಕ ಮಹಾನ್ ಸಾಹಸಿಯಾಗಿ, ಮಹಾ ಅನುಭಾವಿಯಾಗಿ, ಸಮಾಜಚಿಂತಕನಾಗಿ, ಸಮಾಜ ಸುಧಾರಕನಾಗಿ, ಸಮತೆಯ ಗಾರುಡಿಗನಾಗಿ, ರ‍್ವಜೀವದಯಾಪರನಾಗಿ, ಮಹಾಮಾನವತಾವಾದಿಯಾಗಿ, ವೀರ ವೈರಾಗ್ಯನಿಧಿಯಾಗಿ, ಜಂಗಮಜ್ಞಾನಿಯಾಗಿ, ಅವತಾರಿಯಾಗಿ, ಕ್ರಿಯೆ-ಜ್ಞಾನಗಳ ಸಮನ್ವಯಕನಾಗಿ, ರ‍್ಮಯೋಗಿ, ಕಾಯಕಯೋಗಿ, ಶಿವಯೋಗಿ ಒಟ್ಟಿನಲ್ಲಿ ಸಿದ್ಧರಾಮರು ತನ್ನ ಜನಾನುರಾಗಿ ಕರ‍್ಯಗಳಿಂದ ಅಂದಿನ ಕನ್ನಡ ನಾಡಿನ ಜನಗಳ ಮನಸ್ಸಿನಲ್ಲಿ ಜೀವಂತವಾಗಿದ್ದರು ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ (Shri Immadi Siddharameshwar Swamiji) ಹೇಳಿದರು.

ನಗರದ ವೆಂಕಭೋವಿ ಕಾಲೋನಿಯಲ್ಲಿರುವ ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ, ಭೋವಿ ಗುರುಪೀಠ ದಾವಣಗೆರೆ ಶಾಖೆಯಿಂದ ಜರುಗಿದ ಶಿವಯೋಗಿ ಶ್ರೀ ಸಿದ್ಧರಾಮೇಶ್ವರ ದೇವರ 62 ನೇ ರಥೋತ್ಸವ ಮಠದ ಸಂಸ್ಥಾಪಕರಾದ ಲಿಂಗೈಕ್ಯ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿರವರ 22ನೇ ಸಂಸ್ಮರಣೋತ್ಸವದ ದಿವ್ಯಾಧ್ಯಕ್ಷತೆ ವಹಿಸಿಕೊಂಡು ಮಾತನಾಡಿದರು.

ಸಿದ್ಧರಾಮರ ವ್ಯಕ್ತಿತ್ವ ಅಸಾಧಾರಣವಾದುದು. ಒಂದು ಪರಂಪರೆಯನ್ನು ಕಟ್ಟುವಲ್ಲಿನ ತಾದಾತ್ಮ, ಬದ್ಧತೆ, ಪ್ರಸಿದ್ದಿ ಹಾಗೂ ಅವರ ದೈವತ್ವದ ಗುಣ ಒಂದು ಸಂಸ್ಕೃತಿಯನ್ನು ಹುಟ್ಟಿಹಾಕಿತು. ಸಿದ್ದರಾಮರದು ಶ್ರಮಿಕ ಪರಂಪರೆ. ಕನ್ನಡವೇ ಸಿದ್ಧರಾಮರ ಉಸಿರು ಈ ಮಣ್ಣಿನ ಭಾಷೆ, ಬಯಲ ರ‍್ಮ ಅವರ ಮಾಧ್ಯಮವಾಯಿತು.

ಜನರನ್ನು ಪ್ರೀತಿಸುವ ಜನಮುಖಿ ವ್ಯಕ್ತಿತ್ವ, ಸಮಾಜದ ಕಷ್ಟಕೋಟಲೆಗಳಿಗೆ ತುಡಿಯುವ, ಸ್ಪಂದಿಸುವ ತಾಯಿ ಹೃದಯ ಮಹಿಳೆಯರನ್ನು, ನೊಂದವರನ್ನು, ಅಶಕ್ತರನ್ನು ಪ್ರೀತಿಯಿಂದ ಕಾಣುವ, ಅವರಿಗೆ ಬದುಕನ್ನು ಕಲ್ಪಿಸಿಕೊಡುವ ಅಂತಃಕರಣ ಆ ನಿಟ್ಟಿನಲ್ಲಿ ತಾನು ಕಟ್ಟಿದ ನರ‍್ವಹಿಸಿದ ಕೆರೆ, ಕಟ್ಟೆ, ಕಾಲುವೆ, ಬಾವಿ, ಛತ್ರ, ಮಂದಿರ, ಶಿಕ್ಷಣ ಕ್ಷೇತ್ರಗಳು ಇತರೆ ಸಾಮಾಜಿಕ ಕೆಲಸಗಳೊಡನೆ ಇದ್ದರೂ ಅವುಗಳನ್ನೇ ತನ್ನ ಕಾರುಬಾರು ಮಾಡಿಕೊಳ್ಳದ ಜಂಗಮತನ ಸಿದ್ದರಾಮರನ್ನು ಇತರ ಆಧ್ಯಾತ್ಮ ಶರಣ ಜೀವಿಗಳಿಗಿಂತ ವಿಭಿನ್ನ ಮಾಡಿತು.

ಸಮಾಜ ಸುಧಾರಣೆಯ ಚಿಂತನೆ, ಒಳನೋಟ ಸಿದ್ಧರಾಮ ಸಂಸ್ಕೃತಿ ನೆಲೆಯೂರಲು ಕಾರಣವಾಯಿತು. “ದೇಹವನ್ನೇ ದೇಗುಲವಾಗಿಸಿಕೊಂಡ” ಶರಣ ಸಂಸ್ಕೃತಿಯನ್ನು ಒಪ್ಪಿಕೊಂಡೂ ತನ್ನ ತನವನ್ನು ಉಳಿಸಿಕೊಂಡು ಮೇರುಮಟ್ಟಕ್ಕೆ ಬೆಳೆದದ್ದು ಸಿದ್ಧರಾಮರ ಸಂಸ್ಕೃತಿ ಎಂದು ತಿಳಿಸಿದರು.

ವಾಲ್ಮೀಕಿ ಗುರುಪೀಠದ ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ (Sri Valmiki Prasannananda Swamiji) ಮಾತನಾಡಿ, ಸಿದ್ಧರಾಮನ ಜೀವನವನ್ನು ಗಮನಿಸಿದಾಗ, ಅವನಿಗೆ ಆತ್ಮಜ್ಞಾನಿ ಅಲ್ಲಮಪ್ರಭುವಿನ ರ‍್ಶನವಾಗುವವರೆಗೆ, ನಾಥಪರಂಪರೆ ಚಿಂತನೆಯ ಪರಮರ‍್ಥ, ಇಹ-ಪರ, ಸ್ರ‍್ಗ- ನರಕ, ಮಡಿ-ಮೈಲಿಗೆ, ಪರ‍್ವಜನ್ಮ-ಪುರ‍್ಜನ್ಮ, ರ‍್ಣ-ರ‍್ಗ, ಸ್ತ್ರೀ-ಪುರುಷ, ಶಾಂತಿ-ಸಮಾರಾಧನೆ, ತರ‍್ಥಯಾತ್ರೆ, ಹೋಮ-ಹವನ, ಪೂಜೆ-ಹರಕೆ, ಗುಡಿ- ಗುಂಡಾರ ಇಂತಹ ರ‍್ಥಹೀನ ಪದ್ಧತಿ ಮತ್ತು ಆಚರಣೆಗಳೇ ರ‍್ಮವೆಂಬ ನಂಬಿಕೆಯಲ್ಲಿದ್ದ. ಆದರೆ ಶರಣ ಸಿದ್ದಾಂತದ ಗುರು-ಲಿಂಗ-ಜಂಗಮದ ಅರಿವಾದ ನಂತರ, ಕಾಯಕ, ದಾಸೋಹ, ಅನುಭಾವಗಳು ರ‍್ಥವಾದಾಗ ಅವನು ಪರ‍್ಣ ಪರಿರ‍್ತನೆಗೊಳ್ಳುತ್ತಾನೆ ಎಂದು ತಿಳಿಸಿದರು.

ವಿರಕ್ತಮಠದ ಬಸವಪ್ರಭು (Basavaprabhu of Viraktamatha) ಶ್ರೀಗಳು ಮಾತನಾಡಿ, ಸಿದ್ದರಾಮರ ಆದ್ಯ ಉದ್ದೇಶವೇ ವ್ಯಕ್ತಿಗತ ಪರಿರ‍್ತನೆ. ವ್ಯಕ್ತಿ ಪರಿರ‍್ತನೆಗೊಂಡರೆ, ಸಹಜವಾಗಿಯೇ ಸಮುದಾಯದ ಪರಿರ‍್ತನೆಯಾಗುತ್ತದೆ. ಅಂತಹ ವ್ಯಕ್ತಿಗತ ಪರಿರ‍್ತನೆಗೆ ಸಿದ್ಧರಾಮ ಒಂದು ಉಜ್ವಲ ನಿರ‍್ಶನ. ಲಕ್ಷ ಲಕ್ಷ ಸಂಖ್ಯೆಯಲ್ಲಿದ್ದ ಭಕ್ತ ಸಮುದಾಯವೆಲ್ಲ ಸ್ವಾಭಾವಿಕವಾಗಿಯೇ ಸಿದ್ಧರಾಮನ ಶರಣ ಮರ‍್ಗವನ್ನು ಅನುಸರಿಸಲಿ ಎಂದು ಕರೆ ನೀಡಿದರು.

Davanagere : ದುರಂತ ನಾಯಕನಾಗಲು ಸಿದ್ದು ತಯಾರಿಲ್ಲ

ಅಂಬಿಗರ ಗುರುಪೀಠದ ಜಗದ್ಗುರು ಶ್ರೀ ಶಾಂತಬೀಷ್ಮ ಚೌಡಯ್ಯ ಸ್ವಾಮೀಜಿ ಮಾತನಾಡಿ, ಶುಷ್ಕ ಆಚರಣೆಗಳು, ಕಂದಾಚಾರಗಳು, ಮೂಢನಂಬಿಕೆಗಳು, ಆಡಂಬರದ ಡಾಂಬಿಕ ಆಚರಣೆಗಳು, ನಡೆ-ನುಡಿಗಳಲ್ಲಿ ಹೊಂದಾಣಿಕೆಯಿಲ್ಲದ ನೈತಿಕ ಹೀನಸ್ಥಿತಿ, ದೀನ- ದಲಿತರ ಶೋಷಣೆಗಳನ್ನು ಕಂಡು ಅವರ ಮನಸ್ಸು ಮರುಗಿತು. ರ‍್ವಜೀವಿಗಳಿಗೆ ಒಳಿತನ್ನುಂಟು ಮಾಡುವ ಸಂಕಲ್ಪದಿಂದ ಅವರು ತರ-ತಮ ಭಾವವಿಲ್ಲದ ಸಮಾನತೆಯ ಸುಂದರ ಸಮಾಜವನ್ನು ನರ‍್ಮಿಸಲು ನರ‍್ಧರಿಸಿದರು. ಅಂಧಾನುಕರಣೆ, ದೇವರ ಹೆಸರಿನಲ್ಲಿ ನಡೆಯುತ್ತಿದ್ದ ಶೋಷಣೆಗಳ ವಿರುದ್ಧ ಸಮರವನ್ನೇ ಸಾರಿದರು. ದಯೆ, ಕರುಣೆಗಳೇ ರ‍್ಮದ ಹೃದಯವೆಂದು ಒತ್ತಿ ಹೇಳಿದರು.

ಮಾಯಕೊಂಡ ಶಾಸಕ ಬಸವಂತಪ್ಪ, ಹರಪ್ಪನಹಳ್ಳಿ ಶಾಸಕಿ ಶ್ರೀಮತಿ ಲತಾ ಮಲ್ಲಿಕರ‍್ಜುನ, ರ‍್ನಾಟಕ ಭೋವಿ ಅಭಿವೃದ್ಧಿ ನಿ ಗಮದ ಅಧ್ಯಕ್ಷರಾದ ರವಿಕುಮಾರ ಎಸ್, ಮೇಯರ್ ವಿನಾಯಕ ಪೈಲ್ವಾನ್, ಸದಸ್ಯರಾದ ಎ ನಾಗರಾಜ, ಗಡಿಗುಡಿ ಮಂಜುನಾಥ, ಜಿ.ಬಿ ವಿನಯ ಕುಮಾರ, ಭೋವಿ ನಿಗಮದ ಮಾಜಿ ನರ‍್ದೇಶಕ ಕಾಳಘಟ್ಟ ಹನುಮಂತಪ್ಪ, ಉತ್ಸವ ಸಮಿತಿ ಹಾಗೂ ಶ್ರೀ ಪೀಠದ ರ‍್ಮರ‍್ಶಿಗಳಾದ ಜಯಣ್ಣ. ಎಚ್, ಗೋಪಾಲ್ ವಿ, ನಾಗರಾಜ್ ಎ ಬಿ, ಟಿ ಮಂಜುನಾಥ್, ಶ್ರೀನಿವಾಸ್ ಪಿ, ವಿನಾಯಕ್. ಬಿ.ಎನ್, ಡಿ ಬಸವರಾಜ್, ಇಂಜಿನಿಯರ್ ವೆಂಕಟೇಶ್, ಶ್ರೀನಿವಾಸ, ಶಿವಶಂಕರ್ ಶಿಲ್ಪಿ. ಟಿ, ಶ್ರೀಮತಿ ಉಮಾಕುಮಾರ, ರಾಜಣ್ಣ ಚನ್ನಗಿರಿ, ರ‍್ಜುನ್ ಜಗಳೂರು, ಮಂಜುನಾಥ್ ಜಿ. ಹೊನ್ನಾಳಿ, ರಾಜಣ್ಣ ಚಟ್ನಹಳ್ಳಿ. ಅಂಜಿನಪ್ಪ ಹರಪನಹಳ್ಳಿ, ವೀರಭದ್ರಪ್ಪ. ಹರಿಹರ, ದಿನೇಶ್. ನ್ಯಾಮತಿ, ವೀರೇಶ್ ಬಿ, ಚಾಮರಾಜ. ಎಂ, ವಿನೋದ್ ನಗರ, ಮಂಜುನಾಥ್ ನಲ್ಲಿ, ಪ್ರವೀಣ್, ಸೋಮಶೇಖರ. ಜಿ, ಶೇಖರಪ್ಪ, ಮಂಜಪ್ಪ. ಜಿ, ರವಿಕುಮಾರ್ ಪಿ ಉಪಸ್ಥಿತಿಯಿದ್ದರು.

ಯಾದವ ಮಹಾ ಸಂಸ್ಥಾನದ ಜಗದ್ಗುರು ಶ್ರೀ ಕೃಷ್ಣ ಯಾದವಾನಂದ ಮಹಾಸ್ವಾಮಿಗಳು, ಮಡಿವಾಳ ಗುರುಪೀಠದ ಜಗದ್ಗುರು ಶ್ರೀ ಬಸವ ಮಾಚಿದೇವ ಮಹಾಸ್ವಾಮಿಗಳು, ಈಡಿಗ ಗುರುಪೀಠದ ಜಗದ್ಗುರು ಶ್ರೀ ರೇಣುಕಾರಂದ ಮಹಾಸ್ವಾಮಿಗಳು, ಹಡಪದ ಅಪ್ಪಣ್ಣ ಗುರು ಪೀಠದ ಜಗದ್ಗುರು ಶ್ರೀ ಅನ್ನದಾನಿ ಭಾರತೀಯ ಅಪ್ಪಣ್ಣ ಸ್ವಾಮಿಗಳು, ಕುಂಬಾರ ಗುರುಪೀಠದ ಜಗದ್ಗುರು ಶ್ರೀ ಕುಂಬಾರಗುಂಡಯ್ಯ ಮಹಾಸ್ವಾಮಿಗಳು, ಮೇದಾರ ಗುರುಪೀಠದ ಶ್ರೀ ಇಮ್ಮಡಿ ಮೇದಾರ ಕೇತೇಶ್ವರ ಮಹಾಸ್ವಾಮಿಗಳು, ಕೊರಟಗೆರೆರೆಯ ಶ್ರೀ ಮಹಾಲಿಂಗ ಸ್ವಾಮೀಜಿ, ಹೊನಕಲ್ಲಿನ ಶ್ರೀ ಬಸವ ರಮಾನಂದ ಸ್ವಾಮೀಜಿ, ಶಿಕಾರಿಪುರದ ಶ್ರೀ ಚನ್ನಬಸವ ಸ್ವಾಮೀಜಿ, ಚೆನ್ನೆನಹಳ್ಳಿಯ ಶ್ರೀ ಬಸವಲಿಂಗ ಮರ‍್ತಿ ಮಹಾಸ್ವಾಮೀಜಿ, ಗುರುಮಠಕಲ್ಲಿನ ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ, ನಂದ ಪಸಂದ ಸೇವಾಲಾಲ್ ಸ್ವಾಮೀಜಿ, ಹೆಳವ ಗುರುಪೀಠದ ಬೃಂಗೇಶ್ವರ ಸ್ವಾಮೀಜಿ, ತಿಳುವಳ್ಳಿ ಬಸವ ನಿರಂಜನ ಸ್ವಾಮೀಜಿ, ಕಲ್ಕೆರೆ ತಿಪ್ಪೇರುದ್ರ ಸ್ವಾಮೀಜಿ, ಅಗಡಿಯ ಗುರುಲಿಂಗ ಸ್ವಾಮೀಜಿ ಸಾನಿಧ್ಯವಹಿಸಿದ್ದರು.

ವೆಂಕಭೋವಿ ಕಾಲೋನಿಯಲ್ಲಿರುವ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ ಮಠದಿಂದ ಪ್ರಾರಂಭವಾದ ಮೆರವಣಿಗೆ ಅರಳಿಮರ ವೃತ್ತ, ಗಣೇಶ ದೇವಸ್ಥಾನ, ಮಂಡಿಪೇಟೆ, ವಿಜಯಲಕ್ಷ್ಮಿ ರಸ್ತೆ, ಚೌಕಿ ಪೇಟೆ ಮೂಲಕ ವೆಂಕಭೋವಿ ಕಾಲೋನಿ ತಲುಪಿದ ಮೆರವಣಿಗೆಯಲ್ಲಿ ಪೂಜಾ ಕುಣಿತ, ಹುಲಿವೇಷ, ಕಂಸಾಳೆ, ಗಾರುಡಿಗೊಂಬೆ, ಕೀಲುಕುದುರೆ, ನಂಧಿಕೊಲು ಸಮಾಳ, ಕಹಳೆ, ನಾದಸ್ವರ, ಪೋತರಾಜನಕುಣಿತಾ, ತಮಟೆ ವಾದನ, ಡೊಳ್ಳು ಕುಣಿತಾ, ವಾದ್ಯ ಸಂಗೀತಾ, ನಾಸಿಕ್ ಡೊಲು, ಹಗಲು ವೇಷ ಜಾನಪದ ಕಲಾತಂಡಗಳು ವೈಭವನ್ನು ಹೆಚ್ಚಿಸಿದವು.

TAGGED:Davanagere districtDinamana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article Davanagere Davanagere : ದುರಂತ ನಾಯಕನಾಗಲು ಸಿದ್ದು ತಯಾರಿಲ್ಲ
Next Article Applications invited DAVANAGERE JOB NEWS : ಗ್ರಾಮ ಸಹಾಯಕ ಹುದ್ದೆಗೆ ಅರ್ಜಿ ಆಹ್ವಾನ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
ವಾರದ ಕಥೆವಾರದ ಕಥೆ

Popular Posts

ದಾವಣಗೆರೆ | ಕಾರ್ಮಿಕ ಸಚಿವ ಸಂತೋಷ ಲಾಡ್‍ಗೆ ಸನ್ಮಾನ

ದಾವಣಗೆರೆ : ರಾಜ್ಯಾದ್ಯಂತ ಟೈರ್ ರಿಪೇರಿದಾರರನ್ನು ಅಸಂಘಟಿತ ವಲಯಕ್ಕೆ ಸೇರ್ಪಡೆ ಮಾಡುವ ಮೂಲಕ ಕಾರ್ಮಿಕರ ಗುರುತಿನ ಚೀಟಿ ವಿತರಣೆ ಮಾಡಲು…

By Dinamaana Kannada News

ವಿಧಾನ ಪರಿಷತ್ ಚುನಾವಣೆ : ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಶೇ 92.93 ರಷ್ಟು ಮತದಾನ

ದಾವಣಗೆರೆ,ಜೂನ್.03 :   ರಾಜ್ಯ ವಿಧಾನ ಪರಿಷತ್‍ನ ಆಗ್ನೇಯ ಶಿಕ್ಷಕರ ಕ್ಷೇತ್ರ, ನೈರುತ್ಯ ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರಕ್ಕೆ ಜೂನ್ 3…

By Dinamaana Kannada News

ಅನಧಿಕೃತವಾಗಿ ಮಗು ಸಾಕಿದ ಆರೋಪ : ಕ್ರಮಕ್ಕೆ ಸೂಚನೆ

ದಾವಣಗೆರೆ ಮೇ.30:  ಅನಧಿಕೃತವಾಗಿ  4 ತಿಂಗಳ ಮಗು ಪಡೆದು ಸಾಕುತ್ತಿದ್ದ  ತಾಲ್ಲೂಕು ದೊಡ್ಡಬಾತಿ ಗ್ರಾಮದ ದಾಸಪ್ಪರ ರಾಜಪ್ಪ ಅವರ ಪತ್ನಿ ಮಂಜುಳ…

By Dinamaana Kannada News

You Might Also Like

Dinesh K Shetty
ತಾಜಾ ಸುದ್ದಿ

ದಾವಣಗೆರೆ|ದೇಶ ಮತ್ತು ಯೋಧರ ವಿಚಾರದಲ್ಲಿ ರಾಜಕೀಯ ಸಲ್ಲ: ದಿನೇಶ್ ಕೆ ಶೆಟ್ಟಿ

By Dinamaana Kannada News
recruitment for posts in BSF
ತಾಜಾ ಸುದ್ದಿ

BSFನಲ್ಲಿ 3588 ಹುದ್ದೆಗಳ ಭರ್ಜರಿ ನೇಮಕಾತಿ

By Dinamaana Kannada News
Gold price
ತಾಜಾ ಸುದ್ದಿ

ಮೂರು ದಿನಗಳಲ್ಲಿ ಚಿನ್ನದ ಬೆಲೆ 2,400 ರೂ. ಇಳಿಕೆ

By Dinamaana Kannada News
PUC
ತಾಜಾ ಸುದ್ದಿ

ಪ್ರಥಮ PUC ಪ್ರವೇಶಾತಿಗೆ ಜುಲೈ 31 ಕೊನೆ ಅವಕಾಶ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?